Sunday, 26 February 2017

अभिनव सर्वज्ञ हर्डेकर मंजप्पा


अक्षयतृतीयेला घरोघरी साजरे होणाऱ्या बसवजयंतीला कर्नाटक गांधी म्हणून ओळखल्या जाणाऱ्या हर्डेकर मंजप्पा यांनी सार्वजनिक रुप दिले. महात्मा बसवण्णांसह शरण साहित्य जनमानसांत रुजवण्यासह कर्नाटकातील साहित्य, पत्रकारिता, समाजकार्य आणि शिक्षण क्षेत्रात त्यांचे योगदान अपूर्व आहे. त्यांची १८ फेब्रुवारी रोजी जयंती त्यानिमित्त हा लेख.
राष्ट्रकवी कुवेंपु म्हणतात, पूज्य हर्डेकर मंजप्पा हे एक ज्येष्ठ विभुती व्यक्ती.  आपले जीवनकार्य, शरण विचारांच्या आचरणाने विभुतीत्व प्राप्त केलेल्या मंजप्पा यांचा उत्तर कन्नड जिल्ह्यातील बनवासी या गावी जन्म झाला. मुलकी शिक्षणानंतर त्यांनी शिक्षकी पेशाला सुरुवात केली. मात्र, लोकमान्य टिळकांच्या स्वदेशी चळवळीने प्रभावित होऊन १९०६ मध्ये त्यांनी धनुर्धारी हे मासिक सुरू केले. त्याकाळी या मासिकाचे दहा हजार सभासद होते. विवाह केल्यास समाजकार्यात अडथळा येईल, यामुळे त्यांनी १९१० पासून निर्धारपूर्वक आजीवन ब्रह्मचर्य व्रताचे पालन केले. त्यांनी महात्मा बसवण्णांचा तत्कालीन समाजाला खरा परिचय करून दिला.  त्यासाठी संशोधनात्मक बसव चरित्र लिहिले. अक्षयतृतियेला घरोघरी साजऱ्या होणाऱ्या बसवजयंतीला त्यांनी सार्वजनिक स्वरुप दिले. १९१३ मध्ये त्यांनी दावणगेरे येथे सार्वजनिक बसवजयंती सुरू केली. सार्वजनिक बसवजयंतीचे ते उद्गाते आहेत. बसवण्णांसह शरणांचे विचार समाजमनापर्यंत पोहोचवणे हाच यामागचा  उद्देश होता.  तसेच त्यांनी बसव बोधामृत, वीरशैव समाज सुधारणे या ग्रंथांचेही लेखन केले. शरण संदेश या मासिकाच्या माध्यमातून शरण विचार घरोघरी पोहोचवण्याचा प्रयत्न केला. त्यांच्यावर केवळ शरण विचारांचा प्रभावच नव्हता तर त्यानुसार त्यांचे आचरण होते. ते बसवण्णांचे खरे अनुयायी, शरण होते. त्यामुळेच कवी द. रा. बेंद्रे त्यांच्याविषयी म्हणातात, मंजप्पा हे जन्मत: मार्गदर्शक, शिक्षक, सुधारक. ते स्वभावत: प्रयोगशील शरण. त्यांची कृती,  त्यासाठी आवश्यक ज्ञानोदय हे आमच्या प्रदेशाचा भाग्योदय आहे. तर शरण साहित्याचे अभ्यासक सिद्धय्या पुराणिक म्हणतात, मंजप्पा हे अभिनव सर्वज्ञ, त्योच लेखन समाजनिर्मिती करणारे जिवंत साहित्य – ज्वलंत साहित्य, जीवनदायिनी साहित्य होय.
पुढे महात्मा गांधी यांच्या विचाराने प्रेरित होऊन त्यांनी राष्ट्रीय शिक्षणासाठी कार्य सुरु केले. १९२७ मध्ये आलमट्टी येथे विद्यालय सुरू केले. यात केवळ औपचारिक शिक्षणच नव्हे तर जीवन शिक्षण नावाने कौशल्याधारित शिक्षण दिले जायचे. त्यांनी संपूर्ण कर्नाटकात संचार करुन ग्रामविकासावर भर दिला. व्यसनमुक्तीसाठीही कार्य केले. १९२४ मध्ये बेळगावमध्ये भरलेल्या काँग्रेस अधिवेशनाच्या आयोजनात त्यांच्या बसवेश्वर सेवा दलाची अग्रगण्य भूमिका होती. त्यांनी महात्मा गांधी, भगवना बुद्ध यांचेही चरित्रलेखन केले. तसेच खादी, ब्रह्मचर्य, अहिंसा, सत्याग्रह धर्म हे ग्रंथही लिहिले. त्यांनी एकूण ४० हून अधिक पुस्तकांचे लेखन केले. त्यांनी उद्योग, बाल साहित्यावर आधारित मासिक सुरु केले.  कळेद नन्न ३० वर्षगळ काणिके हे त्यांचे आत्मचरित्र कन्नड साहित्यातील पहिले आत्मचरित्र आहे. महात्मा गांधी यांचे विचारही जनमानसांत रुजवण्यात त्यांचे मोठे योगदान होते. त्यांच्या विचारांचा प्रभाव आजही कन्नड जनमनावर दिसून येतो. त्यांचे ३ जानेवारी १९४७ रोजी आलमट्टी येथे निधन झाले. कर्नाटक सरकारने तेथे त्यांचे स्मारक उभारले आहे.

वारद यांचे चरित्रलेखन
हर्डेकर मंजप्पा यांनी वारद मल्लप्पनवर चरित्रे या नावाने पुण्यश्लोक अप्पासाहेब वारद यांच्या चरित्राचे लेखन केले. महात्मा बसवणांसह शरण विचाराविषयी अत्यंतिक आस्था, त्याच्या प्रचार, प्रसारासाठी प्रयत्न व त्यानुसार आचरण हे हर्डेकर व वारद यांच्यातील समान स्थायीभाव होता.

Saturday, 25 February 2017

ವೀರಶೈವ ಸಂಪ್ರದಾಯ: ಕೆಲವು ಒಗಟುಗಳು

 – ಚೈತ್ರ, ಕುವೆಂಪು ವಿಶ್ವವಿದ್ಯಾನಿಲಯ.
ಕರ್ನಾಟಕದಲ್ಲಿ ವೀರಶೈವ ಸಮುದಾಯವು ಹಲವಾರು ಚರ್ಚೆಗೆ ಒಳಪಟ್ಟಿದೆ. ತಮ್ಮ ಅಸ್ಮಿತೆಯ ಹುಡುಕಾಟಕ್ಕಾಗಿ ಶತಮಾನಗಳಿಂದ ಹೆಣಗಾಡುತ್ತಿರುವಂತೆ ಈ ಸಮುದಾಯ ಮೇಲ್ನೋಟಕ್ಕೆ ಕಂಡುಬಂದರೂ ಸಹ ಅದು ಭಾಗಶಃ ಸತ್ಯವಾದುದು. ಕಾರಣ, ಸಮುದಾಯಗಳೇ ಸ್ವಯಂ ಪ್ರೇರಣೆಯಿಂದ ತಮಗೊಂದು ಅಸ್ಮಿತೆ ಬೇಕೆಂಬ ಹಂಬಲದಿಂದ ನಡೆಸಿರುವ ಹೋರಾಟದಂತೆ ಅದು ಗೋಚರಿಸುವುದಿಲ್ಲ. ಬದಲಿಗೆ, ಸಮುದಾಯದ ನಾಯಕರುಗಳು, ವಿದ್ವಾಂಸರು, ರಾಜಕೀಯ ನೇತಾರರು, ಹಾಗೂ ಸಾಹಿತಿಗಳು ಇಂತಹ ಹೋರಾಟದ ಮಂಚೂಣಿಯಲ್ಲಿರುವುದು ಕಣ್ಣಿಗೆ ಕಾಣುವ ಸತ್ಯ. ಅವರ ಹೋರಾಟ ಅಸ್ಮಿತೆಗಾಗಿಯೋ ಅಥವಾ ಮತ್ಯಾವುದಾದರೂ ಉದ್ದೇಶಕ್ಕಾಗಿಯೋ ಎಂಬುದನ್ನು ಅರ್ಥೈಸಿಕೊಳ್ಳುವ ಮುನ್ನ ಆ ಸಮುದಾಯದ ಕುರಿತು ಯಾವ ನೆಲೆಗಳಲ್ಲಿ ಚರ್ಚೆಗಳಾಗಿವೆ ಎಂಬುದನ್ನು ನೋಡಬೇಕಾಗುತ್ತದೆ.
ಪ್ರಸ್ತುತ ಲೇಖನದಲ್ಲಿ ವೀರಶೈವ ಸಮುದಾಯದ ಕುರಿತ ವಿವರಣೆಗಳನ್ನು ಪರೀಶಿಲಿಸುವ ಮೂಲಕ ಆ ಸಮುದಾಯವು ನಮ್ಮ ಅರ್ಥಗ್ರಹಿಕೆಗೆ ಬರಲು ಸಾಧ್ಯವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು. ಈವರೆಗಿನ ವಿವರಣೆಗಳನ್ನು ಮೆಲುಕುಹಾಕಿದರೆ, ಅವುಗಳು ಪರಸ್ಪರ ವಿರುದ್ಧವಾಗಿಯೂ, ವಿಭಿನ್ನವಾಗಿಯೂ ಮತ್ತು ಕೆಲವು ಬಾರಿ ಒಂದಕ್ಕೊಂದು ಸಂಬಂಧವೇ ಇಲ್ಲದ ರೀತಿಯಲ್ಲಿ ನಿರೂಪಿತವಾಗಿರುವುದು ಗೋಚರಿಸುತ್ತದೆ. ಅಂದರೆ ಸ್ಪಷ್ಟವಾಗಿ ಅದೊಂದು ಒಗಟಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆ ಒಗಟಿನ ಸ್ವರೂಪವನ್ನು ಅರ್ಥೈಸುವ ಪ್ರಯತ್ನವನ್ನು ಮಾಡಲಾಗುವುದು. ವೀರಶೈವ ಅಧ್ಯಯನಗಳು ಹಲವು ಆಯಾಮಗಳಲ್ಲಿ ವಿವಿಧ ಬಗೆಯಲ್ಲಿ ವೀರಶೈವರನ್ನು ನಿರೂಪಿಸುತ್ತವೆ. ಅಂತಹ ಚರ್ಚೆಗಳಲ್ಲಿ ಬಹುಮುಖ್ಯ ವಿಷಯವೆಂದರೆ, ವೀರಶೈವರನ್ನು ಎರಡು ರೀತಿಯಲ್ಲಿ ಗುರುತಿಸುತ್ತಿರುವುದಾಗಿದೆ. ಅಂದರೆ ವೀರಶೈವ ಧರ್ಮವು ಹಿಂದೂ ಧರ್ಮದ ಭಾಗವೆಂದು ಒಂದು ಗುಂಪು ಪ್ರತಿಪಾದಿಸಿದರೆ, ಅದಕ್ಕೆ ಪ್ರತಿಯಾಗಿ, ವೀರಶೈವ ಧರ್ಮ ಹಿಂದೂ ಧರ್ಮವನ್ನು ಪ್ರತಿಭಟಿಸಿ ಹುಟ್ಟಿರುವ ಧರ್ಮವಾಗಿದ್ದು, ಇದು ಪ್ರತ್ಯೇಕವಾದ ಸ್ವತಂತ್ರವಾದ ಧರ್ಮವಾಗಿದೆ ಎಂದು ಇನ್ನೊಂದು ಗುಂಪು ಪ್ರತಿಪಾದಿಸುತ್ತದೆ. ಈ ಎರಡು ರೀತಿಯ ಚಿಂತನೆಗಳನ್ನು ಹಲವಾರು ಚಿಂತಕರು ವಿಭಿನ್ನ ನೆಲೆಗಳಲ್ಲ್ಲಿ ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಮೇಲೆ ತಿಳಿಸಿದ ಎರಡು ರೀತಿಯ ಸಮರ್ಥನೆಗಳನ್ನು(ವಾದಗಳನ್ನು) ತೀರ ಸಂಕ್ಷಿಪ್ತವಾಗಿ ಉದಾಹರಣೆಯ ಮೂಲಕ ನೋಡುವುದಾದರೆ, ಲಿಂಗಾಯತ ಅಧ್ಯಯನಕಾರರಾದ ಚಿದಾನಂದ ಮೂರ್ತಿಯವರು: ವೀರಶೈವ ಧರ್ಮವು ಹಿಂದೂ ಧರ್ಮದ ಒಂದು ಭಾಗ. ವೀರಶೈವರು ಹಿಂದೂಗಳಲ್ಲ ಎಂದು ನಿರ್ಧಿಷ್ಟ ಪಡಿಸಲು ಸಾಧ್ಯವಿಲ್ಲ.(2000: ಪು-4). ವೀರಶೈವ ಲಿಂಗಾಯತ ಧರ್ಮದ ಆಚರಣೆಯೂ ಹಿಂದೂ ಧರ್ಮದ ಅಡಿಯಲ್ಲೇ ಇದೆ. ಬಸವಣ್ಣ ಹಿಂದೂ ಧರ್ಮದ ಕೊರತೆಗಳ ವಿರುದ್ಧ ಹೋರಾಡಿದವರು. ಹಿಂದೂ ಧರ್ಮವನ್ನು ಎಂದೂ ಅವರು ವಿರೋದಿಸಿಲ್ಲ. ತಾವೂ ಕೂಡ ಹಿಂದೂ ಎಂದು ಹೇಳಿಕೊಂಡಿದ್ದಾರೆ(ವಿಜಯವಾಣಿ,5/10/2013:ಪು-6) ಎಂದು ವಿವರಿಸುತ್ತಾರೆ. ಹಾಗೆಯೇ ವಚನ ಪಿತಮಹಾರಾದ ಫ.ಗು ಹಳಕಟ್ಟಿಯವರು ಕೂಡ ವಚನಕಾರರು ಹಿಂದೂ ಧರ್ಮದಲ್ಲಿಯ ಒಂದು ಬಗೆಯ ವಿಚಾರವಾದಿಗಳು(2007,ಪು-11)  ಬಿಂಬಿಸುತ್ತಾರೆ. ಚಂದ್ರಶೇಖರ ನಾಗರಾಳ ಮಠರವರು ಇನ್ನೂ ಕೆಲವು ಚಿಂತಕರು ವೀರಶೈವ ಧರ್ಮ ಹಿಂದೂ ಧರ್ಮದ ಒಂದು ಸಹ ಧರ್ಮ ಅಥವಾ ಅಂಗ ಧರ್ಮ. ಎಂದು ಹೇಳುವ ಮೂಲಕ ವೀರಶೈವರನ್ನು ಹಿಂದೂ ಧರ್ಮದ ಭಾಗವಾಗಿ ಗುರುತಿಸುತ್ತಾರೆ.
ಈ ಮೇಲಿನ ವಾದಕ್ಕೆ ವ್ಯತಿರಿಕ್ತವಾಗಿ ಕಲಬುರ್ಗಿ ಯವರು ಲಿಂಗಾಯತರು ಧಾರ್ಮಿಕವಾಗಿ ನೂರಕ್ಕೆ ನೂರು ಹಿಂದೂಗಳಲ್ಲ… ಲಿಂಗಾಯತವು ಹಿಂದೂ ಜನ್ಯವಲ್ಲ(2010, ಪು-123) ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ಹಾಗೆಯೇ ಮಾತೆ ಮಹಾದೇವಿಯವರು: ಲಿಂಗಾಯತ ಧರ್ಮವು ಹಿಂದೂ ಹಾಗೂ ವೀರಶೈವರಿಂದ ಹೊರತಾಗಿದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗಬೇಕು.. ಲಿಂಗಾಯತ ಒಂದು ಸ್ವತಂತ್ರ್ಯ ಧರ್ಮವಾಗಿದ್ದು, ಹಿಂದು ಧರ್ಮದೊಳಗಿನ ಜಾತಿ, ಮತ, ಪಂಥದಂತಿಲ್ಲ. ಬಸವಣ್ಣ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ(ವಿಜಯವಾಣಿ, 16/2/2014, ಪು-7) ಎಂಬುದಾಗಿ ತಿಳಿಸುತ್ತಾರೆ. ಇದರಂತೆಯೇ ವೀರಶೈವ ಸಭೆಗಳು ಸಂಘಗಳು ಮತ್ತು ಲಿಂಗಾಯತ ಮಠಗಳು, ಮಠದ ಸ್ವಾಮೀಜಿಗಳು (ಸಿರಿಗೆರೆಯ ಬೃಹನ್ಮಠ, ಸುತ್ತೂರಿನ ವೀರಸಿಂಹಾಸನ ಮಠ, ಕೊಟ್ಟೂರೇಶ್ವರ ಸಂಸ್ಥಾನ ಮಠ, ಹೇಮಕೂಟ, ನಾಗನೂರು ರುದ್ರಾಕ್ಷಿಮಠ), ಸ್ವಾಮೀಜಿಗಳು (ಶ್ರೀ ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ, ಸಂಗನ ಬಸವ ಮಹಾಸ್ವಾಮಿ, ಶ್ರೀ ಮ.ನಿ.ಪ್ರ. ಸಿದ್ದರಾಮಪ್ಪ ಮಹಾಸ್ವಾಮಿಗಳು) ಇನ್ನೂ ಇತರರು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಮಾಡಬೇಕು. ವೀರಶೈವರು ಹಿಂದುಗಳಲ್ಲ ಎಂಬುದಾಗಿ ಕರೆ ನೀಡುತ್ತಾರೆ. ಅಂತೆಯೇ ವೀರಶೈವ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಬೇಕಾಗಿ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುತ್ತಿದ್ದಾರೆ.
