Sunday, 13 July 2025

ಅಷ್ಟಕ್ಕೂ, ಲಿಂಗಾಯತ ಮತ್ತು ಇಸ್ಲಾಂ ಧರ್ಮ ಒಂದೇನಾ ? ಏನಿದರ ಹಕೀಕತ್‌ ?

 


ರವಿ ಹಂಜ್

ಚೆನ್ನಬಸವಣ್ಣನ ‘ಕರಣ ಹಸಿಗೆ’ ಮುಂತಾದ ವಚನೇತರ ಸಾಹಿತ್ಯವನ್ನು ಅರ್ಥ ಮಾಡಿ ಕೊಳ್ಳುವ ಶಕ್ತಿ ಇಲ್ಲದೆ ಅದನ್ನು ತಿರಸ್ಕರಿಸಿ ಮುಂದೆ ಚೆನ್ನಬಸವಣ್ಣ, ಅಲ್ಲಮಪ್ರಭು, ಮಹಾ ದೇವಿಯರನ್ನು ಬಹಿಷ್ಕರಿಸಲಿರುವ ನವಲಿಂಗಾಯತದ ಧುರೀಣರಿಗೆ ಮೊದಲು ಬಸವಣ್ಣನ ಒಂದು ವಚನದಲ್ಲಿ ಮುಸ್ಲಿಮರ ಪರೋಕ್ಷ ಉಖವಿದೆ ಎಂಬ ಅರಿವಿದ್ದಂತಿಲ್ಲ. ಈ ವಚನ ವನ್ನು ಓದಿದರೆ ಬಸವಣ್ಣನಿಗೆ ಇಸ್ಲಾಂ ಬಗ್ಗೆ ಯಾವ ಅಭಿಪ್ರಾಯವಿದ್ದಿತು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.


ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮ ಒಂದೇ ಇದ್ದಂತೆ! ಲಿಂಗಾಯತವೂ ಇಸ್ಲಾಮಿನಂತೆ ಬಹುದೇವತಾ ಆರಾಧನೆಯನ್ನು ಆಲ್ಲಗಳೆಯುತ್ತದೆ. ಇಷ್ಟಲಿಂಗ ಪೂಜೆಯನ್ನು ನಿಷ್ಠೆಯಿಂದ ಮಾಡಬೇಕು ಎಂದು ಬಸವಣ್ಣ ಹೇಳಿದ್ದರೆ, ಮೊಹಮ್ಮದ್ ಪೈಗಂಬರ್ ಅವರೂ ‘ಅಹು ಒಬ್ಬನನ್ನೇ ಧ್ಯಾನಿಸು’ ಎಂದು ಹೇಳಿದ್ದಾರೆ.


ಲಿಂಗಾಯತವು ಸ್ಥಾವರಗಳ, ಮೂರ್ತಿಗಳ ಗೊಡವೆ ಬೇಡ ಎಂದರೆ ಇಸ್ಲಾಂ ಸಹ ಮೂರ್ತಿಪೂಜೆ ಯನ್ನು ಅಲ್ಲಗಳೆಯುತ್ತದೆ. ಅವರಲ್ಲಿ ಜಕಾತ್ ಇದೆ, ನಮ್ಮಲ್ಲಿ ದಾಸೋಹವಿದೆ. ಅವರಂತೆಯೇ ನಾವು ಸಹ ಮಣ್ಣು ಮಾಡುವ ಶವಸಂಸ್ಕಾರ ಹೊಂದಿದ್ದೇವೆ. ಅವರಲ್ಲೂ ಆಹಾರ ನಿಯಮಗಳಿವೆ. ನಮ್ಮಲ್ಲೂ ಸಮುದ್ರದ ಉಪ್ಪು ತಿನ್ನಬಾರದು ಎಂಬುದಲ್ಲದೇ ಹಲವಾರು ಆಹಾರ ನಿಯಮಗಳಿವೆ.