ಒಂದೇ ಆಧಾರವನ್ನು ಇಟ್ಟುಕೊಂಡು ಬೆಳೆದು ಬಂದ ಒಂದು ಪರಂಪರೆಯ ಕುರಿತಾಗಿ ಇರುವ ವಿವರಣೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಿನದಾಗಿ ಕಂಡುಬರುತ್ತಿವೆ. ಅಂದರೆ, ಪಂಚಪೀಠದವರು, ಫ.ಗು.ಹಳಕಟ್ಟಿ, ಚಿದಾನಂದ ಮೂರ್ತಿ, ತಿಪ್ಪೆರುದ್ರಸ್ವಾಮಿ, ಎಲ್ ಬಸವರಾಜು ಕೆಲವು ಸಾಹಿತಿಗಳು ಮುಂತಾದವರ ವಾದ ಒಂದು ರೀತಿಯದಾದರೆ, ಇದಕ್ಕೆ ವಿರುದ್ಧವಾಗಿ ವಿರಕ್ತ ಪೀಠದವರು, ಕಲಬುರ್ಗಿ, ಹಿರೇಮಲ್ಲೂರು ಈಶ್ವರನ್, ಮುಂತಾದ ಚಿಂತಕರದು ಅದಕ್ಕೆ ವಿರುದ್ಧವಾದ ಮತ್ತೊಂದು ರೀತಿಯ ವಾದವಾಗಿದೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಹೇಳುವಾಗ ಕೊಡುವ ಸಮರ್ಥನೆಗಳೆಂದರೆ, ವೀರಶೈವ ಧರ್ಮದ ಸ್ಥಾಪಕ ಬಸವಣ್ಣ. ಈ ಧರ್ಮವು ಹಿಂದೂ ಧರ್ಮದ ವೇದ, ಶಾಸ್ತ್ರಗಳನ್ನು, ಜಾತಿವ್ಯವಸ್ಥೆ, ವರ್ಣವ್ಯವಸ್ಥೆಯನ್ನು, ಪುರೋಹಿತಶಾಹಿತ್ವವನ್ನು, ಆಶ್ರಮ ವ್ಯವಸ್ಥೆಯನ್ನು ವಿರೋಧಿಸಿ ಬೆಳೆದು ಬಂದಿರುವ ಧರ್ಮ. ಆದ್ದರಿಂದ ಇದು ಸ್ವತಂತ್ರವಾದ ಪ್ರತ್ಯೇಕವಾದ ಧರ್ಮ ಎಂಬುದಾಗಿ ತಮ್ಮ ವಾದಗಳನ್ನು ಮಂಡಿಸುತ್ತಾ ಬಂದಿದ್ದಾರೆ ಮತ್ತು ಈ ರೀತಿಯ ಚಚರ್ೆಗಳು ನಡೆಯುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಇತ್ತೀಚೆಗೆ ವೀರಶೈವಿಸಂನ್ನು ಪ್ರತ್ಯೇಕವಾದ ಧರ್ಮ(ರಿಲಿಜನ್) ಎಂಬ ಸಮರ್ಥನೆಯಲ್ಲಿ ಹೊಸತೊಂದು ವಾದ ಪ್ರಚಲಿತಕ್ಕೆ ಬಂದಿದೆ. ಅದೆಂದರೆ, ಹಿಂದೂ ಧರ್ಮ ಎನ್ನುವುದೇ ಅಸ್ತಿತ್ವದಲ್ಲಿ ಇಲ್ಲ. ಈ ಧರ್ಮದ ಅಸ್ತಿತ್ವಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ ಎಂಬುದಾಗಿ ಹೇಳುವ ಮೂಲಕ ವೀರಶೈವಿಸಂನ್ನು ಒಂದು ಸ್ವತಂತ್ರ ಧರ್ಮವನ್ನಾಗಿಸುವ ಪ್ರಯತ್ನ ನಡೆದಿದೆ. ವೀರಶೈವರು ಮತ್ತು ಹಿಂದೂಗಳ ಸಂಬಂಧದ ಕುರಿತಾಗಿ ಮಾತಾನಾಡುವಾಗ ಚಿಂತಕರು ಹಿಂದೂ ಧರ್ಮ ಎನ್ನುವುದೊಂದು ಇದೆಯೆ? ಹಿಂದೂ ಧರ್ಮದ ಕುರಿತ ಸರ್ವಾನುಮತವಾದ ವ್ಯಾಖ್ಯೆ ಯಾವುದಾದರು ಇದೆಯೆ? ಎಂಬಂತಹ ಪ್ರಶ್ನೆಗಳನ್ನು ತೆಗೆದುಕೊಂಡು, ಆ ಪ್ರಶ್ನೆಗಳಿಗೆ ನಕಾರಾತ್ಮಕವಾದ ಉತ್ತರವನ್ನು ನೀಡುವ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. (ಹೆಚ್.ಎಸ್.ಶಿವಪ್ರಕಾಶ್, 17/1/2014, ಪ್ರಜಾವಾಣಿ) ಆ ವಾದದಲ್ಲಿ ಇರುವ ಅಭಿಪ್ರಾಯಗಳನ್ನು ಸಾರಾಂಶೀಕರಿಸಿ ಈ ರೀತಿಯಾಗಿ ಹೇಳಬಹುದು.
ಹಿಂದೂ ಎಂಬ ಶಬ್ದವು ವಸಾಹತುಕಾಲದಲ್ಲಿ ಹೇರಲ್ಪಟ್ಟಿರುವಂತದ್ದು, ಇದನ್ನು ಕೆಲವು ವಿದ್ವಾಂಸರು ತಮ್ಮ ಬರಹಗಳಲ್ಲಿ ಹೇಳಿದ್ದಾರೆ. ವೇದ, ಶಾಸ್ತ್ರ, ಪುರಾಣಗಳು, ಉಪನಿಷತ್ತು, ದಿವ್ಯಾಗಮಗಳು ಯಾವುದರಲ್ಲಿಯೂ ಹಿಂದೂ ಧರ್ಮದ ಕುರುಹು ಇಲ್ಲ. ಕವಿಗಳ ಯಾವ ಕಾವ್ಯ ಶಾಸ್ತ್ರಗಳಲ್ಲಿಯೂ ಹಿಂದೂ ಪದದ ಪ್ರಯೋಗವಿಲ್ಲ. ಬಹುಸ್ತರೀಯ ಜನಗಳಿಗೆ ಸಮಾನ, ಸಾಮಾನ್ಯವಾದ ಆಚರಣೆಗಳು ಇಲ್ಲ.ವಸಹಾತುಶಾಹಿಗಳು, ಹಲ್ಲೆಕೊರರು, ಆಡಳಿತಗಾರರು ಹೇರಿರುವ ಶಬ್ದವನ್ನು ನಾವು ನಮ್ಮದೇ ಎಂಬಂತೆ ಭಾವಿಸಿದ್ದೇವೆ. ಆಧುನಿಕ ಭಾರತದಲ್ಲಿ ಹಲವು ಜನ ತಮ್ಮದೇ ಆದ ರೀತಿಯಲ್ಲಿ ಹಿಂದೂ ಧರ್ಮದ ವ್ಯಾಖ್ಯಾನವನ್ನು ಮಾಡಿದ್ದಾರೆ. ಅಂದರೆ, ಇದು ಅವರ ನಿರ್ಮಾಣವಾಗಿದೆ.ಆದಿವಾಸಿ ಬುಡಕಟ್ಟು ಜನಗಳ ಆಚರಣೆಗಳು ಹಿಂದೂ ಧರ್ಮದ ಆಚರಣೆಗಳಿಗಿಂತ ಭಿನ್ನವಾಗಿವೆ ಹಾಗೆಯೆ ವೀರಶೈವರಿಗೂ ತಮ್ಮದೇ ಆದ ಸ್ಪಷ್ಟವಾದ ಆಚಾರ ವಿಚಾರಗಳಿವೆ. ಇದರ ಜೊತೆಗೆ ಕಬೀರಪಂಥ, ರಾಯ್ ದಾಸ್ ಪಂಥ ಭೀಮಾಭಾಯಿ ಮುಂತಾದ ಪಂಥಗಳಿಗೂ ತಮ್ಮದೆ ಆದ ಆಚಾರ ವಿಚಾರಗಳಿವೆ. ಆದ್ದರಿಂದ ಇಂತಹ ಪಂಥಗಳನ್ನೂ ಸ್ವತಂತ್ರ ಧರ್ಮವೆಂದು ಗುರುತಿಸಬೇಕು ಎಂಬಂತಹುಗಳಾಗಿವೆ. ಇದರ ಮೂಲಕವಾಗಿ ಹಿಂದೂ ಧರ್ಮವಿಲ್ಲ ಎಂಬ ತೀರ್ಮಾನಕ್ಕೆ ಬರುತ್ತಾರೆ.
ಇಂತಹ ಸಮರ್ಥನೆಗಳಲ್ಲಿ ಹಲವಾರು ಸಮಸ್ಯೆಗಳಿವೆ. ಮೊದಲನೆಯದಾಗಿ, ವೇದ, ಶಾಸ್ತ್ರ, ಪುರಾಣಗಳು, ಉಪನಿಷತ್ತು, ದಿವ್ಯಾಗಮಗಳು ಯಾವುದರಲ್ಲಿಯೂ ಹಿಂದೂ ಧರ್ಮದ ಕುರುಹು ಇಲ್ಲ. ಕವಿಗಳ ಯಾವ ಕಾವ್ಯ ಶಾಸ್ತ್ರಗಳಲ್ಲಿಯೂ ಹಿಂದೂ ಪದದ ಪ್ರಯೋಗವಿಲ್ಲ. ಹಾಗಾಗಿ ಹಿಂದೂ ಧರ್ಮದ ಅಸ್ತಿತ್ವ ಇಲ್ಲ ಎಂದು ಹೇಳುವ ಚಿಂತಕರು ವಚನ ಚಳುವಳಿಯ ಕುರಿತಾಗಿ ಮಾತನಾಡುವಾಗ ಮಾತ್ರ, ವಚನ ಚಳುವಳಿಯು ಜಾತಿ ವಿರೋಧಿ ಹೋರಾಟವಲ್ಲ ಎಂಬುದನ್ನು ತೀರ್ಮಾನಿಸಲು ವಚನಗಳಲ್ಲಿ ಎಷ್ಟುಬಾರಿ ಜಾತಿ, ಕುಲ ಎಂಬ ಶಬ್ದಗಳನ್ನು ಬಳಸಿದ್ದಾರೆ ಎಂಬುದು ಆಧಾರವಾಗುವುದಿಲ್ಲ ಎನ್ನುತ್ತಾರೆ. ಅವುಗಳ ಸಂಖ್ಯೆ ವಿರಳವೆಂಬುದು ಅವುಗಳ ಪ್ರಾಮುಖ್ಯತೆಯನ್ನು ಕುಂದಿಸುವುದಿಲ್ಲ. ಹಾಗೂ ಅಧಿಕ ಸಂಖ್ಯೆಯ ವಚನಗಳಲ್ಲಿ ಜಾತಿ ಜಗಳಕ್ಕೆ ತೊಡಗಿಲ್ಲವೆಂದ ಮಾತ್ರಕ್ಕೆ ಅವರಿಗೆ ಆ ಬಗ್ಗೆ ಕಾಳಜಿಯೆ ಇಲ್ಲ ಎಂಬ ತೀರ್ಮಾನಕ್ಕೆ ಬರುವುದು ಸರಿಯಲ್ಲ ಎಂದು ವಾದಿಸುತ್ತಾರೆ. ಆಧಾರಗಳ ಮೇಲೆ ನಿಂತ ಐತಿಹಾಸಿಕ ದೃಷ್ಟಿ ಒಂದು ಮಟ್ಟದವರೆಗೆ ಮಾತ್ರ ಮುಖ್ಯ ಎಂಬುದಾಗಿಯೂ ಹೇಳುತ್ತಾರೆ. ಆದರೆ ಇಲ್ಲಿ ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಮಾತನಾಡುವಾಗ ಮಾತ್ರ ಹಿಂದೂ ಎಂಬ ಪದ ಎಷ್ಟುಬಾರಿ ಪದ ಪ್ರಯೋಗವಾಗಿದೆ, ಎಂಬುದರ ಮೂಲಕ ಅಂಕಿ ಸಂಖ್ಯೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಾ ಹಿಂದೂ ಧರ್ಮ ಇಲ್ಲ ಎಂಬ ತೀರ್ಮಾನಕ್ಕೆ ಬರುತ್ತಿದ್ದಾರೆಂದರೆ ಅವರ ವಾದದ ಗ್ರಹಿಕೆಯಲ್ಲಿಯೆ ವಿರೋಧಭಾಸವಿರುಂತೆ ಕಾಣುತ್ತಿದೆ. ವಚನಗಳು ಜಾತಿವಿರೋಧ ಮಾಡಿವೆ ಎಂದು ತೋರಿಸಲು ಜಾತಿಯ ಕುರಿತ ಅಂಕಿಸಂಖ್ಯೆಗಳು ಅಗತ್ಯವಿಲ್ಲ ಎಂದು ಒಂದು ಕಡೆ, ಹಿಂದೂ ಧರ್ಮದ ಅಸ್ತಿತ್ವ ಇಲ್ಲ ಎಂದು ಹೇಳಲು ಹಿಂದೂ ಶಬ್ದದ ಬಳಕೆಯ ಅಂಕಿ ಸಂಖ್ಯೆಗಳು ಅಗತ್ಯ ಎಂದು ಇನ್ನೊಂದು ಕಡೆ ಪ್ರತಿಪಾದಿಸುವುದು ವಿಪಯರ್ಾಸವಲ್ಲವೆ?
ಎರಡನೆಯದಾಗಿ, ಅವರ ವಾದದಂತೆ ಹಿಂದೂಯಿಸಂ ಇಲ್ಲ ಎಂಬುದನ್ನೇ ಒಪ್ಪಿಕೊಂಡರೂ ಕೂಡ, ಹಿಂದೂಯಿಸಂ ಇಲ್ಲ ಎಂದ ಮಾತ್ರಕ್ಕೆ ವೀರಶೈವಿಸಂ ಇದೆ ಎಂಬ ತೀರ್ಮಾನಕ್ಕೆ ಬರುವುದು ಎಷ್ಟು ಉಚಿತವಾದದ್ದು? ಉದಾಹರಣೆಗೆ: ಒಂದು ಲೋಟದಲ್ಲಿ ನೀರಿಲ್ಲ ಎಂದಮಾತ್ರಕ್ಕೆ ಆ ಲೋಟದಲ್ಲಿ ಹಾಲಿದೆ ಎಂದು ಭಾವಿಸಲು ಸಾಧ್ಯವೆ? ಇಲ್ಲ ಎನ್ನುವ ವಸ್ತು ಅಸ್ತಿತ್ವದಲ್ಲಿರುವ ವಸ್ತುವಿಗೆ ಆಧಾರವಾಗುತ್ತದೆಯೆ? ಹಾಗೆಯೇ ಇರುವ ವಸ್ತು ಇಲ್ಲದಿರುವ ವಸ್ತುವಿಗೆ ಆಧಾರವಾಗಲು ಸಾಧ್ಯವೆ? ಹಿಂದೂಯಿಸಂ ಇಲ್ಲವೆಂದ ತಕ್ಷಣ ಅದು ವೀರಶೈವಿಸಂನ ಅಸ್ತಿತ್ವಕ್ಕೆ ಸಾಕ್ಷ್ಯವಾಗಲು ಹೇಗೆ ಸಾಧ್ಯ? ವೀರಶೈವಿಸಂ ಪ್ರತ್ಯೇಕ ಧರ್ಮವಾದ ಪಕ್ಷದಲ್ಲಿ ಹಿಂದೂಯಿಸಂನ ಅಸ್ತಿತ್ವ ಇರಲಿ ಅಥವಾ ಇಲ್ಲದೆ ಇರಲಿ ಅದನ್ನು ಹೊರತುಪಡಿಸಿಯೂ ವೀರಶೈವಿಸಂನ ಅಸ್ತಿತ್ವವನ್ನು ತೋರಿಸಲು ಸಾಧ್ಯವಾಗಬೇಕು, ಇಲ್ಲವೆಂದರೆ ವೀರಶೈವಿಸಂನ ಉಳಿವಿಗೆ ಹಿಂದೂಯಿಸಂ ಅಸ್ತಿತ್ವ ಅಥವಾ ಅಸ್ತಿತ್ವರಹಿತತೆಯು ಆಧಾರವಾಗುತ್ತದೆ ಎನ್ನುವುದನ್ನಾದರೂ ಸಾಧಿಸಿ ತೋರಿಸಬೇಕಾಗುತ್ತದೆ.
ವೀರಶೈವರಿಗೂ ತಮ್ಮದೇ ಆದ ಸ್ಪಷ್ಟವಾದ ಆಚಾರ ವಿಚಾರಗಳಿವೆ. ಆದ್ದರಿಂದ ಪ್ರತ್ಯೇಕ ಧರ್ಮವೆಂದು ಗುರುತಿಸಬೇಕು, ಹಿಂದೂ ಧರ್ಮದಲ್ಲಿರುವುದನ್ನು ಒಪ್ಪಿ ನಡೆಯಲು ಸಾಧ್ಯವಿಲ್ಲ ಎಂಬುದಾಗಿ ತಿಳಿಸುತ್ತಾರೆ. ಆದರೆ ನಮ್ಮ ಭಾರತೀಯ ಸಂಸ್ಕೃತಿಯ ತುಂಬೆಲ್ಲ ಹಲವು ಸಂಪ್ರದಾಯಗಳಿರುವುದನ್ನು ನಾವು ಕಾಣುತ್ತೇವೆ. ಬಹು ಸಂಸ್ಕೃತಿಗಳ ದೇಶವಾಗಿ ಭಾರತವನ್ನು ಗುರುತಿಸುತ್ತೇವೆ. ಈ ಒಂದೊಂದು ಸಂಪ್ರದಾಯಗಳಿಗೂ ತಮ್ಮದೇ ಆದ ನಿರ್ಧಿಷ್ಟವಾದ ಆಚಾರ-ವಿಚಾರಗಳಿವೆ. ಪ್ರತಿಯೊಂದು ಇನ್ನೊಂದರಿಂದ ಬೇರ್ಪಡಿಸಿಕೊಳ್ಳಲು ಇಚ್ಚಿಸುತ್ತವೆ. ಹಲವಾರು ಆಧ್ಯಾತ್ಮಿಕ ಸಂಪ್ರದಾಯಗಳಿದ್ದಂತೆ ವೀರಶೈವ ಸಂಪ್ರದಾಯವು ಇದೆ ಎಂದು ಹೇಳಿದರೆ ಅದರ ಕುರಿತು ಹೊಸ ಒಳನೋಟಗಳು ಉಗಮವಾಗಬಹುದು. ಆದರೆ ಈ ಮಾರ್ಗವನ್ನು ಬಿಟ್ಟು, ಹಿಂದೂ ಧರ್ಮದ ಭಾಗ ಅಥವಾ ಅಲ್ಲವೆಂದು ವಾದಿಸುವ ಮೂಲಕ ಏನನ್ನು ಸಾಧಿಸಲು ಸಾಧ್ಯ? ಈಗಾಗಲೇ ಮಠಗಳ ಸ್ವಾಮಿಗಳು ಸೇರಿದಂತೆ ಹಲವು ಚಿಂತಕರು ವೀರಶೈವಿಸಂನ್ನು ಪ್ರತ್ಯೇಕ ಧರ್ಮವೆಂದು(ರಿಲಿಜನ್) ಗುರುತಿಸಿದ್ದಾರೆ. ಹಾಗೆಯೆ ಇನ್ನೊಂದು ಕಡೆ ಅನೇಕ ಸಮ್ಮೇಳನಗಳನ್ನು ಮಾಡುವ ಮೂಲಕ, ವೀರಶೈವರನ್ನು ಪ್ರತ್ಯೇಕಗೊಳಿಸಬೇಕು, ಸ್ವತಂತ್ರ ಧರ್ಮವೆಂದು ಘೋಷಿಸಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವುದನ್ನು ಕಾಣುತ್ತೇವೆ. ಒಂದು ವೇಳೆ ಮೇಲೆ ನೋಡಿದ ವಾದವನ್ನೇ(ಹಿಂದೂಯಿಸಂ ಅಸ್ತಿತ್ವದಲ್ಲಿ ಇಲ್ಲ) ಮುಂದೊತ್ತಿದರೆ, ಈ ಮುಂದಿನ ಮತ್ತೊಂದು ಸಂದಿಗ್ದ ನಮ್ಮ ಮುಂದೆ ಬರುತ್ತದೆ. ಹಿಂದೂ ಧರ್ಮವೇ ಇಲ್ಲದ ಮೇಲೆ ಮತ್ತು ವೀರಶೈವಿಸಂ ಸ್ವತಂತ್ರ ಧರ್ಮವೇ ಆದಮೇಲೆ ಅದನ್ನು ಯಾವುದರಿಂದ ಪ್ರತ್ಯೇಕಗೊಳಿಸಬೇಕು? ಹಾಗೂ ಯಾವುದರ ಭಾಗವಲ್ಲ ಎಂದು ನಡೆಯುತ್ತಿರುವ ಚರ್ಚೆಯ ಸ್ವರೂಪವೇನು? ಎಂಬುದೇ ಮತ್ತಷ್ಟು ಕಗ್ಗಾಂಟಾಗುತ್ತದೆ.
ವೀರಶೈವರ ಕುರಿತಾಗಿ ಮಾತನಾಡುತ್ತಿರುವ ಎರಡು ಕಡೆಯ ಚಿಂತಕರು ಅಂದರೆ ವೀರಶೈವರನ್ನು ಹಿಂದೂ ಧರ್ಮದ ಭಾಗವಾಗಿ ಮತ್ತು ಅದೊಂದು ಸ್ವತಂತ್ರ ಧರ್ಮವಾಗಿ ಚರ್ಚೆಗೊಳಗಾಗಿರುವ ಎರಡುವಾದಗಳು ಪರಸ್ಪರ ವಿರುದ್ಧವಾಗಿ ಕಂಡರೂ, ಅವೆರಡು ಒಂದೇ ಹಾದಿಯಲ್ಲಿಯೆ ಇವೆ ಎಂದು ಹೇಳಬಹುದು. ಪ್ರಸ್ತುತ ಚರ್ಚೆಯಲ್ಲಿ ವಿರೋಧಿ ಗುಂಪುಗಳು ತೆಗೆದುಕೊಳ್ಳುವ ಕಾರಣಗಳು, ತೋರಿಸುತ್ತಿರುವ ಲಕ್ಷಣಗಳನ್ನು ಗಮನಿಸಿದರೆ, ಇವುಗಳು ಸೆಮೆಟಿಕ್ ರಿಲಿಜನ್ಗಳನ್ನು ಮಾದರಿಯಾಗಿಟ್ಟುಕೊಂಡು ರಿಲಿಜನ್ ಚೌಕಟ್ಟಿನ ನೆಲೆಯಲ್ಲಿಯೆ ಮಾತನಾಡುತ್ತಿದ್ದಾರೆ ಎಂಬುದು ಮನವರಿಕೆಯಾಗುತ್ತದೆ. ಉದಾ: ಧರ್ಮಸ್ಥಾಪಕ, ಧರ್ಮಗ್ರಂಥ, ಆಚಾರ-ವಿಚಾರ ಮುಂತಾದವು. ಈ ಮೂಲಕವಾಗಿ ಎರಡು ಗುಂಪುಗಳು ಒಂದೇ ಮಾರ್ಗದಲ್ಲಿಯೆ ಇವೆ ಎಂಬುದು ಸ್ಪಷ್ಟ. ಇದರಿಂದ ಸಂಪ್ರದಾಯಗಳು ಮತ್ತು ಅವುಗಳ ಮೌಲ್ಯಗಳ ಕುರಿತು ಚರ್ಚೆಗಳು ಹೆಚ್ಚೆಚ್ಚು ಅಸ್ಪಷ್ಟವಾಗುತ್ತಾ ಹೋಗುತ್ತವೆ.
ಸಾಮಾನ್ಯ ಜನರ ಬದುಕಿಗೂ ಬೌದ್ಧಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳಿಗೂ ನಡುವೆ ಸಂಬಂಧವಿದೆಯೇ ಎಂದು ನೋಡಿದರೆ ಅದೂ ಸಹ ನಮಗೆ ಕಾಣಿಸುವುದಿಲ್ಲ. ಲಿಂಗಾಯತ ಸಮುದಾಯದ ಶ್ರೀ ಸಾಮಾನ್ಯರ ದಿನ ನಿತ್ಯ ಬದುಕಿನಲ್ಲಿ ತಮ್ಮ ಧರ್ಮದ ಕುರಿತಾಗಿ ಯಾವುದೇ ಪ್ರಶ್ನೆಗಳು ಮೂಡಿ ಗೊಂದಲಕ್ಕೊಳಗಾಗಿಲ್ಲ. ಮತ್ತು ಅವರ ಬದುಕಿಗೆ ಯಾವ ತರದ ತೊಂದರೆಯು ಆಗಿಲ್ಲ. ಅವರ ಬಳಿ ಹೋಗಿ ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ಭಿನ್ನವೇ? ನೀವು ಯಾವ ಧರ್ಮದವರು ನಿಮ್ಮದು ಜಾತಿಯೋ? ಧರ್ಮವೋ? ಎಂದು ಕೇಳಿದರೆ ಅವರು ಧರ್ಮ, ಜಾತಿ, ಮತ, ಕುಲ ಮುಂತಾದವಾಗಿ ವಿವರಿಸುತ್ತಾರೆ. ಇವ್ಯಾವ ವಿಷಯಗಳು ಅವರ ಬದುಕನ್ನು ಅವರ ಆಚಾರ ವಿಚಾರಗಳ ಮುಂದುವರಿಕೆಗೆ ಅಡ್ಡಿ ಪಡಿಸುತ್ತಿಲ್ಲ. ಆದರೂ ಬೌದ್ಧಿಕ ವಲಯದಲ್ಲಿ ಚರ್ಚೆಗಳು ಮೇಲಿಂದ ಮೇಲೆ ನಡೆಯುತ್ತಿವೆ. ಅಂದಮೇಲೆ ಇಲ್ಲಿ ಜನ ಸಾಮಾನ್ಯರ ಅನುಭವಕ್ಕೂ ಬೌದ್ಧಿಕ ವಲಯದ ಚರ್ಚೆಗಳ ನಡುವೆ ಎಲ್ಲೊ ಅಂತರವಿರುವಂತೆ ಕಾಣುತ್ತದೆ.
 ಒಟ್ಟಿನಲ್ಲಿ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಅನೇಕ ರೀತಿಯ ಗೊಂದಲಗಳು ಕಂಡು ಬರುತ್ತಿವೆ. ಆದರೆ, ಈ ಗೊಂದಲಗಳಿಗೆ ಕಾರಣವೇನು ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ.  ಈ ಗೊಂದಲಗಳು, ವಿರೋಧಭಾಸಗಳು, ದೋಷಗಳು ಏನೇ ಇದ್ದರೂ, ಹಿಂದೂಯಿಸಂನ ಅಸ್ತಿತ್ವದ ಕುರಿತು ಗಮನಹರಿಸಬೇಕಾಗಿದೆ. ಏಕೆಂದರೆ, ಈಗಾಗಲೇ ಕೆಲವು ಜನ ಚಿಂತಕರು ಮತ್ತು ಎಸ್.ಎನ್.ಬಾಲಗಂಗಾಧರರವರು ತಮ್ಮ ಸಿದ್ಧಾಂತದಲ್ಲಿ ಹಿಂದೂಯಿಸಂ ಎಂಬ ಒಂದು ರಿಲಿಜನ್ ಇಲ್ಲ. ಹಿಂದೂಯಿಸಂ ರಿಲಿಜನ್ ಅಲ್ಲ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಹೀಗಿದ್ದರೂ ಕೂಡ ವೀರಶೈವ ಲಿಂಗಾಯತರ ಕುರಿತಾಗಿ ನಡೆಯುತ್ತಿರುವ ಚರ್ಚೆಗಳು ಮಾತ್ರ ಏಕೆ ಹಿಂದುಯಿಸಂನ ಸುತ್ತವೆ ನಡೆಯುತ್ತಿವೆ? ಏಕೆ ಹಿಂದೂಯಿಸಂನ್ನು ಆಧಾರವಾಗಿಟ್ಟುಕೊಂಡೆ ವೀರಶೈವಿಸಂನ್ನು ಅಥವಾ ಲಿಂಗಾಯಿತಿಸಂನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ? ಹಿಂದೂಯಿಸಂ ಮತ್ತು ವೀರಶೈವಿಸಂನ ನಡುವೆ ಇವುಗಳ ಸಂಬಂಧಗಳ ಕುರಿತು ನಡೆಯುತ್ತಿರುವ ಚರ್ಚೆಗಳು ಏನನ್ನು ಸಮರ್ಥಿಸಲು ಹೊರಟಿವೆ? ಎಂಬುದು ಕೇವಲ ಪ್ರಶ್ನೆಗಳಾಗಿ ಉಳಿಯದೆ ಒಗಟಾಗಿಯೂ ಬದಲಾಗುತ್ತಿವೆ.

ನಮ್ಮ ಸಂಸ್ಕೃತಿಯ ಮೇಲೆ ನಡೆದಿದೆ ಸಾಹಿತ್ಯಿಕ ದಾಳಿ!

ದಿನಾಂಕ 25.6.2013ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ "ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾದ ಶರಣ ಕ್ಷೇತ್ರಗಳು" ಎಂಬ ಡಾ. ಎಂ. ಚಿದಾನಂದಮೂರ್ತಿಯವರ ಲೇಖನ ಪ್ರಕಟವಾಗಿದೆ. ಆ ಲೇಖನದಲ್ಲಿ ಡಾ. ಜಯಶ್ರೀನಂಡೆ ಮತ್ತು ಡಾ. ವೀರಣ್ಣ ದೀಡೆಯವರ "12ನೇ ಶತಮಾನದ ಶರಣ ಸ್ಮಾರಕಗಳು" ಎಂಬ ಕೃತಿಯನ್ನು ಆಧರಿಸಿ ಕರ್ನಾಟಕದಲ್ಲಿ ವೀರಶೈವರಿಗೆ ಪೂಜ್ಯವಾದ ಹಲವು ಶರಣ ಕ್ಷೇತ್ರಗಳು ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾಗಿರುವ ವಿಚಾರವನ್ನು ಅವರು ಉಲ್ಲೇಖಿಸಿದ್ದಾರೆ. ಚಿದಾನಂದಮೂರ್ತಿಗಳ ಶರಣ ಕ್ಷೇತ್ರಗಳ ಬಗೆಗಿನ ಪ್ರೀತಿ, ಕಳಕಳಿ ಪ್ರಶ್ನಾತೀತವಾದುದು ಹಾಗೂ ಪ್ರಶಂಸನೀಯವಾದುದು. ನಮ್ಮ ಮಂದಿರ ಮತ್ತು ಸ್ಮಾರಕಗಳ ಮೇಲೆ ಮುಸ್ಲಿಂ ಆಕ್ರಮಣಕಾರರು ದಾಳಿ ಮಾಡಿದ ಕರಾಳ ಅಧ್ಯಾಯಗಳ ಮೇಲೆ ಅನೇಕ ಇತಿಹಾಸಕಾರರು ಬೆಳಕು ಚೆಲ್ಲಿದ್ದಾರೆಂಬುದು ನಿಜ. ಆದರೆ ಆ ಆಕ್ರಮಣ ಅಂದಿಗೇ ಕೊನೆಯಾಯಿತು ಎಂದು ಹೇಳುವ ಹಾಗಿಲ್ಲ. ಏಕೆಂದರೆ ಅದೇ ರೀತಿಯ, ಆದರೆ ಭಿನ್ನ ರೂಪದ ದಾಳಿಗಳು ಈಗಲೂ ನಿರಂತರವಾಗಿ ನಡೆಯುತ್ತಿವೆ. ಅಂದು ಸ್ಮಾರಕಗಳ ಮೇಲೆ ದಾಳಿಯಾದರೆ, ಇಂದು ನಮ್ಮ ಸಂಸ್ಕೃತಿಯ ಮೇಲೆ ದಾಳಿಯಾಗುತ್ತಿದೆ, ಅದೂ ಸಾಹಿತ್ಯದ ರೂಪದಲ್ಲಿ! ಈ ನಾಡಿನ ಪ್ರಾತಃಸ್ಮರಣೀಯರ ಬಗ್ಗೆ ಆಧಾರ ರಹಿತ ವಿಚಾರಗಳನ್ನು ಬರೆದು ನಿರಂತರವಾಗಿ ತೇಜೋವಧೆ ಮಾಡಲಾಗುತ್ತಿದೆ. ನಾಡಿನ ಖ್ಯಾತ ಸಂಶೋಧಕರಾದ ಚಿದಾನಂದಮೂರ್ತಿಯವರು ಇಂತಹ ಸಾಹಿತ್ಯಿಕ ದಾಳಿಗಳಿಗೆ ಸರಿಯಾದ ಉತ್ತರ ಕೊಡಬೇಕು ಎಂಬ ಆಶಯದಿಂದ, ಕೆಲವು ವಿಚಾರಗಳನ್ನು ಅವರ ಗಮನಕ್ಕೆ ತರಲು ಬಯಸುತ್ತೇನೆ.   ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಅಲ್ಲಮಪ್ರಭುವಿನ ಸ್ಮಾರಕವು ಸುಲ್ತಾನ್ ಅಹ್ಮದ್ ಶಹಾವಲಿ ಬಹಮನಿ ದರ್ಗಾ ಆಗಿ ಬದಲಾಗಿದೆ ಎಂದು ಡಾ. ಚಿದಾನಂದಮೂರ್ತಿ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ರಹಮತ್ ತರೀಕೆರೆಯವರ 'ಕರ್ನಾಟಕದ ಸೂಫಿಗಳು' ಕೃತಿಯಲ್ಲಿ ರಹಮತ್ ಅವರು 'ಬಿಜಾಪುರದ ಅಷ್ಟೂರಿನಲ್ಲಿ ವಚನಕಾರ ಅಲ್ಲಮನ ಗೋರಿ ಇದೆ. ಬಹಮನಿ ಸುಲ್ತಾನರು ಅಭಿಮಾನದಿಂದ ಗೋರಿ ಕಟ್ಟಿಸಿದರೆಂದು ಒಬ್ಬ ಶಾಲಾ ಮಾಸ್ತರ ಪುಸ್ತಕದಲ್ಲಿ  ಬರೆದುದು ಗೊಂದಲ ಹೆಚ್ಚಾಗಲು ಕಾರಣವಾಯಿತು' ಎಂದು ಹೇಳಿದ್ದಾರೆ. ಒಬ್ಬ ಅನಾಮಧೇಯ ಶಾಲಾ ಶಿಕ್ಷಕನ ಅನಾಮಧೇಯ ಕೃತಿಯ ಆಧಾರದ ಮೇಲೆ ಬಿಜಾಪುರದ ಅಷ್ಟೂರಿನಲ್ಲಿ ಅಲ್ಲಮಪ್ರಭುವಿನ ಗೋರಿ ಇದೆ ಎಂದು ಉಲ್ಲೇಖಿಸುವುದರ ಮೂಲಕ ರಹಮತ್- 'ಅಲ್ಲಮಪ್ರಭು ತಾನು ಶ್ರೀಶೈಲದ ಕದಳಿಯಲ್ಲಿ ಐಕ್ಯವಾಗುತ್ತೇನೆಂದು ತನ್ನ ವಚನದ ಮೂಲಕ ಸಾರಿರುವುದು ಸುಳ್ಳು' ಎಂದು ಹೇಳುತ್ತಿದ್ದಾರಾ? ಇಂತಹ ಸಂಗತಿಯನ್ನು ಬೇರೆ ಯಾವ ಮುಸ್ಲಿಮ ಗ್ರಂಥ ಹೇಳುತ್ತಿಲ್ಲ. ನಮ್ಮ ಕನ್ನಡನಾಡಿನ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಕೃತಿ ಸಾರುತ್ತಿದೆ!ಹಾವೇರಿ ಜಿಲ್ಲೆಯ ಕರಜಗಿ ಗ್ರಾಮ ಹಿಂದೆ ಬ್ರಿಟಿಷರ ಕಾಲದಲ್ಲಿ ತಾಲೂಕು ಕೇಂದ್ರವಾಗಿದ್ದ ಸ್ಥಳ. ಅಲ್ಲಿ ಗಾಂಧೀಜಿಯವರ ಚಿತಾಭಸ್ಮವಿರುವ ಒಂದು ಪವಿತ್ರ ಸ್ಥಾನವಿದೆ. ಆ ಗ್ರಾಮ ಧಾರ್ಮಿಕ ಆಧ್ಯಾತ್ಮಿಕ ಕೇಂದ್ರವೆನ್ನುವುದಕ್ಕೆ ಸಾಕ್ಷಿಯಾಗಿ ಅಲ್ಲಿ ಸುಮಾರು ಮೂವತ್ತಕ್ಕಿಂತಲೂ ಹೆಚ್ಚು ದೇವಸ್ಥಾನಗಳಿವೆ, ಅನೇಕ ಮಠಗಳಿವೆ. ಅಷ್ಟೇ ಅಲ್ಲದೇ ಸುತ್ತಮುತ್ತಲೂ ಯಾವ ಗ್ರಾಮಗಳಲ್ಲಿ ಇಲ್ಲದ 'ನಾಥ' ಪಂಥಕ್ಕೆ ಸೇರಿದ ಸದ್ಭಾವನಾ ಮಠವಿದೆ. ಈ ಮಠಕ್ಕೆ ಸಂಬಂಧಿಸಿದಂತೆ ರಹಮತ್ ತರೀಕೆರೆ  ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ತಮ್ಮ 'ಕರ್ನಾಟಕದ ನಾಥ ಪಂಥ' ಕೃತಿಯಲ್ಲಿ "ಹಿರಿಗ್ಲಜಾದೇವಿಯಿರುವ ಕರಜಗ ನಾಥ ಮಠದಲ್ಲಿ ಈಗಲೂ ಚಕ್ರಪೂಜೆಯಿದೆ. ಒಬ್ಬ ಯೋಗಿನಿಯ ಸಮಾಧಿಯಿದೆ. ನಾಥರು ಭೈರವಚಕ್ರ ಎಂಬ ಚಕ್ರಪೂಜೆ ಮಾಡುತ್ತಿದ್ದರು. ಚಕ್ರ ಸಾಧನೆಯಲ್ಲಿ ಜಾತಿ ಭೇದವಿಲ್ಲ. ಗಂಡು ಹೆಣ್ಣುಗಳ ಭೇದವಿಲ್ಲ. ಇದರಲ್ಲಿ 8 ಅಥವಾ 10 ಗಂಡು ಹೆಣ್ಣುಗಳ ಜೋಡಿ ಭಾಗವಹಿಸಬಹುದು. ಚಕ್ರ ಪೂಜೆಯಲ್ಲಿ ಗಂಡು ಹೆಣ್ಣುಗಳು ಭೈರವ ಭೈರವಿಯಾಗುತ್ತಾರೆ. ಭೈರವಿಯ ಪೂಜೆ ನಂತರ ಭೈರವ ತನ್ನನ್ನು ತಾನೇ ಪೂಜಿಸಿಕೊಳ್ಳುತ್ತಾನೆ. ಮದ್ಯ, ಮಾಂಸ ಮುಂತಾದ ಸೇವನೆಯಾಗುತ್ತದೆ. ನಂತರ ಭೈರವನು ಭೈರವಿಗೆ ನಮಸ್ಕರಿಸಿ 'ತಾಯಿ, ಬ್ರಹ್ಮಾನಂದಕ್ಕೆ ಅವಕಾಶ ಮಾಡಿಕೊಡು' ಎಂದು ಪ್ರಾರ್ಥಿಸುತ್ತಾನೆ. ಆನಂತರ 9 ಬಗೆಯ ರತಿಕ್ರೀಡೆಗಳು ನಡೆಯುತ್ತವೆ ಎಂದು ಹೇಳುತ್ತಾರೆ. ಆದರೆ ಕರಜಗಿ ಸದ್ಭಾವನಾ ನಾಥ ಪಂಥ ಮಠದ ಗುರುಗಳಾದ ಶ್ರೀ ಯೋಗಿ ರಾಮನಾಥರವರು 'ಅಂತಹ ಚಕ್ರಪೂಜೆ ನಮ್ಮ ಮಠದಲ್ಲಿ ಹಿಂದೆಯೂ ನಡೆದಿಲ್ಲ ಈಗಲೂ ನಡೆಯುತ್ತಿಲ್ಲ' ಎಂದು ದಿನಾಂಕ 10.06.2013ರಂದು ಕರಜಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಮಹಾತ್ಮ ಗಾಂಧೀಜಿಯ ಚಿತಾಭಸ್ಮದ ಸ್ಥಾನವಿರುವ ಸರ್ವಜನಾಂಗದ ಧಾರ್ಮಿಕ, ಆಧ್ಯಾತ್ಮಿಕ, ಆರಾಧನೆಯ ಕೇಂದ್ರವಾದ ಕರಜಗಿಯಲ್ಲಿ 'ಚಕ್ರಪೂಜೆ" ಯಂತಹ ಅನಾಗರಿಕ ಸಂಸ್ಕೃತಿಯ ಆಚರಣೆ ಈಗಲೂ ನಡೆಯುತ್ತಿದೆ ಎಂದು ಹಂಪಿ ಕನ್ನಡ ವಿ.