ಅವರ ಗುಂಬಜ್ ರೀತಿಯಲ್ಲಿಯೇ ನಮ್ಮ ಕರಡಿಗೆಯ ಆಕಾರವಿರುವುದು. ಬಿಜಾಪುರ ಸುಲ್ತಾನನಿಗೆ ಲಿಂಗಾಯತರು ಸಹಕಾರ ನೀಡಿದ ಕಾರಣವೇ ಅವನು ವಿಜಯನಗರದ ಅರಸರನ್ನು ಸೋಲಿಸಿ ಅಲ್ಲಿಂದ ಲೂಟಿ ಮಾಡಿ ತಂದ ಬೆಳ್ಳಿಯಲ್ಲಿ ಲಿಂಗಾಯತರಿಗೆ ಬೆಳ್ಳಿ ಕರಡಿಗೆಗಳನ್ನು ಮಾಡಿಸಿಕೊಟ್ಟ. ಅದಕ್ಕೆ ಪ್ರತಿಯಾಗಿ ಲಿಂಗಾಯತರು ಶಿವಲಿಂಗದ ಆಕಾರದಲ್ಲಿದ್ದ ಲಿಂಗಕ್ಕೆ ಕಂತೆ ಕಟ್ಟಿಸಿ ಲಿಂಗಾಕಾರವನ್ನು ನಿರಾಕಾರ ಮಾಡಿದರು" ಇತ್ಯಾದಿಯಾಗಿ ಅಂತೆಕಂತೆಗಳ ಸಂಶೋಧನೆಗಳ ವ್ಯಾಖ್ಯಾನವನ್ನು ಈಗ ಲಿಂಗಾಹತ ಸಂಶೋಧಿಗರು ಮಂಡಿಸಿ ಮುಸ್ಲಿಂ ಬಾಂಧವರನ್ನು ಒಳಗೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ “ಲಿಂಗಾಯತ ಧರ್ಮ ಮತ್ತು ಇಸ್ಲಾಂ ಧರ್ಮ ಒಂದೇ" ಎಂದು ಜಾತಿಪೀಠಿ ಪಂಡಿತಶ್ರೀಗಳು ಇದಕ್ಕೆ ಪೀಠಿಕೆ ಹಾಕಿದ್ದರೆ ಈಗ ಲಿಂಗಾಹತಿಗಳ ವಕ್ತಾರ ಪಾಟೀಲ ಎನ್ನುವವರು ಇದನ್ನು ವರ್ಣಮಯ ಭಾಷೆಯಲ್ಲಿ ಚಿತ್ರೀಕರಿಸಿ ಪ್ರಸಾರ ಮಾಡುತ್ತಿದ್ದಾರೆ.


ಇವರು ನವ್ಯ ಲಿಂಗಾಯತ ಪ್ರತ್ಯೇಕ ಧರ್ಮ ಪ್ರಣೀತ ಲಿಂಗಾಹತ ಭಂಜಕ ನೀತಿಗೆ ಬದ್ಧರಾಗಿ ಹೀಗೆ ಹೇಳಿದ್ದಾರೆಯೇ ಹೊರತು ಯಾವುದೇ ಆಳ ಅಧ್ಯಯನದಿಂದಲ್ಲ. ಏಕೆಂದರೆ ಇವರ ಮತ್ತು ಲಿಂಗಾಹತ ಪ್ರತ್ಯೇಕ ಧರ್ಮ ಎನ್ನುವವರ ಗೊಂದಲಗಳ ಇಬ್ಬಗೆಯನ್ನು ಜಗತ್ತು ಆಗಲೇ ಬಲ್ಲದು. “ಉರುಳುತ್ತಿರುವವನಿಗೆ ಹುಲ್ಲುಕಡ್ಡಿಯೂ ಆಸರೆ" ಎಂಬಂತೆ ಇವರು ಸಂತಾಪ ಗಿಟ್ಟಿಸಲೋ, ಬೆಂಬಲ ಕೋರಿಯೋ ಒಟ್ಟಾರೆ ಈಗ ಮುಸ್ಲಿಮರ ಹಿಂದೆ ಬಿದ್ದಿzರೆ. ಅವರಂತೆಯೇ ತಾವು ಕೂಡ ಲಿಂಗಾಹತಿಗಳು ಎಂಬ “ಕಣ್ಣರಿಯದಿದ್ದರೂ ಕರುಳರಿಯದೇ" ಎಂಬ ಕರುಳ ಕರೆ ಇದಾಗಿರಲೂಬಹುದು.