ವಿ. ತನ್ನ ಕೃತಿಯ ಮೂಲಕ ಸಾರಿ ಆ ಗ್ರಾಮದ ಸಂಸ್ಕೃತಿಗೆ ಕಳಂಕ ತರುತ್ತಿದೆ. ಕನ್ನಡನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ವಿಶ್ವಕ್ಕೆ ಪರಿಚಯಿಸುವ ಹೆಬ್ಬಯಕೆಯಿಂದ ಜನ್ಮ ತಾಳಿದ ಹಂಪಿ ಕನ್ನಡ ವಿ.ವಿ. ಮಾಡುತ್ತಿರುವ ಕೆಲಸವಿದು.ಹಂಪಿ ಪರಿಸರದ ಕಮ್ಮಟದುರ್ಗ (ಕಂಪ್ಲಿ) ಕಂಪಿಲರಾಯನ ಮಗ ಕುಮಾರರಾಮ ಕನ್ನಡದ ಒಬ್ಬ ಗಂಡುಗಲಿ, ಇಂತಹ ಕುಮಾರ ರಾಮನನ್ನು ಒಬ್ಬ ರಾಕ್ಷಸ ಎಂದು ಕೃತಿಯ ಮೂಲಕ ರಹಮತ್ ತರೀಕೆರೆ (ಕರ್ನಾಟಕದ ಸೂಫಿಗಳು) ಸಾಹಿತ್ಯ ಪ್ರಪಂಚಕ್ಕೆ ಸಾರುತ್ತಿದ್ದಾರೆ. ಈ ಕೃತಿಯನ್ನು ಹಂಪಿ ವಿ.ವಿ.ಯೇ ಪ್ರಕಟಿಸಿದೆ. ರಹಮತ್ ತರೀಕೆರೆ 'ಕರ್ನಾಟಕದ ಸೂಫಿಗಳು' ಕೃತಿಯಯಲ್ಲಿ 'ಕುಮಾರ ರಾಮನನ್ನು ಕೊಂದುದು ಸೂಫಿ ಸರ್ಮಸ್ಥನ ಮಗಳು ತರ್ಕಿಷ್‌ಬಿ ಎಂಬ ಮುಸ್ಲಿಮ್ ಮಹಿಳೆ' ಎನ್ನುತ್ತಾರೆ. ಲೇಖಕರ ಈ ಅಲಿಖಿತ ಹೇಳಿಕೆ ಚರಿತ್ರೆಗೆ ಪೂರವಾಗಿದೆಯೋ? ಮಾರಕವಾಗಿದೆಯೋ?ಇನ್ನು ಇದೇ ವಿ.ವಿ. ಪ್ರಕಟಿಸಿರುವ 'ಕರ್ನಾಟಕ ನಾಥ ಪಂಥ' ಎಂಬ ಕೃತಿಯಲ್ಲಿ ಡಾ. ರಹಮತ್ ತರೀಕೆರೆಯವರು "ಕೊಲ್ಲೂರು (ಕುಂದಾಪುರ), ಕೋಲಾರ, ಕೊಲ್ಲಾಪುರ ಮುಂತಾದ ಶಕ್ತಿ ದೇವತೆಗಳ ಜಾಗಗಳಿಗೂ ಕೌಳಪಂಥಕ್ಕೂ ಸಂಬಂಧವಿದೆ. ಶಂಕರರು ಕೊಲ್ಲೂರಿನಲ್ಲಿ ಚಕ್ರ ಪೂಜೆ ಆರಂಭಿಸಿದರು' ಎಂದು ಉಲ್ಲೇಖಿಸಿದ್ದಾರೆ. ವೈಷ್ಣ ಪಂಥಾನುಯಾಯಿ ಜಗದ್ಗುರು ಶಂಕರಾಚಾರ್ಯರು ಅದ್ವೈತ ಸಿದ್ಧಾಂತದವರು. ಇವರು ಶೈವ ಪಂಥದ ಅನುಯಾಯಿಯಾದ ನಾಥಪಂಥದ ಆಚರಣೆಯಾದ ಚಕ್ರಪೂಜೆ ಆರಂಭಿಸಿದರು ಎನ್ನಲಾಗುತ್ತಿದೆ ಎಂಬುದು ನಂಬಲರ್ಹ ಸಂಗತಿಯೇ?! ಹೀಗೆ ಒಂದು ಪಂಥ ಅಥವಾ ಸಿದ್ಧಾಂತದಲ್ಲಿ ಇಲ್ಲದೇ ಇರುವ ಆಚರಣೆಯನ್ನು ಇದೇ ಎಂದು ಸಾರುತ್ತಿರುವ ಇಂತಹ ಕೃತಿ ಪ್ರಕಟಣೆಯ ಬಗೆಗೆ ಮತ್ತು ಆಧಾರರಹಿತವಾಗಿ ಜಗದ್ಗುರು ಶಂಕರಾಚಾರ್ಯರ ಹೆಸರಿಗೆ ಕಳಂಕ ತರುತ್ತಿರುವ ರಹಮತ್ ತರೀಕೆರೆಯವರಿಗೆ ಏನನ್ನಬೇಕು?ಕರ್ನಾಟಕದ ನಾಥಪಂಥ ಕೃತಿಯಲ್ಲಿ ರಹಮತ್, 'ಶರಣರು, ಆರೂಢರು, ಸೂಫಿಗಳು, ಗುರು ಪಂಥಗಳಿಗೆ ಸೇರಿದವರಾದರೂ ಸಂಸಾರಿಗಳು. ಸಂಸಾರಿಗಳಾದರೂ ಸಂಸಾರ ವಿರೋಧಿ ನೆಲೆಯುಳ್ಳವರು. ಗುರುಪಂಥಗಳಲ್ಲಿ ಸಂಸಾರ, ಹೆಣ್ಣು, ಲೌಕಿಕಗಳ ಬಗೆಗೆ ಅನುಮಾನ ದ್ವಂದ್ವ ಕಡೆಗೂ ಉಳಿದು ಬಿಡುತ್ತವೆ" ಎನ್ನುತ್ತಿದ್ದಾರೆ. ಅಂದರೆ  ಶರಣರು ಸಂಸಾರಿಗಳಾದರೂ ಅವರು ಸಂಸಾರ ವಿರೋಧಿ ನೆಲೆಯುಳ್ಳವರಾಗಿದ್ದರು ಎಂಬ ಹೊಸ ವಿಚಾರವನ್ನು ಹುಟ್ಟುಹಾಕುತ್ತಿದ್ದಾರೆ ಇವರು. ಹೀಗೆ ಮಾಡುವುದು ಶರಣರ ವ್ಯಕ್ತಿತ್ವದ ತೇಜೋವಧೆಯಾಗುವುದಿಲ್ಲವೆ? 'ಕರ್ನಾಟಕದ ಸೂಫಿಗಳು' ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಮೂರು ಆವೃತ್ತಿಗಳಲ್ಲಿ ಪ್ರಕಟಿಸಿದೆ. ಎರಡನೇ ಆವೃತ್ತಿಯಲ್ಲಿ, 'ಮಡಿಕೇರಿಯಲ್ಲಿ ಕೊಡಗಿನ ಅರಸು 2ನೇ ಲಿಂಗರಾಜನು ಕಟ್ಟಿಸಿದ ಓಂಕಾರೇಶ್ವರ ಗುಡಿಯು ಥೇಟ್ ಮಸೀದಿಯಂತೆ ಇದೆ' ಎನ್ನುತ್ತಾರೆ ಲೇಖಕರು. ಈ ಬಗ್ಗೆ ಆಧಾರ ನೀಡುವಂತೆ ಪತ್ರ ಬರೆದಾಗ, ಅದಕ್ಕೆ ಉತ್ತರಿಸಿದ ರಹಮತ್, 'ನಾನು ಅದನ್ನು ಮಸೀದಿಯೆಂದು ಕರೆದಿಲ್ಲ, ಮಸೀದಿಯಂತೆ ತೋರುತ್ತದೆ' ಎಂದು ಬರೆದಿದ್ದೇನೆಂದು ತಿಳಿಸಿದರು. ಆದರೆ ಅವರದೇ ಮೂರನೇ ಆವೃತ್ತಿಯಲ್ಲಿ 'ಮಸೀದಿ ಆಕಾರದಲ್ಲಿದೆ' ಎಂದು ಉಲ್ಲೇಖಿಸಿದ್ದಾರೆ. 'ಓಂಕಾರೇಶ್ವರ ಗುಡಿಯನ್ನು' ಥೇಟು ಮಸೀದಿಯಂತೆ ಇದೆ, ಮಸೀದಿಯಂತೆ ಕಾಣಿಸುತ್ತದೆ, ಮಸೀದಿ ಆಕಾರದಲ್ಲಿದೆ ಎನ್ನುವುದರ ಮೂಲಕ ಆ ಭವ್ಯವಾದ ಮಂದಿರವನ್ನು ಮಸೀದಿ ಮಾಡಲು ಹೊರಟಿದ್ದಾರೆ. ಇಂತಹ ಕೃತಿಯನ್ನು ಯಾವುದೇ ಮುಸ್ಲಿಮ್ ವಿಶ್ವವಿದ್ಯಾಲಯವಾಗಲಿ, ಅಥವಾ ಮುಸ್ಲಿಮ್ ಸಂಘಟನೆಗಳಾಗಲಿ ಪ್ರಕಟಿಸಿಲ್ಲ. ನಮ್ಮ ಹಂಪಿ ಕನ್ನಡ ವಿ.ವಿ. ಪ್ರಕಟಿಸಿದೆ! ನಮ್ಮ ವಿಶ್ವವಿದ್ಯಾಲಯದ ಒಬ್ಬ ಪ್ರಾಧ್ಯಾಪಕ ತನ್ನ ಕೃತಿಯಲ್ಲಿ 'ಕರ್ನಾಟಕ ಚರಿತ್ರೆಕಾರರ, ಕನ್ನಡ ಸಂಸ್ಕೃತಿ, ಚಿಂತಕರ ಶೈಲಿ ಅಳುಮೋರೆ ಶೈಲಿ' ಎಂದು ಜರಿಯುತ್ತಿರುವ, 'ಕುಮಾರರಾಮ ಒಬ್ಬ ರಾಕ್ಷಸ', 'ಲಿಂಗದೀಕ್ಷೆ ನೀಡುವುದು ಮತಾಂತರಿಸಲು', 'ಶಂಕರಾಚಾರ್ಯರು ಕೊಲ್ಲೂರಿನಲ್ಲಿ ಚಕ್ರ ಪೂಜೆ ಆರಂಭಿಸಿದರು', 'ತರೀಕೆರೆ ಒಂದು ಹಳ್ಳಿಯಲ್ಲಿ 'ಕಾರ್ಯ' ಎಂಬ ಅಸಂಸ್ಕೃತ ಆಚರಣೆ ಇದೆ' ಮುಂತಾದ ಅಚಾರಿತ್ರಿಕ, ಅಸಾಂಸ್ಕೃತಿಕ ವಿಚಾರಗಳನ್ನು ಪ್ರಜಾಪ್ರಭುತ್ವದ ಈ ಕಾಲದಲ್ಲಿ ಬಿತ್ತಿ ಸಾಮರಸ್ಯಕ್ಕೆ ಭಂಗ ಉಂಟು ಮಾಡುತ್ತಿದ್ದಾರೆ. ಅಂದು ಆಕ್ರಮಣಕಾರರು ನಮ್ಮ ಸ್ಮಾರಕಗಳ ಮೇಲೆ ದಾಳಿ ಮಾಡಿದರು, ಇಂದು ಇಂಥ ಲೇಖಕರು ನಮ್ಮ ಸಂಸ್ಕೃತಿಯ ಮೇಲೆ ಸಾಹಿತ್ಯದ ಮೂಲಕ ದಾಳಿ ಮಾಡುತ್ತಿದ್ದಾರೆ.  -ಎಸ್. ಮಲ್ಲಿಕಾರ್ಜುನಪ್ಪಸಂಚಾಲಕ, ಕನ್ನಡ ಜಾಗೃತಿ ಕೇಂದ್ರ, ದಾವಣಗೆರೆ

ಮುಸ್ಲಿಮ್ ಆಕ್ರಮಣಕಾರರ ದಾಳಿಗೊಳಗಾದ ಶರಣ ಕ್ಷೇತ್ರಗಳು

ಹಿಂದೂಗಳ ಪವಿತ್ರ ಕ್ಷೇತ್ರಗಳಾದ ವಾರಣಾಸಿ (ಕಾಶಿ), ಅಯೋಧ್ಯೆ (ಔಧ್), ನೇಪಾಳದ ಕಠ್ಮಂಡು ಇತ್ಯಾದಿ ಕಡೆ ಹಿಂದೂ ಪವಿತ್ರ ಸ್ಥಾನಗಳನ್ನು ಮುಸ್ಲಿಮರು ಹಾಳು ಮಾಡಿ ಅಪವಿತ್ರಗೊಳಿಸಿರುವ ಸಾವಿರಾರು ಉದಾಹರಣೆಗಳಿವೆ. ಕರ್ನಾಟಕದಲ್ಲಿಯೇ ಹಂಪಿಯಂತಹ ನೂರಾರು ಕಡೆ ಅಂತಹ ಕೃತ್ಯಗಳು ನಡೆದಿವೆ. ಇದೆಲ್ಲ ಎಲ್ಲರಿಗೂ ಗೊತ್ತಿರುವ ವಿಷಯಗಳು; ಬಹಿರಂಗವಾಗಿ ಹೇಳಲು ಹಿಂಜರಿಯುವ ಸಂಗತಿಗಳು. ಕರ್ನಾಟಕದಲ್ಲಿ ವೀರಶೈವರಿಗೆ ಪೂಜ್ಯವಾದ ಹಲವು ಶರಣ ಕ್ಷೇತ್ರಗಳೂ ಹಾಗೆ ಆಕ್ರಮಣಕ್ಕೊಳಗಾಗಿರುವ ಸಂಗತಿ ಬಹಳ ಜನಕ್ಕೆ ತಿಳಿಯದು. ಶರಣ ಕ್ಷೇತ್ರಗಳ ಬಗ್ಗೆ ಕ್ಷೇತ್ರ ಕಾರ್ಯ ಮಾಡಿ ರಚಿಸಿರುವ ಡಾ. ಜಯಶ್ರೀ ನಂಡೆ ಮತ್ತು  ಡಾ. ವೀರಣ್ಣ ದೀಡೆಯವರ "12ನೇ ಶತಮಾನದ ಶರಣ ಸ್ಮಾರಕಗಳು (ಬಸವ ಕಲ್ಯಾಣದಿಂದ ಕೂಡಲಸಂಗಮದವರೆಗೆ)" ಕೃತಿಯಲ್ಲಿ ಅಲ್ಲಲ್ಲಿ ಉಲ್ಲೇಖವಾಗಿರುವ ಚಿತ್ರಸಮೇತ ಮಾಹಿತಿಯನ್ನು ಆಧರಿಸಿ ಈ ಕಿರುಲೇಖನ ರಚಿತವಾಗಿದೆ.
1. ಪರುಷಗಟ್ಟೆ: ಬೀದರ್ ಜಿಲ್ಲೆಯ ಬಸವಕಲ್ಯಾಣದ ಕೇಂದ್ರದಲ್ಲಿರುವ ಪರುಷಗಟ್ಟೆ ಎಂಬಲ್ಲಿ ಬಸವಣ್ಣ ಬಡವರಿಗೆ ಧನಸಹಾಯ ಮಾಡುತ್ತಿದ್ದರೆಂಬ ನಂಬಿಕೆ ಇದೆ. ಪರುಷಗಟ್ಟೆಯು ಮೊದಲು ಬಸವೇಶ್ವರ ದೇವಸ್ಥಾನದ ವಶದಲ್ಲಿದ್ದುದ್ದನ್ನು ಮುಸ್ಲಿಮರು ನ್ಯಾಯಾಲಯದಲ್ಲಿ 1948ರಲ್ಲಿ ಪ್ರಶ್ನಿಸಿ ಅದು ತಮಗೆ ಸೇರಬೇಕೆಂದು ದಾವೆ ಹೂಡಿದ್ದುದು ಇನ್ನೂ ಇತ್ಯರ್ಥವಾಗಿಲ್ಲ. ಅಲ್ಲೇ ಪಕ್ಕದಲ್ಲೇ ನಿತ್ಯವೂ ಗೋವಧೆ, ಪ್ರಾಣಿಬಲಿ, ಮಾಂಸಮಾರಾಟ ನಿರಂತರವಾಗಿ ನಡೆದಿದೆ. ಮೊದಲು ಪರುಷಗಟ್ಟೆಯು ದೊಡ್ಡ ಮಂಟಪವಾಗಿದ್ದು ಅದನ್ನು ಕಿತ್ತು ಅದರ ಕಲಾತ್ಮಕ ಕಂಬಗಳನ್ನು ಅಲ್ಲೇ ಚಲ್ಲಲಾಗಿದೆ. ಬಸವ ಕಲ್ಯಾಣಕ್ಕೆ ಹೋದಾಗ ಆ ಜಾಗದಲ್ಲಿ ನಾನು ತೀವ್ರ ಒಳನೋವು ಅನುಭವಿಸಿದೆ. ಸ್ಪಷ್ಟವಾಗಿದೆ-ಮೂಲತಃ ಪರುಷಕಟ್ಟೆ ಒಂದು ಶರಣ ಕ್ಷೇತ್ರ.
2. ಪೀರ ಪಾಶಾ ಬಂಗಲಾ: ಬಸವ ಕಲ್ಯಾಣದ ಬಸವೇಶ್ವರ ಗುಡಿ ಹಿಂದಿರುವ 'ಪೀರ ಪಾಶಾ ಬಂಗಲಾ'ವು ಹಿಂದೊಮ್ಮೆ ಶೈವ ಕ್ಷೇತ್ರವಾಗಿದ್ದಿತು. ಅಲ್ಲಿದ್ದ ನಂದಿ ವಿಗ್ರಹಕ್ಕೆ ಹಸಿರು ಬಟ್ಟೆ ಹೊದಿಸಿ ಮರೆಮಾಡಲಾಗಿದೆ. ನೆಲದ ಮೇಲೆ ಕನ್ನಡ ಅಂಕಿಗಳನ್ನು ಕೆತ್ತಲಾಗಿದೆ. ಅಲ್ಲಿನ ಮಂಟಪವು ಚಾಲುಕ್ಯ ಶೈಲಿಯ ಕೆತ್ತನೆಯದು. ಬಹುಶಃ ಹನ್ನೆರಡನೇ ಶತಮಾನದ್ದು. ಅಲ್ಲೇ ಮಂಟಪಕ್ಕೆ ಹೊಂದಿಕೊಂಡಂತೆ ಒಂದು ಚಾಲುಕ್ಯರ ಶಿಲಾಶಾಸನವಿದೆ.
3. ಬಸವಕಲ್ಯಾಣದ ಪಕ್ಕದಲ್ಲೇ ಕೋಟೆ ಇರುವ ಬೆಟ್ಟವಿದೆ. ಅಲ್ಲಿದ್ದ ಒಂದು ದೇವಾಲಯದ ಶಿವಲಿಂಗವನ್ನು ಕೆಲವು ವರ್ಷಗಳ ಹಿಂದೆ ಕಿತ್ತು ಹಾಕಲಾಗಿದೆ. (ನಾನು ಪ್ರತ್ಯಕ್ಷ ನೋಡಿರುವಂತೆ ಕೋಟೆಯ ಕಲ್ಲಿನ ಗೋಡೆ ಕಟ್ಟಲು ಭಗ್ನ ದೇವಾಲಯಗಳ ಅವಶೇಷಗಳನ್ನು ಬಳಸಲಾಗಿದೆ. ಚಾಲುಕ್ಯರ ಕಾಲದ ದೇವಾಲಯಗಳನ್ನು ಒಡೆದು ಅವುಗಳ ಅವಶೇಷಗಳನ್ನು ಬಳಸಲಾಗಿದೆ).
4. ವಚನಕಾರ ಒಕ್ಕಲಿಗ ಮುದ್ದಯ್ಯನ ಗುಡಿಯು ಬಸವಕಲ್ಯಾಣ ಸಮೀಪದ ನಾರಾಯಣಪುರದಲ್ಲಿದ್ದು ಅದೇ ಅವನ ಸಮಾಧಿ ಎಂದು ಜನ ನಂಬುತ್ತಾರೆ. ಅವನ ಶಿಷ್ಯ ಮೃತ್ಯುಂಜಯನ ಸಮಾಧಿಯೂ ಅಲ್ಲಿದೆ. ಮೃತ್ಯುಂಜಯನ ಗುಡಿ ಅಥವಾ ಸಮಾಧಿಯನ್ನು ಮುಸ್ಲಿಮರು ದರ್ಗಾವನ್ನಾಗಿ ಮಾಡಿಕೊಂಡಿದ್ದಾರೆ. ಮೃತ್ಯುಂಜಯ ಮಂದಿರವು 'ಮರ್ತುಜಾ ದರ್ಗಾ' ಎಂಬ ನಾಮಕರಣ ಪಡೆದಿದೆ. (ಮೃತ್ಯುಂಜಯ- ಮರ್ತುಜಾ).
5. ಬಸವಕಲ್ಯಾಣ ತಾಲೂಕಿನ ಹುಲಸೂರಿನಲ್ಲಿ ವಚನಕಾರ ಲದ್ಪೆಯ ಸೋಮನ ಸಮಾಧಿ ಇದೆ. ಅಲ್ಲಿ ಗುಡಿಯ ಹಿಂದೆ ಭಗ್ನ ಉಮಾ ಮಹೇಶ್ವರ ಶಿಲ್ಪವಿದ್ದು ಅದು ನಿಜಾಮರ ಕಾಲದಲ್ಲಿ ರಜಾಕಾರರ ಹಾವಳಿಯಿಂದ ನಾಶವಾದ ದೇವಾಲಯದ ಭಾಗವಾಗಿದೆ.
6. ಬೀದರ್ ತಾಲೂಕಿನ ಅಷ್ಟೂರಿನಲ್ಲಿ ಅಲ್ಲಮ ಪ್ರಭುವಿನ ಸ್ಮಾರಕವು ಸುಲ್ತಾನ ಅಹ್ಮದ್ ಶಹಾವಲಿ ಬಹಮನಿ ದರ್ಗಾ ಆಗಿ ಪರಿಣಮಿಸಿದೆ. ಅಲ್ಲಿ ಸಾಂಪ್ರದಾಯಕವಾಗಿ ಹಿಂದಿನಂತೆ ಹಿಂದೂಗಳು ಪೂಜೆ ಮಾಡುತ್ತಾರೆ; ಮುಸಲ್ಮಾನರ ವಶದಲ್ಲಿರುವ ಆ ದರ್ಗಾದಲ್ಲಿ ಮುಸ್ಲಿಮರು ನಮಾಜ್ ಮಾಡುತ್ತಾರೆ. (ಇಂಥವನ್ನು ಹಿಂದೂಮುಸ್ಲಿಮರ ಭಾವೈಕ್ಯತೆಯ ಸಂಕೇತವೆಂದೂ ಭಾವಿಸುವುದು ಉಚಿತವಲ್ಲ. ಅಂತಹ 'ಭಾವೈಕ್ಯ'ದ ಸ್ಥಳಗಳೆಂದು ಕೆಲವು ಹಿಂದೂಗಳು ಹೆಮ್ಮೆ ಪಡುವ ಜಾಗಗಳೆಲ್ಲ ಮುಸ್ಲಿಂ ಆಕ್ರಮಿತ ಹಿಂದೂ ಪವಿತ್ರ ಸ್ಥಾನಗಳು).
7. ಸುರಪುರ ತಾಲೂಕಿನ ಮುದನೂರು ಜೇಡರ ದಾಸಿಮಯ್ಯನಿದ್ದ ಜಾಗ. ಹಿಂದೆ ಅಗ್ರಹಾರವಾಗಿದ್ದು ಅಲ್ಲಿ 1001 ಲಿಂಗಗಳು ಹಲವು ತೀರ್ಥಗಳು ಇವೆ. ದಾಸಿಮಯ್ಯ ಹುಟ್ಟಿದ ಮನೆಯೆಂದು ಒಂದು ಮನೆಯನ್ನು ಜನ ತೋರಿಸುತ್ತಾರೆ. ಅವನ ಆರಾಧ್ಯ ದೈವ 'ರಾಮನಾಥನ ದೇವಾಲಯದ ಮಗ್ಗುಲಿಗೆ 101 ಕಂಬಗಳ ಸಂಗಮನಾಥ ದೇವಾಲಯವಿದೆ. ಅದರ ಮೇಲೆ ಗುಡಿಯ ಸೌಂದರ್ಯವನ್ನು ಹಾಳು ಮಾಡಿ ಹೇಗೆ ಬಂತು ಹಾಗೆ ಕೆಡವಿ ಮುಸ್ಲಿಮರು ಸುಮಾರು 250ಕ್ಕೂ ಮೇಲ್ಪಟ್ಟು ಮನೆ ಮಾಡಿಕೊಂಡಿದ್ದಾರೆ.'
8. ಸೊಲ್ಲಾಪುರ ಜಿಲ್ಲೆಯ ಮಂಗಳ ವೇಡೆಯು ಬಿಜ್ಜಳನ ಮೊದಲ ರಾಜಧಾನಿ. ಅಲ್ಲೇ ಬಸವಣ್ಣ ಮೊದಲು ಭಂಡಾರಿಯಾಗಿ ಕೆಲಸ ಮಾಡಿದ್ದು. ಅಲ್ಲಿನ ಕೋಟೆ ಸಮೀಪದ ಒಂದು ದರ್ಗಾವು ಮೂಲತಃ ಹಿಂದೂ ದೇವಾಲಯ. ಆ ದರ್ಗಾಕ್ಕೂ ಮುಸ್ಲಿಮರಂತೆ ಹಿಂದೂಗಳು ನಡೆದುಕೊಳ್ಳುತ್ತಾರೆ. ಸ್ಥಳೀಯರ ಪ್ರಕಾರ ದರ್ಗಾವು ಹಿಂದೆ ಮಂಗಳಾ ದೇವಿಯ ಗುಡಿ ಆಗಿತ್ತು. ದರ್ಗಾದಲ್ಲಿ ಈಗಲೂ ಚಾಲುಕ್ಯ ಶೈಲಿಯ ಶಿಲ್ಪಗಳಿವೆ ('ಮಂಗಳಾ ದೇವಿ' ಯಿಂದಲೇ ಆ ಊರಿಗೆ ಮಂಗಳವಾಡ ವೇಡೆ ಎಂಬ ಹೆಸರು ಬಂದಿರುವುದು).
9. ಸೊಲ್ಲಾಪುರದಲ್ಲಿ ವಚನಕಾರ ಸಿದ್ಧರಾಮ ಕೋಟೆಯಲ್ಲಿ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯವನ್ನು ಆ ಕೋಟೆ ವಶಪಡಿಸಿಕೊಂಡ ಮುಸ್ಲಿಮ್ ಅರಸರು ಅದನ್ನು ಸ್ಥಳಾಂತರಿಸಲು ಆಜ್ಞೆ ಮಾಡಿದರು. ಅದನ್ನು ಕಿತ್ತು ಬೇರೆಡೆ ಕಟ್ಟಲಾಗಿದೆಯಾದರೂ ಮೂಲ ದೇವಾಲಯದ ಕೆಲ ಭಾಗ ಕೋಟೆಯಲ್ಲಿ ಇನ್ನೂ ಉಳಿದುಕೊಂಡಿವೆ. (ಟಿಪ್ಪು ಕೂಡ ಶ್ರೀರಂಗಪಟ್ಟಣದ ಕೋಟೆ ಒಳಗಿನ ಆಂಜನೇಯ ದೇವಾಲಯವನ್ನು ಮಸೀದಿಯಾಗಿ ಪರಿವರ್ತಿಸಿದ).
ಇನ್ನು ಮೇಲೆ ಹೇಳಿದ ಕೃತಿಯಲ್ಲಿನ ಒಂದಿಷ್ಟು ಮಾಹಿತಿ. ಕರ್ನಾಟಕದಾದ್ಯಂತ ಈ ಸಾವಿರ ವರ್ಷಗಳಲ್ಲಿ ಮುಸ್ಲಿಂ ದೊರೆಗಳಿಂದ ಹಿಂದೂ ದೇವಾಲಯಗಳ ನಾಶ ನಡೆದಿದೆ. ಬಿಜಾಪುರದ ಕಲೆಕ್ಟರ್ ಬಂಗಲೋ ಆವರಣದ ಕರೀಮುದ್ದೀನ್ ಮಸೀದಿ, ಗುಲ್ಬರ್ಗಾದ ಕಲಾಂ ಮಸೀದಿ, ದೊಡ್ಡಬಳ್ಳಾಪುರದ ಜಿಷ್ಮಾದರ್ಗಾ, ಬೆಳಗಾವಿಯ ಕೋಟೆ ಮಸೀದಿ, ಜಾಮಿ ಮಸೀದಿ ಇತ್ಯಾದಿಗಳೆಲ್ಲ  ಹಿಂದೂ ದೇವಾಲಯಗಳ ಕಲ್ಲುಗಳಿಂದ ನಿರ್ಮಿತವಾಗಿವೆ. (ವಿವರಗಳಿಗೆ, ಸೀತಾರಾಮ ಗೋಯಲ್ರ ''Hindu Temples:What happened to them (The Islamic evidence. ಬಾಬಾಬುಡನ್ಗಿರಿಯ ದತ್ತಾತ್ರೇಯ ಪೀಠವನ್ನು ಮುಸ್ಲಿಮರು ವಿರೂಪಗೊಳಿಸಲು ಯತ್ನಿಸಿದ್ದಾರೆ. ಬಿಜಾಪುರದ ಜಗತ್ ಪ್ರಸಿದ್ಧ ಇಬ್ರಾಹಿಂ ರೋಜಾ ಆವರಣದಲ್ಲಿ ಹಿಂದೂ ದೇವಾಲಯದ ಅವಶೇಷಗಳಿರುವುದನ್ನು ನಾನು ಗುರುತಿಸಿದ್ದೇನೆ. ಅದನ್ನು ಯಾರೂ ಗಮನಿಸಿಲ್ಲ. ಹಂಪಿಯ ಈರಣ್ಣನ ಗುಡಿಯು ಹೊನ್ನಾರ್ಸಾಬಿ ದರ್ಗಾ ಆಗಿದೆ.
ಇದನ್ನು ತಡೆಗಟ್ಟಲು ಇರುವ ಏಕೈಕ ಪರಿಹಾರ-ಹಿಂದೂಗಳ ಒಳಎಚ್ಚರ ಮತ್ತು ದೃಢಸಂಕಲ್ಪ. ಭಾರತದ ಒಳಗೆ, ಸುತ್ತಮುತ್ತ, ವಿಶ್ವದಾದ್ಯಂತ ಏನಾಗಿದೆ, ಏನಾಗುತ್ತಿದೆ ಎಂಬುದರ ಬಗ್ಗೆ ಜಾಗೃತವಾಗಿ ಮುಂದಿನ ಭವಿಷ್ಯದ ಬಗ್ಗೆ ಕಾತರ ಮೂಡಿಸಿಕೊಳ್ಳಬೇಕು. ತಮ್ಮ ರಾಷ್ಟ್ರ, ಧರ್ಮಗಳ ಬಗ್ಗೆ ನಿಜವಾದ ಅಭಿಮಾನ ಅವರಲ್ಲಿ ಮೂಡಬೇಕು; ಸತ್ಯವನ್ನು ನುಡಿಯುವುದರಲ್ಲಿ ಅಂತೆಯೇ ನಡೆಯುವುದರಲ್ಲಿ ನಿರ್ಭೀತರಾಗಬೇಕು.
ಸಹನೆ ಪ್ರಶಂಸನೀಯ; ಅಸಹನೆ ಅಕ್ಷಮ್ಯ; ಅತಿ ಸಹನೆ ಅತಿ ಅಕ್ಷಮ್ಯ. ಹಿಂದೂಗಳ ಇಂದಿನ ಅಸಹನೆಯು ಮುಂದುವರಿದರೆ ಮುಂದಿನ ಶತಮಾನದ ಭಾರತದ ಅಥವಾ 'ಇಂಡಿಯ'ದ ಅಲ್ಪಸಂಖ್ಯಾತ ಹಿಂದೂಗಳು ಮೇಲಿನ ಸತ್ಯವನ್ನು ಮನಗಾಣಲಿದ್ದಾರೆ- ಆದರೆ ಅವರು ಆ ಹೊತ್ತಿಗೆ ಸಂಪೂರ್ಣ ನಿಸ್ಸಾಹಯಕರೂ ಆಗಿರುತ್ತಾರೆ.
ಇದೇ ಪರಿಸ್ಥಿತಿ ಮುಂದುವರಿದರೆ ಹಿಂದೂಧರ್ಮ, ಭಾರತೀಯ ಸಂಸ್ಕೃತಿ ಕೇವಲ ಇತಿಹಾಸದ ಅಧ್ಯಯನ ವಸ್ತುವಾಗುವ ಕಾಲ ಬಂದೇ ಬರುತ್ತದೆ. ಇದು ನನ್ನ ನೋವಿನ, ಮನದಾಳದ, ಸಾತ್ವಿಕ ಆಕ್ರೋಶದ ಘೋಷಣೆ.
- ಡಾ. ಎಂ. ಚಿದಾನಂದಮೂರ್ತಿ
Published: 25 Jun 2013 02:00 AM IST

Friday, 24 February 2017

ಕರ್ನಾಟಕದ ಶಿವಶರಣರು ಮತ್ತು ಶ್ರೀ ರಾಮಕೃಷ್ಣ ಪರಮಹಂಸರು : ಕೆಲವು ಸಾಮ್ಯಗಳು


 greatfully - kanaja
ಒಂದು ನಿಶ್ಚಿತವಾದ ಎತ್ತರದ ಪ್ರಾಕೃತಿಕ ಪರಿಸರಗಳಲ್ಲಿ ಹವಾಮಾನ ಹಾಗೂ ಇನ್ನಿತರ ಲಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯವಾಗಿರುತ್ತವೆ. ವಾತಾವರಣದಲ್ಲಿನ ನಿರ್ಮಲತೆ, ಶಿಖರಗಳ ಭವ್ಯತೆ, ಮನಸ್ಸನ್ನು ಪ್ರಸನ್ನಗೊಳಿಸುವ ಪರಿಸರ, ಮೌನ, ಗಾಂಭೀರ್ಯ ಇತ್ಯಾದಿ ಲಕ್ಷಣಗಳು ಸಮಾನವಾಗಿ ಕಂಡುಬರುತ್ತವೆ. ಆದರೆ ಕೆಳಗಿನ ಸ್ತರದಲ್ಲಿನ ಏರಿಳಿತಗಳೂ, ವೈಪರೀತ್ಯಗಳೂ, ತುಮುಲಗಳೂ ಅನೇಕ ರೀತಿಯವಾಗಿರುತ್ತವೆ. ಅದರಂತೆಯೇ ಪ್ರಾಯೋಜನಿಕ ಪ್ರಪಂಚದ ಜಟಿಲ ಕುಟಿಲಮಯ ತುಮುಲ ವಲಯಗಳನ್ನು ಮೀರಿ ಮೇಲೇರಿದ ವ್ಯಕ್ತಿಗಳು ಜಗತ್ತಿನ ಯಾವುದೇ ದೇಶದ ಯಾವುದೇ ಕಾಲಗಳಲ್ಲಿಯೂ ಪಡೆಯುವ ಅನುಭವಗಳೂ, ಮಾಡುವ ಆಲೋಚನೆಗಳೂ, ಹೆಚ್ಚು ಕಡಿಮೆ ಸಮಾನವಾದ ಅಂಶಗಳನ್ನು ಒಳಗೊಂಡಿರುತ್ತವೆ. ಆ ಅನುಭವಗಳನ್ನು ಕುರಿತು ಅವರು ಬಳಸುವ ಭಾಷೆ, ಪರಿಭಾಷೆಗಳಲ್ಲಿ ವ್ಯತ್ಯಾಸಗಳಿದ್ದರೂ, ಆವರ ಅನುಭವಗಳು ವಿಶ್ವಸಾಮಾನ್ಯವೂ, ಜಗತ್ತಿನ ಬಗ್ಗೆ ಅಪಾರವಾದ ಅನುಕಂಪೆಯಿಂದ ಕೂಡಿದವುಗಳೂ ಅಗಿರುತ್ತವೆ.  ಇಂತಹ ಒಂದು ಎತ್ತರದ ನೆಲೆಗೆ ಏರಿದವರನ್ನು ನಾವು ಮಹಾವ್ಯಕ್ತಿಗಳೆಂದೋ, ಸಂತರೆಂದೋ. ಅನುಭಾವಿಗಳೆಂದೋ ಗುರುತಿಸುತ್ತೇವೆ. ಆಧುನಿಕ ಯುಗದ ಸಂತಶ್ರೇಷ್ಠರೂ. ಸರ್ವಧರ್ಮ ಸಮನ್ವಯಾಚಾರ್ಯರೂ, ಯುಗ ಪ್ರವರ್ತಕರೂ ಎಂಬ ಪ್ರಶಂಸೆ ಗೌರವಗಳಿಗೆ ಪಾತ್ರರಾಗಿರುವ ಶ್ರೀ ರಾಮಕೃಷ್ಣ ಪರಮಹಂಸರು ಈ ಬಗೆಯ ಎತ್ತರಕ್ಕೆ ಏರಿದ ಮಹಾ ಅನುಭಾವಿಗಳು.