ಚೆನ್ನಬಸವಣ್ಣನ ‘ಕರಣ ಹಸಿಗೆ’ ಮುಂತಾದ ವಚನೇತರ ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವ ಶಕ್ತಿ ಇಲ್ಲದೆ ಅದನ್ನು ತಿರಸ್ಕರಿಸಿ ಮುಂದೆ ಚೆನ್ನಬಸವಣ್ಣ, ಅಲ್ಲಮಪ್ರಭು, ಮಹಾದೇವಿಯರನ್ನು ಬಹಿಷ್ಕರಿಸಲಿರುವ ನವಲಿಂಗಾಯತದ ಧುರೀಣರಿಗೆ ಮೊದಲು ಬಸವಣ್ಣನ ಒಂದು ವಚನದಲ್ಲಿ ಮುಸ್ಲಿಮರ ಪರೋಕ್ಷ ಉಲ್ಲೇಖವಿದೆ ಎಂಬ ಅರಿವಿದ್ದಂತಿಲ್ಲ. ಈ ವಚನವನ್ನು ಓದಿದರೆ ಬಸವಣ್ಣ ನಿಗೆ ಇಸ್ಲಾಂ ಬಗ್ಗೆ ಯಾವ ಅಭಿಪ್ರಾಯವಿದ್ದಿತು ಎಂದು ಮೇಲ್ನೋಟಕ್ಕೆ ಕಂಡುಬರುತ್ತದೆ.

ಮರುದೀಕ್ಷೆ ಪಡೆದು ‘ವಿಶ್ವವಾಣಿ ಯಾಗಿ ದನಿಯೆತ್ತಿದ್ದಾನೆ ಎಂಬುದು ಸದ್ಯದ ವರ್ತಮಾನವಾಗುತ್ತಿರುವ ಚೆನ್ನಬಸವಣ್ಣನ ಕಾಲ ಜ್ಞಾನವೇ ಏನೋ!


ಮುಂದೆ ಇದೇ ಚೆನ್ನಬಸವಣ್ಣನ ಕಾಲಜ್ಞಾನ ವಚನದಂತೆಯೇ ಲಿಂಗಾಹತಿಗಳ ಸಂಕಥನ ನೆಗೆದು ಬಿದ್ದು ಸತ್ಯನಿಷ್ಠೆಯ ವೀರಶೈವವು ವಿಜೃಂಭಿಸಲಿದೆ. ಅನುಮಾನವಿದ್ದವರು ಚೆನ್ನ ಬಸವಣ್ಣನ ಕಾಲಜ್ಞಾನ ವಚನವನ್ನು ಪರಾಂಬರಿಸಬಹುದು. ಆದರೆ ಅದನ್ನು ಅರ್ಥೈಸಿ ಹೇಳುವುದು ಕೋಡಿ ಮಠದ ಹೊತ್ತಿಗೆ ನೋಡಿ ಅರ್ಥೈಸುವಷ್ಟೇ ಕಠಿಣ ಪರಿಶ್ರಮದ ಸಾಧನೆ ಎಂದಷ್ಟೇ ಸದ್ಯಕ್ಕೆ ಹೇಳಬಹುದು.


(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)


ಅಷ್ಟಕ್ಕೂ, ಲಿಂಗಾಯತ ಮತ್ತು ಇಸ್ಲಾಂ ಧರ್ಮ ಒಂದೇನಾ ? ಏನಿದರ ಹಕೀಕತ್‌ ?

  ರವಿ ಹಂಜ್ ಚೆನ್ನಬಸವಣ್ಣನ ‘ಕರಣ ಹಸಿಗೆ’ ಮುಂತಾದ ವಚನೇತರ ಸಾಹಿತ್ಯವನ್ನು ಅರ್ಥ ಮಾಡಿ ಕೊಳ್ಳುವ ಶಕ್ತಿ ಇಲ್ಲದೆ ಅದನ್ನು ತಿರಸ್ಕರಿಸಿ ಮುಂದೆ ಚೆನ್ನಬಸವಣ್ಣ, ಅಲ್ಲಮಪ್ರಭ...