ಶ್ರೀ ರಾಮಕೃಷ್ಣರ ಬದುಕು ಹಾಗೂ ಬೋಧನೆಗಳನ್ನು ಗಮನಿಸಿದರೆ, ಅವರ ಅನುಭವ ಹಾಗೂ ವಿಚಾರಗಳು ಜಗತ್ತಿನ ಎಲ್ಲ ದೇಶದ, ಎಲ್ಲ ಕಾಲದ ಇದೇ ಬಗೆಯ ವ್ಯಕ್ತಿಗಳ ಅನುಭವ ಮತ್ತು ವಿಚಾರಗಳೊಂದಿಗೆ ಸಂವಾದಿಯಾಗುವುದನ್ನು ಗುರುತಿಸಬಹುದು. ಇದರಿಂದ ನಿಷ್ಟನ್ನವಾಗುವ ಸಂಗತಿಯೇನೆಂದರೆ, ರಾಮಕೃಷ್ಣರ ಮೂಲಕ ಈ ಅನುಭಾವಿಕ ಪರಂಪರೆ ಮುಂದುವರಿದುಕೊಂಡು ಬಂದಿದೆ ಅನ್ನುವುದು ಮಾತ್ರವಲ್ಲ, ಶ್ರೀ ರಾಮಕೃಷ್ಣರ ವ್ಯಕ್ತಿನಿಷ್ಠ ಆಧ್ಯಾತ್ಮಿಕ ಪ್ರಯೋಗಾಲಯದ ಮೂಲಕ ಪ್ರಮಾಣೀಕರಿಸಲ್ಪಟ್ಟು ಪುನರ್ ವ್ಯಾಖ್ಯಾನವನ್ನು ಪಡೆದುಕೊಂಡು ಅನನ್ಯವಾಗಿದೆ. ಈ ಕಾರಣದಿಂದ ಜಗತ್ತಿನ ಇದೇ ಬಗೆಯ ಸಾಧಕವರೇಣ್ಯರ ಅನುಭವಗಳ ಮೂಲಕ ಶ್ರೀ ರಾಮಕೃಷ್ಣರನ್ನೂ, ಶ್ರೀ ರಾಮಕೃಷ್ಣರ ಮೂಲಕ ಇದೇ ಬಗೆಯ ಇತರರ ಅನುಭವಗಳನ್ನೂ ನೋಡುವುದು ಅತ್ಯಂತ ಅಗತ್ಯವೂ, ಮೌಲಿಕವೂ ಆದ ಸಂಗತಿಯಾಗಿದೆ.
ನಿದರ್ಶನಕ್ಕೆ ಕರ್ನಾಟಕದ ಹನ್ನೆರಡನೆಯ ಶತಮಾನದ ಶಿವಶರಣರ ಅಥವಾ ವಚನಕಾರರ ಅನುಭವ ಹಾಗೂ ವಿಚಾರಗಳನ್ನು ನೋಡೋಣ: ಶಿವಶರಣರು ಎಂಬ ಈ ಮಾತನ್ನು ಬಸವಣ್ಣನವರ ವ್ಯಕ್ತಿ ಕೇಂದ್ರದಲ್ಲಿ ನಡೆದ ಸಾಮಾಜಿಕ- ಧಾರ್ಮಿಕ ಆಂದೋಳನವೊಂದರಲ್ಲಿ ಪಾಲುಗೊಂಡ ಜನ ಸಮೂಹವನ್ನು ಕುರಿತು ಬಳಸಲಾಗಿದೆ. ಈ ಶಿವಶರಣರು ತಮ್ಮ ಅಂತರಂಗದ ಅನುಭವಗಳನ್ನು ಅಚ್ಚಗನ್ನಡದ ಗದ್ಯ- ಪದ್ಯ ರೂಪದ ಅಭಿವ್ಯಕ್ತಿಯೊಂದರಲ್ಲಿ ತೋಡಿಕೊಂಡದ್ದರಿಂದ ಈ ರೂಪಗಳನ್ನು ‘ವಚನ’ಗಳೆಂದು ಕರೆಯಲಾಗಿದೆ. ಪ್ರತಿಯೊಬ್ಬರೂ ಹೀಗೆ ವಚನಗಳನ್ನು ಬರೆದದ್ದರಿಂದ ಅವರನ್ನು ‘ವಚನಕಾರ’ರೆಂದೂ ಕರೆಯಲಾಗುತ್ತಿದೆ. ಅಂದಿನ ಸಮಾಜದ ವಿವಿಧ ಸ್ತರಗಳಿಂದ ಬಂದ ಈ ವಚನಕಾರರು ವೈದಿಕ ಸಂಪ್ರದಾಯದ ವರ್ಣ ವ್ಯವಸ್ಥೆಯ ಜೀವ ವಿರೋಧೀ ಹಾಗೂ ಜೀವನ ವಿರೋಧೀ ಧೋರಣೆಗಳನ್ನು ಪ್ರಶ್ನಿಸುತ್ತ. ಪ್ರತಿಭಟಿಸುತ್ತ. ಶಿವಭಕ್ತಿಯ ಮೂಲಮಾನದಲ್ಲಿ ಸಮಾನತಾ ಸಮಾಜವೊಂದನ್ನು ನೆಲೆಗೊಳಿಸುವ ‘ವೀರಶೈವ’ವೆಂಬ ಧರ್ಮವನ್ನು ಪ್ರವರ್ತನಗೊಳಿಸಿದರು. ಗಂಡೆನ್ನದೆ. ಹೆಣ್ಣೆನ್ನದೆ. ಮೇಲೆನ್ನದೆ, ಕೀಳೆನ್ನದೆ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಧಾರ್ಮಿಕ ನೆಲೆಯೊಂದನ್ನು ಆ ಕಾಲಕ್ಕಾದರೂ ನಿರ್ಮಿಸುವ ಸಾಹಸದಲ್ಲಿ ತೊಡಗಿದವರು. ಈ ಶಿವಶರಣರು ಅಥವಾ ವಚನಕಾರರು ಏಕಕಾಲಕ್ಕೆ ಆಧ್ಯಾತ್ಮಿಕ ಸಾಧಕರೂ, ಸಮಾಜ ಸುಧಾರಕರೂ ಆಗಿದ್ದಾರೆ. ತಮ್ಮ ಆಧ್ಯಾತ್ಮಿಕ ಅನುಭವಕ್ಕೆ ಅವರು ಕೊಟ್ಟ ಹೆಸರು ‘ಅನುಭಾವ’ ಅನ್ನುವುದು. ಈಗ ಇಂಗ್ಲಿಷಿನಲ್ಲಿ ಇರುವ ‘ಮಿಸ್ಟಿಸಿಸಂ’ ಎಂಬ ಪದಕ್ಕೆ, ಸರಿಯಾದ ಕನ್ನಡ ಪದವೆಂದರೆ, ‘ಅನುಭಾವ’. ‘ಅನುಭಾವ’ ದೈವೀ ಅನುಭವವನ್ನು ಕುರಿತು ಹೇಳುವ ಮಾತು. ಜೀವ ದೈವತ್ವಕ್ಕೆ ಹಂಬಲಿಸುವುದು. ಆ ಅನುಭವವನ್ನು ಪಡೆಯುವುದು ಮತ್ತು ತಾನೇ ಅದಾಗುವುದು- ಈ ಅನುಭಾವದ ಲಕ್ಷಣ. ‘ಅನುಭಾವ’ ಎಂಬ ಈ ಪದವನ್ನು ಭಾರತೀಯ ತತ್ವಶಾಸ್ತ್ರದ ಭಂಡಾರಕ್ಕೆ ಹನ್ನೆರಡನೆಯ ಶತಮಾನದಷ್ಟು ಹಿಂದೆ ಕೊಟ್ಟವರು ಈ ಶಿವಶರಣರು. ಈ ಶರಣರ ‘ಅನುಭಾವ’ ಸಾಧನೆಯಲ್ಲಿಯ ಎಷ್ಟೋ ವಿಚಾರಗಳು ಶ್ರೀ ರಾಮಕೃಷ್ಣರ ಅನುಭಾವಿಕ ವಿಚಾರಗಳನ್ನು ನೆನಪಿಗೆ ತರುವಷ್ಟು ಸಮೃದ್ಧವಾಗಿವೆ ಅನ್ನುವುದು ಸ್ವಾರಸ್ಯದ ಸಂಗತಿಯಾಗಿದೆ.
ಇಪ್ಪತ್ತನೆಯ ಶತಮಾನದ ಸಂತಶ್ರೇಷ್ಠರಾದ ಶ್ರೀ ರಾಮಕೃಷ್ಣರ ಹಾಗೂ ಇಂದಿಗೆ ಎಂಟು ಶತಮಾನಗಳ ಹಿಂದಿನ ಶಿವಶರಣರ ವಿಚಾರಗಳನ್ನು ಹೀಗೆ ಹೋಲಿಸಿ ನೋಡುವಾಗ ಅವರವರು ಬದುಕಿದ ಕಾಲ, ದೇಶ. ಪರಿಸರ ಮತ್ತು ಉದ್ದೇಶಗಳನ್ನು ನಿರ್ಲಕ್ಷಿಸಬಾರದು. ಶಿವಶರಣರ ಕೇಂದ್ರ ವ್ಯಕ್ತಿಯಾದ ಬಸವಣ್ಣನವರು ಶ್ರೀ ರಾಮಕೃಷ್ಣರಂತೆಯೇ ವೈದಿಕ ಸಂಪ್ರದಾಯಸ್ಥರ ಮನೆಯಲ್ಲಿ ಹುಟ್ಟಿದವರು ಮತ್ತು ಆ ವೈದಿಕ ಸಂಪ್ರದಾಯದ ತರ-ತಮ ಧೋರಣೆಗಳನ್ನು ಧಿಕ್ಕರಿಸಿದವರು. ‘ಸಕಲ ಜೀವಾತ್ಮರಿಗೆ ಲೇಸನೆ ಬಯಸುವ’ ಉದ್ದೇಶದವರು. ಬಸವಣ್ಣನವರ ಜತೆಗೆ ಬಂದು ಹೊಸ ಧಾರ್ಮಿಕ ಆಂದೋಳನಕ್ಕೆ ಸೇರಿಕೊಂಡವರಲ್ಲಿ. ಅಲ್ಲಮಪ್ರಭು. ಅಕ್ಕಮಹಾದೇವಿ. ಸಿದ್ಧರಾಮ ಇಂತಹ ಅನುಭಾವಿಗಳು ಮಾತ್ರವಲ್ಲ. ಅಂದಿನ ಸಮಾಜದ ವಿವಿಧ ಹಂತಗಳಿಂದ ಬಂದ ಶ್ರೀಸಾಮಾನ್ಯರೂ ಇದ್ದರು. ಹಾಗೆಯೇ ಶ್ರೀ ರಾಮಕೃಷ್ಣರ ವ್ಯಕ್ತಿತ್ವದಿಂದ ಆಕರ್ಷಿತರಾಗಿ ಅವರ ಬಳಿಗೆ ಬಂದವರೂ ಅಂದಿನ ಸಮಾಜದ ವಿವಿಧ ಸ್ತರಗಳನ್ನೂ, ಧಾರ್ಮಿಕ ಪಂಥಗಳನ್ನೂ ಪ್ರತಿನಿಧಿಸುವವರಾಗಿದ್ದಾರೆ. ಆದರೆ ಮುಖ್ಯವಾದ ವ್ಯತ್ಯಾಸವೆಂದರೆ ಶಿವಶರಣರು ಪುರೋಹಿತಶಾಹೀ ಪ್ರವೃತ್ತಿಯ ಕೇಂದ್ರಸ್ಥಾನಗಳಾಗಿದ್ದ ದೇವಸ್ಥಾನಗಳನ್ನು ಅತ್ಯಂತ ಉಗ್ರವಾಗಿ ನಿರಾಕರಿಸಿ. ದೈವತ್ವದ ಕಲ್ಪನೆಯನ್ನು ಮನುಷ್ಯನ ಶರೀರಕ್ಕೆ ಹಾಗೂ ಆತ ಧರಿಸಬೇಕಾದ ಇಷ್ಟಲಿಂಗದ ಕಡೆಗೆ ಸ್ಥಳಾಂತರಿಸಿದರು. ಆದರೆ ಶ್ರೀ ರಾಮಕೃಷ್ಣರು ದಕ್ಷಿಣೇಶ್ವರದ ಕಾಳಿಯ ದೇವಸ್ಥಾನದಲ್ಲಿ ಇದ್ದುಕೊಂಡು, ಜಗನ್ಮಾತೆಯಾದ ಕಾಳಿಯ ಉಪಾಸನೆಯ ಮೂಲಕವೇ ತಮ್ಮ ಅಧ್ಯಾತ್ಮ ಸಿದ್ಧಿಯನ್ನು ಪಡೆದವರು. ಒಂದು ಮಾತಿನಲ್ಲಿ ಹೇಳುವುದಾದರೆ. ಶ್ರೀ ರಾಮಕೃಷ್ಣರು ದೇವಸ್ಥಾನದಲ್ಲಿ ಇದ್ದುಕೊಂಡೇ ದೇವಸ್ಥಾನವನ್ನು ಮೀರಿದವರು. ಆದರೆ ಶಿವಶರಣರು ದೇವಸ್ಥಾನಗಳನ್ನು ನಿರಾಕರಿಸಿ, ಇಷ್ಟಲಿಂಗ ನಿಷ್ಠೆಯ ಮೂಲಕ ವೀರಶೈವವೆಂಬ ಧರ್ಮವನ್ನು ನೆಲೆಗೊಳಿಸಿದವರು. ಶ್ರೀ ರಾಮಕೃಷ್ಣರು ದೇವಸ್ಥಾನವನ್ನೂ, ತಮ್ಮ ಇಷ್ಟ ದೈವವಾದ ಕಾಳಿಯನ್ನೂ ಮೀರಿದ್ದು ಮಾತ್ರವಲ್ಲ, ಜಗತ್ತಿನ ಸಮಸ್ತ ಧರ್ಮಗಳನ್ನೂ ತಮ್ಮ ಅದ್ಭುತವಾದ ಸಾಧನೆಯ ಮೂಲಕ ಸಾಕ್ಷಾತ್ಕರಿಸಿಕೊಂಡು ಎಲ್ಲ ಧರ್ಮದ ತಿರುಳೂ ಒಂದೇ ಎಂದು ಸಾರಿದ ಅತ್ಯಪೂರ್ವ ಮಹಾಸಂತರು; ಶಿವಶರಣರು ಅನುಭಾವದ ಗಮ್ಯವೆಂದು ವರ್ಣಿಸುವ ‘ಐಕ್ಯಸ್ಥಲ’ವನ್ನು ತಲುಪಿಯೂ ಅಲ್ಲಿಂದ ಕೆಳಕ್ಕೆ ಇಳಿದು ಬರುವ ಹಾಗೂ ಏರಿ ಹೋಗುವ ‘ನಿತ್ಯ’ಮತ್ತು ‘ಲೀಲೆ’ಯ ಶ್ರೇಣಿಗಳಲ್ಲಿ ನಿರಂತರ ಸಂಚಾರಿಯಾದವರು ಶ್ರೀ ರಾಮಕೃಷ್ಣರು.
ಭಗವತ್ ಪರವಾದ ಒಂದು ವ್ಯಾಕುಲತೆ ಎಲ್ಲ ಅನುಭಾವ ಸಾಧಕರ ಸಮಾನ ಲಕ್ಷಣವಾಗಿದೆ. ಶ್ರೀ ರಾಮಕೃಷ್ಣರು ಹಗಲೂ ಇರುಳೂ ಜಗನ್ಮಾತೆಯ ದೇವಸ್ಥಾನದಲ್ಲಿ ಅವಳ ಸಾಕ್ಷಾತ್ಕಾರಕ್ಕೆ ಹಂಬಲಿಸಿದವರು. ದೇವರಿಗಾಗಿ ನಿರಂತರವಾದ ವ್ಯಾಕುಲತೆಯಿದ್ದರೆ ಸಾಕು. ಆದರೆ ಈ ಲೋಕದಲ್ಲಿ “ಹೆಂಡತಿ ಮಕ್ಕಳಿಗಾಗಿ ಜನ ಬಿಂದಿಗೆ ತುಂಬ ಕಣ್ಣೀರು ಸುರಿಸುತ್ತಾರೆ. ಕಣ್ಣೀರು ಸಾಗರದಲ್ಲೆ ತೇಲಾಡಿಬಿಡುತ್ತಾರೆ ಹಣಕ್ಕಾಗಿ. ಆದರೆ ಭಗವಂತ ಬೇಕೆಂದು ಯಾರು ತಾನೇ ಕಣ್ಣೀರಿಡುತ್ತಾರೆ?” (ವ. ವೇ. ಪು. ೧೩ ಪೂ). ಎನ್ನುತ್ತಾರೆ ರಾಮಕೃಷ್ಣರು ಮಾಸ್ಟರ್ ಮಹಾಶಯನನ್ನು ಕುರಿತು. ಅಲ್ಲಮಪ್ರಭು ಇದಕ್ಕೆ ಸಂವಾದಿಯಾಗಿ “ಆಸೆಗೆ ಸತ್ತುದು ಕೋಟಿ. ಆಮಿಷಕ್ಕೆ ಸತ್ತುದು ಕೋಟಿ. ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರ, ನಿಮಗಾಗಿ ಸತ್ತವರನಾರನೂ ಕಾಣೆ” (ವ. ೯೧) ಎನ್ನುತ್ತಾರೆ. ಶ್ರೀ ರಾಮಕೃಷ್ಣರು ಈ ಬಗೆಯ ವ್ಯಾಕುಲ್‌ದಿಂದ ತೊಡಗಿದ ಸಾಧನೆಯನ್ನೂ, ಅದರ ವೈವಿಧ್ಯವನ್ನೂ, ಅದರ ರಮ್ಯಾದ್ಭುತಗಳನ್ನೂ ತಮ್ಮ ಭಕ್ತರಿಗೆ ಅನನ್ಯವಾದ ರೀತಿಯಲ್ಲಿ ವರ್ಣಿಸಿದರೆ, ಶಿವಶರಣರೂ ತಮ್ಮ ವಚನಗಳಲ್ಲಿ, ಭಕ್ತಸ್ಥಲದ ಪಾಡುಗಳನ್ನು ವೈವಿಧ್ಯಮಯವಾಗಿ ತೋಡಿಕೊಂಡಿದ್ದಾರೆ. ಚೆನ್ನಮಲ್ಲಿಕಾರ್ಜುನನಿಗೆ ಒಲಿದ ಅಕ್ಕಮಹಾದೇವಿ:
ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಒಲುಮೆ ನೆಟ್ಟು ಹಸಿವು ತೃಷೆ ನಿದ್ರೆಯ ತೊರೆದೆನಯ್ಯಾ. (ವ. ೨೭೧)
ಎಂದು ತನ್ನ ಅವಸ್ಥೆಯನ್ನು ಹೇಳಿಕೊಂಡರೆ, ಬಸವಣ್ಣನವರು-
ವಾರವೆಂದರಿಯೆ. ದಿನವೆಂದರಿಯೆ
ಏನೆಂದರಿಯೆನಯ್ಯಾ!
ಇರುಳೆಂದರಿಯೆ ಹಗಲೆಂದರಿಯೆ
ಏನೆಂದರಿಯೆನಯ್ಯಾ!
ನಿಮ್ಮುವ ಪೂಜಿಸಿ ಎನ್ನುವ ಮರೆದೆ.
ಕೂಡಲ ಸಂಗಮದೇವಾ.       (ವ. ೪೮೭)
ಎನ್ನುತ್ತಾರೆ. ಶ್ರೀ ರಾಮಕೃಷ್ಣರು ಕಾಳಿಯ ದೇವಸ್ಥಾನದಲ್ಲಿ ನಡೆಸಿದ ಕಠೋರ ಸಾಧನೆಯ ದಿನಗಳ ತೊಳಲಾಟವೂ ಇದೇ ರೀತಿಯದು. ಶ್ರೀ ರಾಮಕೃಷ್ಣರು ಈ ಲೋಕವನ್ನು ಕುರಿತು ಹೇಳುವಾಗ ಮತ್ತೆ ಮತ್ತೆ ಬಳಸುವ ಮಾತೆಂದರೆ ‘ಕಾಮಿನೀ- ಕಾಂಚನ’. ಮನುಷ್ಯ ಇವುಗಳ ಸೆಳೆತಕ್ಕೆ ವಶನಾಗಿ ದೈವತ್ವವನ್ನು ಮರೆಯುವುದಕ್ಕೆ ‘ಮಾಯೆ’ ಎಂದು ಹೇಳಲಾಗಿದೆ. ಬಸವಣ್ಣನವರು ತಮ್ಮ ಅನೇಕ ವಚನಗಳಲ್ಲಿ ಈ ‘ಕಾಂಚನ’ದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕಾಂಚನವೆಂಬ ನಾಯ ನೆಚ್ಚಿ ನಿಮ್ಮ ನಾನು ಮರೆದೆನಯ್ಯಾ; ಕಾಂಚನಕ್ಕೆ ವೇಳೆಯಲ್ಲದೆ ಲಿಂಗಕ್ಕೆ ವೇಳೆಯಿಲ್ಲ” (ನ.೩೧೩) “ಹೊನ್ನೆನ್ನದು. ಹೆಣ್ಣೆನ್ನದು. ಮಣ್ಣೆನ್ನದು” ಎಂದು ಮರುಳಾದೆ (ವ. ೩೦೯) ಎಂದು ತಮ್ಮ ತೊಳಲಾಟವನ್ನು ಕೂಡಲಸಂಗನಿಗೆ ತೋಡಿಕೊಂಡಿದ್ದಾರೆ. ಈ ಕಾಮಿನೀ- ಕಾಂಚನಗಳು ಒಂದು ನೆಲೆಯಲ್ಲಿ ಮಾಯೆಯಂತೆ ತೋರಿದರೂ ವಾಸ್ತವವಾಗಿ ಅವು ತಮಗೆ ತಾವೇ ಮಾಯೆಯಲ್ಲ. “ಇದು ನನಗೆ ಸೇರಿದ್ದು. ಇದು ನನಗೆ ಸೇರಿದ್ದು ಎಂಬುದಾಗಿ ಈ ವಸ್ತುಗಳನ್ನು ಪ್ರೀತಿಸುವುದಕ್ಕೆ ಮಾಯೆ ಅಂತ ಹೆಸರು” (ವ.ವೇ. ಪು. ೭೩೨ ಪೂ). ಎಂದು ರಾಮಕೃಷ್ಣರು ಹೇಳುವುದರ ಮೂಲಕ ಆ ವಸ್ತುಗಳ ಬಗ್ಗೆ ನಾವು ಇರಿಸಿಕೊಳ್ಳುವ ಆಸಕ್ತಿಯನ್ನೆ ಮಾಯೆ ಎಂದು ವ್ಯಾಖ್ಯಾನಿಸುತ್ತಾರೆ. ಅಲ್ಲಮಪ್ರಭು ಇದೇ ಅಭಿಪ್ರಾಯವನ್ನು ಇನ್ನೂ ಚೆನ್ನಾಗಿ ಹೇಳಿದ್ದಾರೆ: “ಹೊನ್ನು ಮಾಯೆಯೆಂಬರು, ಹೊನ್ನು ಮಾಯೆಯಲ್ಲ. ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ, ಮಣ್ಣು ಮಾಯೆಯೆಂಬರು, ಮಣ್ಣು ಮಾಯೆಯಲ್ಲ. ಮನದ ಮುಂದಣ ಆಸೆಯೆ ಮಾಯೆ ಕಾಣಾ ಗುಹೇಶ್ವರಾ!” (ವ.೭೨) ಒಟ್ಟಿನಲ್ಲಿ ಈ ಜಗತ್ತಿನ ವಸ್ತುಗಳ ವಿಚಾರದಲ್ಲಿ ನಮಗಿರುವ ಆಸಕ್ತಿಯೇ ಮಾಯೆ. ಇದಕ್ಕೆ ಇನ್ನೊಂದು ಹೆಸರು ‘ಸಂಸಾರ’. ಶ್ರೀ ರಾಮಕೃಷ್ಣರು ಈ ಸಂಸಾರವನ್ನು, ಅದು ಮಾಯೆ ಎಂಬ ಕಾರಣದಿಂದ ನಿರಾಕರಿಸಬೇಕು ಎಂದೇನೂ ಹೇಳುವುದಿಲ್ಲ. ಯಾಕೆಂದರೆ ಸಂಸಾರ ಕೂಡ ಭಗವಂತನ ಸೃಷ್ಟಿಯೇ. “ಭಗವಂತನೇ ಒಂದು ರೂಪದಲ್ಲಿ ಮಹಾಮಾಯೆಯಾಗಿದ್ದಾನೆ” (ವ. ವೇ. ಪು. ೭೮ ಪೂ). ಎನ್ನುತ್ತಾರೆ ಶ್ರೀ ರಾಮಕೃಷ್ಣರು. “ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯಾ” (ವ. ೯೦೩) ಎನ್ನುತ್ತಾರೆ ಬಸವಣ್ಣನವರು.
ಸಂಸಾರದ ಸ್ವರೂಪವೇ ‘ಮಾಯೆ’. ಮತ್ತೆ ಮತ್ತೆ ಬಂದು ಅವರಿಸಿಕೊಳ್ಳುವುದೇ ಮಾಯೆ. ರಾಮಕೃಷ್ಣರು ತಮ್ಮ ಅನುಭಾವಿ ಕಾಣ್ಕೆ (vision)ಯೊಂದನ್ನು ಹೀಗೆ ವರ್ಣಿಸುತ್ತಾರೆ: “ಆತ (ಭಗವಂತ) ಪಾಚಿ ಕಟ್ಟಿಕೊಂಡಿದ್ದ ದೊಡ್ಡ ಸರೋವರವೊಂದನ್ನು ತೋರಿಸಿದ. ಗಾಳಿ ಅದರ ಪಾಚಿಯನ್ನು ಸರಿಸಿತು. ಒಡನೆಯೇ ನೀರು ಕಾಣಿಸಿಕೊಂಡಿತು. ರೆಪ್ಪೆ ಹೊಡೆಯುವುದರ ಒಳಗೆ ಪಾಚಿ ಎಲ್ಲಾ ಕಡೆಗಳಿಂದಲೂ ಕುಣಿಯುತ್ತ ಕುಣಿಯುತ್ತ ಮತ್ತೆ ಕಟ್ಟಿಕೊಂಡು ಬಿಟ್ಟಿತು. ಆತ ತೋರಿಸಿದ. ನೀರೇ ಸಚ್ಚಿದಾನಂದ. ಪಾಚಿಯೇ ಮಾಯೆ ಅಂತ. ಮಾಯೆಯ ದೆಸೆಯಿಂದ ಸಚ್ಚಿದಾನಂದನನ್ನು ನೋಡಲಾಗುತ್ತಿಲ್ಲ” (ವ.ವೇ. ೫೯೧-೫೯೨ ಉತ್ತ) ರಾಮಕೃಷ್ಣರ ಈ ಕಾಣ್ಕೆಗೆ ಸಂವಾದಿಯಾಗಿದೆ ಚೆನ್ನಬಸವಣ್ಣನವರ ಈ ಒಂದು ವಚನ; “ಜ್ಞಾನಾಮೃತ ಜಲನಿಧಿಯ ಮೇಲೆ ಸಂಸಾರವೆಂಬ ಹಾವಸೆ ಮುಸುಕಿಹುದು. ನೀರಮೊಗೆವವರು ಬಂದು ನೂಂಕಿದಲ್ಲದೆ ತೆರಳದು. ಮರಳಿಮುಸುಕುವುದ ಮಾಣಿಸಯ್ಯ.” (ಚೆ.ಬ.ವ.೧೨೭೫)
ಸಂಸಾರವನ್ನು ಕುರಿತು ಸಾಮಾನ್ಯವಾಗಿ ಎರಡು ನಿಲುವುಗಳಿವೆ. ಒಂದು, ಲೋಕ ಶಿಕ್ಷಣದಲ್ಲಿ ತೊಡಗುವವರು ಸಂಪೂರ್ಣವಾಗಿ ಸಂಸಾರವನ್ನು ತ್ಯಾಗ ಮಾಡಬೇಕು. ಇನ್ನುಳಿದವರು ಸಂಸಾರದೊಳಗೆ ಇದ್ದೂ ಅನಾಸಕ್ತರಾಗಿ ಬದುಕಿ ಸಾಧನೆ ಮಾಡಬೇಕು. ಈ ಮಾತನ್ನು ಮತ್ತೆ ಮತ್ತೆ ರಾಮಕೃಷ್ಣರು ಹೇಳುತ್ತಾರೆ. “ಮೊದಲು ಕೈಗೆ ಎಣ್ಣೆ ಸವರಿಕೊಂಡು ಬಳಿಕ ಹಲಸಿನ ಹಣ್ಣು ಬಿಡಿಸಬೇಕು. ಇಲ್ಲದಿದ್ದರೆ ಕೈಗೆ ಅಂಟು ಹತ್ತಿಕೊಳ್ಳುತ್ತದೆ. ಭಗವದ್ ಭಕ್ತಿ ಎಂಬ ಎಣ್ಣೆಯನ್ನು ಮೊದಲು ಹವಣಿಸಿಕೊಂಡು ಬಳಿಕ ಸಾಂಸಾರಿಕ ಕಾರ್ಯಗಳಲ್ಲಿ ಕೈ ಇಡಬೇಕು” (ವ.ವೇ. ಪು.೧೧ ಪೂ). ಸಂಸಾರದೊಳಗೇ ಇದ್ದುಕೊಂಡು ಸಾಧನೆ ಮಾಡುವವರು’ “ಕೋಟೆಯೊಳಗೆ ನಿಂತು ಯುದ್ಧ ಮಾಡಿದ ಹಾಗೆ” (ವ.ವೇ. ಪು. ೩೧೯ ಪೂ). ಮೂಲತಃ ಇದೊಂದು ಯುದ್ಧ ಹಾಗೂ ಸವಾಲು. ಶಿವಶರಣರ ನಿಲುವು ಕೂಡಾ ಸಂಸಾರವನ್ನು ಕುರಿತು ಇದೇ ರೀತಿಯದು. ಬಸವಣ್ಣನವರ ಮಾತಿನಲ್ಲಿ ಹೇಳುವುದಾದರೆ “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ” (ವ. ೧೫೫) ಊ ಲೋಕ. ಸೃಷ್ಟಿಕರ್ತನ ಟಂಕಸಾಲೆ. ಇದರಲ್ಲಿ ತಯಾರಾದ ನಾಣ್ಯ ಇಲ್ಲಿಯೂ ಸಲ್ಲುತ್ತದೆ. ಅಲ್ಲಿಯೂ ಸಲ್ಲುತ್ತದೆ. ಈ ಸಲ್ಲುವ ಗುಣವನ್ನು ಜೀವ ಇಲ್ಲಿ ಪಡೆದುಕೊಳ್ಳಬೇಕು. ಅಲ್ಲಮಪ್ರಭು ಹೇಳುವಂತೆ ಈ ಸಂಸಾರ ಒಂದು ‘ಕೊಟ್ಟ ಕುದುರೆ’. ‘ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ. ಧೀರರೂ ಅಲ್ಲ” (ವ. ೧೨೭). ಆದ ಕಾರಣ ದೈವದತ್ತವಾದ ಈ ಬದುಕನ್ನು ಹತ್ತಿ ಸವಾರಿ ಮಾಡಿ ಪಳಗಿಸಬೇಕು. ರಾಮಕೃಷ್ಣರು ಹೇಳುವಂತೆ “ದೋಣಿ ನೀರಿನ ಮೇಲೆ ನಿಲ್ಲಬೇಕು. ನೀರು ದೋಣಿಯೊಳಗೆ ನಿಲ್ಲಬಾರದು”. ಸಂಸಾರ ಭಯಂಕರವಾದದ್ದು ನಿಜ. ಅದಕ್ಕೂ ನಮಗೂ ಇರುವ ಸಂಬಂಧ ಬಸವಣ್ಣನವರ ಮಾತಿನಲ್ಲಿ ಹೇಳಬೇಕಾದರೆ “ಹಾವು ಹಾವಾಡಿಗನ ಸ್ನೇಹದಂತೆ”. (ವ.೧೨); ಅದು ಯಾವಾಗ ಹೇಗೆ ಕಚ್ಚುವುದು ತಿಳಿಯದು. ಆದ್ದರಿಂದ ಅಕ್ಕಮಹಾದೇವಿ ಹೇಳುವಂತೆ “ಹಾವಿನ ಬಾಯ ಹಲ್ಲ ಕಳೆದು ಹಾವನಾಡಿಸಬಲ್ಲಡೆ ಹಾವಿನ ಸಂಗವೇ ಲೇಸು ಕಂಡಯ್ಯ” (ವ.೧೦೦) ಸಂಸಾರವೆಂಬ ಹಾವಿನ, ಕಾಮ- ಕ್ರೋಧಾದಿಗಳ ವಿಷದ ಹಲ್ಲನ್ನು ಕಿತ್ತು ಅದರ ಸಹವಾಸದಲ್ಲಿರುವುದಾದರೆ, ಹಾಗೇ ಮಾಡಬಹುದು. ಈ ಒಂದು ಎಚ್ಚರವನ್ನು ಶ್ರೀ ರಾಮಕೃಷ್ಣರು ತಮ್ಮ ಅಂತರಂಗದ ಶಿಷ್ಯರಿಗೂ ಗೃಹಸ್ಥ ಭಕ್ತರಿಗೂ ಬೇರೆ ಬೇರೆಯ ಮಾತುಗಳಲ್ಲಿ ಹೇಳಿದ್ದಾರೆ. ಸಂಸಾರದೊಳಗಿರುವ ಬದ್ಧ ಜೀವರು ತಾನೇ  ನೇಯ್ದ ನೂಲಿನ ಗೂಡಿನಲ್ಲಿ ಸಿಕ್ಕಿಬಿದ್ದ ರೇಷ್ಮೆ ಹುಳುವಿನ ಹಾಗೆ. “ಅವರನ್ನು (ಸಂಸಾರಿಗಳನ್ನು) ರೇಷ್ಮೆ ಹುಳುವಿಗೆ ಹೋಲಿಸಬಹುದು. ಅದು ಇಚ್ಛೆಪಟ್ಟರೆ ತನ್ನ ಗೂಡನ್ನು ಕತ್ತರಿಸಿ ಹೊರಕ್ಕೆ ಬರಬಲ್ಲುದು. ಆದರೆ ಬಹಳ ಪ್ರಯಾಸಪಟ್ಟು ತಾನೇ ಗೂಡನ್ನು ಕಟ್ಟಿರುವುದರಿಂದ ಅದು ಹಾಗೆ ಮಾಡಲಿಚ್ಛಿಸದು. ಅದು ಅಲ್ಲೇ ಸಾಯುತ್ತದೆ” (ವ. ವೇ.ಪು. ೧೫೧: ೨೪೯: ೪೭೭ ಪೂ). ಶ್ರೀ ರಾಮಕೃಷ್ಣರ ಈ ದೃಷ್ಟಾಂತ ಅಕ್ಕಮಹಾದೇವಿಗೂ ಪ್ರಿಯವಾದದ್ದು. “ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ. ತನ್ನ ನೂಲು ತನ್ನನೆ ಸುತ್ತಿ ಸಾಯುವಂತೆ ಮನಬಂದುದ ಬಯಸಿ ಬೇವುತಿದ್ದೇನೆ ಅಯ್ಯಾ” (ವ. ೩೨) ಎಂದು ತನ್ನ ಸ್ಥಿತಿಯನ್ನು ಸಂಸಾರಿಗಳೆಲ್ಲರ ಪರವಾಗಿ ವರ್ಣಿಸಿಕೊಳ್ಳುತ್ತಾಳೆ. ಈ ಆಸೆಯ ಬಲೆಯಿಂದ ಪಾರಾಗಿ ಹೋಗಬೇಕಾದರೆ ಇರುವುದು ಎರಡೇ ದಾರಿ: ಸಂಪೂರ್ಣ ಸಂಸಾರ ತ್ಯಾಗ ಅಥವಾ ಮಾನಸಿಕವಾಗಿ ಸಂಸಾರ ತ್ಯಾಗ ಮಾಡುತ್ತ ಅನಾಸಕ್ತವಾಗಿ ಬದುಕುವುದು. ಈ ಸ್ಥಿತಿಯಿಂದ ಬ್ರಹ್ಮ ಸಾಕ್ಷಾತ್ಕಾರವಾಯಿತು ಅಂದ ಮೇಲೆ ಈ ಲೋಕ ಮಾಯೆಯೂ ಅಲ್ಲ. ಮಿಥ್ಯೆಯೂ ಅಲ್ಲ. ಈ ಜೀವ ಜಗತ್ತಿಗೂ ಭಗವಂತನಿಗೂ ಇರುವ ಸಂಬಂಧ ಮಹಾಸಮುದ್ರಕ್ಕೂ ಅದರಲ್ಲಿ ಉದ್ಭವಿಸುವ ಗುಳ್ಳೆಗಳಿಗೂ ಇರುವ ಸಂಬಂಧದಂತೆ ಎನ್ನುತ್ತಾರೆ ರಾಮಕೃಷ್ಣರು: “ಭಗವಂತನನ್ನು ಒಂದು ಮಹಾಸಮುದ್ರಕ್ಕೂ ಜೀವಗಳನ್ನು ಅದರಲ್ಲಿ ತೇಲೋ ಗುಳ್ಳೆಗಳಿಗೂ ಹೋಲಿಸಬಹುದು. ಅವು ಆತನಲ್ಲಿಯೆ ಉದ್ಭವಿಸಿ ಆತನಲ್ಲಿಯೇ ಲಯವಾಗುತ್ತವೆ’ (ವ. ವೇ. ಪು ೪೯೮ ಉತ್ತ). ವಚನಕಾರ ಚಂದಿಮರಸನಿಗೆ ಸ್ಫುರಿಸುವುದು ಇದೇ ದೃಷ್ಟಾಂತವೇ’ ಘನ ಗಂಭೀರ ಮಹಾವಾರಿಧಿಯಲ್ಲಿ ‘ಘನ ತರಂಗ ಬುದ್ಭುದಂಗಳಾದುವಲ್ಲದೆ, ಬೇರಾಗಬಲ್ಲುದೆ? ಆತ್ಮನೆಂಬ ಅಂಬುಧಿಯಲ್ಲಿ ಸಕಲ ಬ್ರಹ್ಮಾಂಡ ಕೋಟಿಗಳಾದುವಲ್ಲದೆ ಬೇರಾಗಬಲ್ಲುವೆ? (ವ. ೯೦೩. ಸಂಕೀರ್ಣ ವಚನಗಳು)
ರಾಮಕೃಷ್ಣರು ಹೇಳುತ್ತಾರೆ: “ಜಗತ್ತು ಮಿಥ್ಯೆಯೇಕಾದೀತು?… ಭಗವಂತನ ದರ್ಶನವಾದ ನಂತರ ಬೋಧೆಯಾಗುತ್ತದೆ. ಆತನೇ ಜೀವ ಜಗತ್ತು ಆಗಿರುವುದಾಗಿ” (ವ.ವೇ. ಪು. ೫೧೬ ಪೂ). ಮತ್ತು ಈ ಹಂತದಲ್ಲಿ “ಯಾವ ಹೆಂಗಸನ್ನು ಕಂಡರೆ ಬಹಳ ಎಚ್ಚರಿಕೆಯಿಂದಿರಬೇಕೋ. ಭಗವಂತನ ದರ್ಶನಾನಂತರ ಅದೇ ಹೆಂಗಸು ಸಾಕ್ಷಾತ್ ಭಗವತಿಯೆ ಎಂಬ ಬೋಧೆಯಾಗುತ್ತದೆ” (ವ.ವೇ. ಪು. ೧೦೦ಉತ್ತ). ಶಿವಶರಣ  ಸಿದ್ಧರಾಮನೂ ಈ ಮಾತನ್ನು ಹೇಳುತ್ತಾನೆ “ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧ ಮಲ್ಲಿಕಾರ್ಜುನ ನೋಡಾ” (ವ. ೧೨೪೨). ಕೈಹಿಡಿದ ಹೆಂಡತಿಯನ್ನೂ ಶ್ರೀ ರಾಮಕೃಷ್ಣರು ಸಾಕ್ಷಾತ್ ಭಗವತಿಯೆ ಎಂದು ಕಂಡದ್ದು ಈ ಒಂದು ನಿಲುವಿನಲ್ಲಿಯೇ.
ಸಾಧನೆ ಅನ್ನುವುದು ತನ್ನೊಳಗಿರುವ ದೈವತ್ವದ ಸಾಕ್ಷಾತ್ಕಾರದ ಪ್ರಯತ್ನ. ತನ್ನಲ್ಲಿ ದೈವತ್ವ ಇದೆ ಎಂದು ತಿಳಿದಿರುವುದು ಬೇರೆ; ಅದನ್ನು ಕುರಿತು ವಿಚಾರ ಮಾಡುವುದು ಬೇರೆ; ಅದನ್ನು ಸ್ವಯಂ ಅನುಭವಕ್ಕೆ ತಂದುಕೊಳ್ಳುವುದೇ ಬೇರೆ. ರಾಮಕೃಷ್ಣರು ಹೇಳುತ್ತಾರೆ. “ನಿನ್ನ ಆಂತರ್ಯದಲ್ಲಿ ಚಿನ್ನದ ಗಟ್ಟಿ ಇದೆ. ನಿನಗೆ ಗೊತ್ತಾಗಿಲ್ಲ. ಅದರ ಮೇಲೆ ಮಣ್ಣು ಮುಚ್ಚಿಕೊಂಡಿದೆ” (ವ.ವೇ.ಪು. ೬೩ ಪೂ). ಇದೇ ಮಾತನ್ನು ಅಲ್ಲಮಪ್ರಭುಗಳು, ಆ ಪರತತ್ವ “ನೆಲದ ಮರೆಯ ನಿಧಾನದಂತೆ (ವ.೪).” ಅಂದರೆ ನೆಲದಲ್ಲಿ ಹೂತಿಟ್ಟಿರುವ ನಿಧಿಯಂತೆ ಅನ್ನುತ್ತಾರೆ. “ಕಟ್ಟಿಗೆಯಲ್ಲಿ ಬೆಂಕಿ ನಿಶ್ಚಯವಾಗಿ ಇದೆ ಎಂಬ ನಂಬಿಕೆ ಒಂದು: ಕಟ್ಟಿಗೆಯಿಂದ ಬೆಂಕಿ ಉತ್ಪನ್ನ ಮಾಡಿ ಊಟ ಮಾಡಿ ಶಾಂತಿ ಅಥವಾ ತೃಪ್ತಿಯನ್ನು ಪಡೆಯೋದು ಇನ್ನೊಂದು; ಇವೆರಡಕ್ಕೂ ಅಜಗಜಾಂತರ ವ್ಯತ್ಯಾಸ” (ವ.ವೇ. ಪು. ೧೪೪ ಉತ್ತ). ವಚನಕಾರರು ಇದೇ ಮಾತನ್ನು ಮತ್ತೆ ಮತ್ತೆ ಹೇಳುತ್ತಾರೆ. “ಮರದೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ”
(ವ. ೯೦೬) ಎಂದು ಜೇಡರ ದಾಸಿಮಯ್ಯ ಹೇಳುವ ಮಾತಿನಲ್ಲಿ. ಮರದೊಳಗೆ ಬೆಂಕಿ ಇದೆ. ನಿಜ, ಅದರೆ ಅದನ್ನು ಮಂಥನ ಕ್ರಿಯೆಯಿಂದ ಕಂಡುಕೊಳ್ಳಬೇಕು. ಅಂತರಂಗದಲ್ಲೇ ಇರುವ ಈ ಅನುಭವ ಕಿರುವನೆಯೊಳಗೆ ರತ್ನವನ್ನಿರಿಸಿ ಬೀಗಹಾಕಿದ ಹಾಗೆ. “ಕಿರುಮನೆಯೊಳಗಿರೋ ರತ್ನ ನೋಡಬೇಕಾದರೆ, ಬೀಗದ ಕೈ ವಿಚಾರಿಸಿ ತಂದು ಬಾಗಿಲು ತೆರೆಯಬೇಕಾಗುತ್ತದೆ” (ವ.ವೇ. ಪು. ೯೯ ಪೂ) ಎಂದು ಹೇಳುತ್ತಾರೆ ರಾಮಕೃಷ್ಣರು. ಶಿವಶರಣರಲ್ಲಿ ಒಬ್ಬನಾದ ಬೊಕ್ಕಸದ ಚಿಕ್ಕಣ್ಣ- ಅವನ ಹೆಸರೇ ಸೂಚಿಸುವಂತೆ ಬೊಕ್ಕಸದ (ರಾಜನ ಭಂಡಾರದ) ಉಸ್ತುವಾರಿಯಲ್ಲಿದ್ದಾತ, ಹೇಳುತ್ತಾನೆ. “ಅಂಗದ ಬೊಕ್ಕಸ ಮಂದಿರಕ್ಕೆ ಚಿದ್ಘನಲಿಂಗ- ವೆಂಬುದೊಂದು ಬೀಗ… ಎಸಳ ತೆಗೆವುದಕ್ಕೆ ಬೀಗದ ಕೈಯ್ಯ ಕಾಣೆ” (ವ. ೧) ಎನ್ನುವ ವಚನ. ಆ ದೈವೀ ಅನುಭವ ಬೊಕ್ಕಸದೊಳಗಣ ಸಂಪತ್ತಿನಂತೆ; ಅದರೆ ಹೇಗೋ ಮಾಡಿ ಅದರ ಬೀಗದ ಕೈಯನ್ನು ಪಡೆದುಕೊಳ್ಳಬೇಕು ಅನ್ನುವುದನ್ನು ತಿಳಿಸುತ್ತದೆ.
ಈ ನಿರಂತರ ಪ್ರಯತ್ನ ಅಥವಾ ಸಾಧನೆಯ ಮೊದಲ ಉದ್ದೇಶ. ಭಗವತ್ಪರವಾದ ಅನುರಾಗವನ್ನು ಸ್ಥಾಯಿಯನ್ನಾಗಿ ಮಾಡಿಕೊಳ್ಳುವುದೇ  ಅಗಿದೆ. ಅದಕ್ಕಾಗಿಯ ನಿರಂತರ ಜಪ-ತಪ-ಪೂಜೆ ಪ್ರಾರ್ಥನಾದಿ ಕರ್ಮಗಳೆಲ್ಲಾ. ತತ್ಪರಿಣಾಮವಾಗಿ ಯಾವಾಗ ಭಕ್ತನ ಹೃದಯದಲ್ಲಿ, ಭಗವತ್ಪರವಾದ ಅನುರಾಗ ನೆಲೆ ನಿಲ್ಲುವಂತಾಗುವುದೋ ಆಗ ಈ ಕರ್ಮಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಶ್ರೀ ರಾಮಕೃಷ್ಣರು ಹೇಳುತ್ತಾರೆ: “ಗಾಳಿ ಬೀಸದವರೆಗೆ ಮಾತ್ರವೇ ಬೀಸಣಿಗೆಯ ಅವಶ್ಯಕತೆ, ತೆಂಕಣ ಗಾಳಿ ಬೀಸತೊಡಗಿತೆಂದರೆ ಬೀಸಣಿಗೆಯನ್ನು ಕೆಳಕ್ಕೆ ಇಟ್ಟುಬಿಡಬಹುದು. ಬಳಿಕ ಬೀಸಣಿಗೆಯ ಆವಶ್ಯಕತೆ ಏನಿದೆ?” (ವ. ವೇ. ಪು. ೬೨ ಪೂ). ಇದೇ ಮಾತನ್ನು ವಚನಕಾರ ಚಂದಿಮರಸ ಹೇಳುವುದು ಹೀಗೆ: “ಗಾಳಿ  ಬೀಸುವಲ್ಲಿ ಕೇಳೆಲವೊ, ಬೀಸಣಿಗೆಯ ಉಸಿರೆಂತು ಮರೆವುದು ಹೇಳಾ ಮರಳೆ?” (ವ. ೫೯೮: ಸಂಕೀರ್ಣ ವಚನಗಳು). ವಚನಕಾರರ ಹಾಗೂ ರಾಮಕೃಷ್ಣರ ಈ ವಿಚಾರ ಸಾಮ್ಯ ಗಮನಿಸತಕ್ಕದ್ದಾಗಿದೆ.
ದೈವೀ ಅನುಭವ ಕೇವಲ ವಿಚಾರಕ್ಕೆ ಹೇಗೆ ದಕ್ಕುವುದಿಲ್ಲವೋ ಹಾಗೆಯೇ ಅದು ಪುಸ್ತಕ ಪಾಂಡಿತ್ಯ ಮತ್ತು ಶಾಸ್ತ್ರ ಜ್ಞಾನಗಳಿಗೆ ಅತೀತವಾದದ್ದು ಎನ್ನುವ ಸಂಗತಿ ಶಿವಶರಣರಿಗೂ ರಾಮಕೃಷ್ಣರಿಗೂ ಸಮಾನವಾದ ಅಂಶವಾಗಿದೆ. ರಾಮಕೃಷ್ಣರು ನಿರರ್ಗಳವಾಗಿ ಭಗವದ್  ವಿಷಯಕವಾದ ಮಾತುಗಳನ್ನಾಡುವುದನ್ನು ಮೊದಲಿಗೆ ಕಂಡ ಮಾಸ್ಟರ್ ಮಹಾಶಯ, ಅವರು ಬಹಳವಾಗಿ ಪುಸ್ತಕ- ಗಿಸ್ತಕ ಓದಿಕೊಂಡಿರಬಹುದೆಂದು ತರ್ಕಿಸುತ್ತಾನೆ. ಆದರೆ ಅವನ ತರ್ಕ ಸುಳ್ಳೆಂದು ಅನಂತರ ಗೊತ್ತಾಗುತ್ತದೆ. ಹಾಗೆ ನೋಡಿದರೆ ರಾಮಕೃಷ್ಣರು ಒಂದರ್ಥದಲ್ಲಿ ಪುಸ್ತಕ ಜ್ಞಾನದ ವಿದ್ಯೆಗೆ ದೂರವಾದವರು. ಒಂದು ಹಂತದಲ್ಲಿ ಅವರು ಅದನ್ನು ನಿರಾಕರಿಸುತ್ತಾರೆ ಕೂಡಾ. ಆದರೆ, ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುತ್ತದೆಯೋ. ಆ ನಿಜವಾದ ನಿಧಿಯನ್ನೇ ನಿರಂತರವಾದ ಸಾಧನೆಯಿಂದ ಪಡೆದುಕೊಂಡವರು ಅವರು. ಅವರು ಮತ್ತೆ ಮತ್ತೆ ಹೇಳುತ್ತಾರೆ. “ಪಾಂಡಿತ್ಯದಿಂದ ಭಗವಂತನನ್ನು ಪಡೆಯಲಾಗುವುದಿಲ್ಲ. ಆತ ವೇದ ಪುರಾಣ ತಂತ್ರ ಈ ಎಲ್ಲ ಶಾಸ್ತ್ರಗಳಿಗೂ ಅತೀತ”- (ವ.ವೇ ಪು. ೭೦೦ ಉತ್ತ). ಆತನನ್ನು ಅರಿತುಕೊಳ್ಳ್ಳುವ ಬದಲು ಈ ಶುಷ್ಕ ಪಾಂಡಿತ್ಯ ಸಂಪಾದನೆಗಾಗಿ ಇರುವ ಕಾಲವನ್ನು ವ್ಯರ್ಥಮಾಡಬಾರದು. “ನಾನು ತೋಟಕ್ಕೆ ಬಂದಿರುವುದು ಮಾವಿನಹಣ್ಣು ತಿನ್ನುವುದಕ್ಕೆ. ಮರಗಳೆಷ್ಟಿವೆ, ಕೊಂಬೆಗಳೆಷ್ಟಿವೆ, ಎಷ್ಟೊಂದು ಕೋಟಿ ಎಲೆಗಳಿವೆ ಇವುಗಳ ಲೆಕ್ಕಾಚಾರ ನನಗೇಕೆ?” (ವ. ವೇ. ಪು. ೧೬೩ ಪೂ: ಪು ೨೫೧ ಉತ್ತ) ಎನ್ನುವುದು ರಾಮಕೃಷ್ಣರ ನಿಲುವು. ಶಿವಶರಣರೆಲ್ಲರೂ ಒಕ್ಕೊರಲಿನಿಂದ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ. “ವೇದಂಗಳ ಹಿಂದೆ ಹರಿಯದಿರು ಹರಿಯದಿರು, ಶಾಸ್ತ್ರಂಗಳ ಹಿಂದೆ ಸುಳಿಯದಿರು ಸುಳಿಯದಿರು, ಪುರಾಣಂಗಳ ಹಿಂದೆ ಬಳಸದಿರು ಬಳಸದಿರು ಬಳಸದಿರು…” (ವ. ೨೦೭) ಎಂದು. ಆದಯ್ಯನೆಂಬ ವಚನಕಾರನು ಹೇಳಿದರೆ, “ವೇದಶಾಸ್ತ್ರ ಪುರಾಣ ಆಗಮಂಗಳೆಂಬ ಕೊಟ್ಟಿಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ” (ವ. ೨೪೨) ಎಂದು ಅಕ್ಕಮಹಾದೇವಿ ಹೇಳುತ್ತಾಳೆ. ಬಸವಣ್ಣನವರ ಪ್ರಕಾರ “ವೇದವನೋದಿದರೇನು. ಶಾಸ್ತ್ರವ ಕೇಳಿದರೇನು?” (ವ. ೫೮೯). ಅದರಿಂದೇನೂ ಪ್ರಯೋಜನವಿಲ್ಲ. ಯಾಕೆಂದರೆ.
‘ವೇದ ವೇಧಿಸಲರಿಯದೆ ಅಭೇದ್ಯ ಲಿಂಗವೆಂದು ನಡನಡುಗಿತ್ತು
ಶಾಸ್ತ್ರ ಸಾಧಿಸಲರಿಯದೆ ಅಸಾಧ್ಯ ಲಿಂಗವೆಂದು ಸಾರುತೈದಾವೆ
ತರ್ಕ ತರ್ಕಿಸಲರಿಯದೆ ಅತರ್ಕ್ಯಲಿಂಗವೆಂದು ಮನಂಗೊಳ್ಳವು
ಆಗಮ ಅಗಮ್ಯ ಲಿಂಗವೆಂದು ಗಮನಿಸಲರಿಯದೆ ಹೋದವು.
(ಬ.ವ. ೯೫೨)
ಶರಣರು ಹೇಳುವ ಲಿಂಗ ಅಥವಾ ಪರಬ್ರಹ್ಮವು ವೇದ ಶಾಸ್ತ್ರಾದಿಗಳಿಂದ ಸಾಧಿಸಲಸಾಧ್ಯವಾದದ್ದು; ಅದು ಸಾಧ್ಯವಾಗುವುದು ಕೇವಲ ಭಕ್ತಿಗೆ ಮಾತ್ರ. ಶ್ರೀ ರಾಮಕೃಷ್ಣರು ಹೇಳುತ್ತಾರೆ: “ಬ್ರಹ್ಮ ಏನು ಎಂಬುದನ್ನು ಬಾಯಿಂದ ವರ್ಣನೆ ಮಾಡೋಕಾಗೋದಿಲ್ಲ. ಎಲ್ಲವೂ ಉಚ್ಛಿಷ್ಟವಾಗಿ ಹೋಗಿವೆ- ವೇದ. ಪುರಾಣ, ತಂತ್ರ, ಷಡ್ದರ್ಶನ ಎಲ್ಲಾ. ಇವೆಲ್ಲಾ ಬಾಯಿಂದ ಹೊರಹೊಮ್ಮಿರುವುದರಿಂದ ನಾಲಗೆ ಉಚ್ಚರಿಸಿರುವದರಿಂದ ಉಚ್ಚಿಷ್ಟವಾಗಿವೆ ಅಥವಾ ಎಂಜಲಾಗಿವೆ. ಆದರೆ ಕೇವಲ ಒಂದು ವಸ್ತುಮಾತ್ರ ಉಚ್ಛಿಷ್ಟವಾಗಿಲ್ಲ. ಅದೇ ಬ್ರಹ್ಮ. ಬ್ರಹ್ಮ ಅಂದರೆ ಏನು ಅನ್ನುವುದನ್ನು ಯಾರಿಗೂ ಇದುವರೆಗೂ ವರ್ಣನೆ ಮಾಡಲಾಗಿಲ್ಲ.” (ವ. ವೇ. ಪುಟ ೫೦) ಆಶ್ಚರ್ಯದ ಸಂಗತಿ ಎಂದರೆ ಮಹಾ ಅನುಭಾವಿ ಅಲ್ಲಮಪ್ರಭು ಗುಹೇಶ್ವರನೆಂಬ ಲಿಂಗವನ್ನು ಕುರಿತು ಇದೇ ಪರಿಭಾಷೆಯಲ್ಲಿ ಮಾತನಾಡುತ್ತಾರೆ: “ಶಬ್ದವೆಂಬೆನೆ?  ಶ್ರೋತ್ರದೆಂಜಲು; ಸ್ಪರ್ಶವೆಂಬೆನೆ? ತ್ವಕ್ಕಿನೆಂಜಲು; ರೂಪೆಂಬೆನೆ? ನೇತ್ರದೆಂಜಲು; ರುಚಿಯೆಂಬೆನೆ? ಜಿಹ್ವೆಯೆಂಜಲು; ಪರಿಮಳವೆಂಬೆನೆ?  ಘ್ರಾಣದೆಂಜಲು. ನಾನೆಂಬೆನೆ? ಅರಿವಿನೆಂಜಲು. ಎಂಜಲೆಂಬ ಭಿನ್ನವಳಿದ ಬೆಳಗಿನೊಳಗಣ ಬೆಳಗು ಗುಹೇಶ್ವರ ಲಿಂಗವು” (ವ. ೫೬೩). ರಾಮಕೃಷ್ಣರ ಬ್ರಹ್ಮದ ವರ್ಣನೆಗಿಂತ ಈ ಮಾತು ಹೆಚ್ಚು ವ್ಯಾಪಕವಾಗಿದೆ. ರಾಮಕೃಷ್ಣರ ಮಾತು ವೇದಪುರಾಣಾಗಮ ಶಾಸ್ತ್ರಗಳು ಎಂಜಲಾಗಿರುವ ಪರಿಯನ್ನು ಪ್ರಸ್ತಾಪಿಸಿದರೆ, ಅಲ್ಲಮನದು, ಶಬ್ದ ಸ್ಪರ್ಶ ರೂಪದ ಗಂಧಾದಿ ಪಂಚೇಂದ್ರಿಯ ಪ್ರಪಂಚದ ಅನುಭವಗಳೆಲ್ಲವೂ ಗ್ರಹಿಕೆಗೆ ವರ್ಣನೆಗೆ ಸಿಕ್ಕುವುದರಿಂದ ಅವೆಲ್ಲವೂ ಎಂಜಲಾಗಿವೆ, ಈ ಪ್ರಾಪಂಚಿಕವಾದ ಹಾಗೂ ಎಂಜಲಾದ ಅನುಭವಗಳಿಗೆ ಅತೀತವಾದದ್ದು ಬೆಳಗಿನೊಳಗಿನ ಬೆಳಗಾದ ಆ ಗುಹೇಶ್ವರ ಲಿಂಗವೆ -ಎಂಬುದನ್ನು ಮಂಡಿಸುವ ಕ್ರಮವು ವಿಶೇಷ ರೀತಿಯದಾಗಿದೆ. ನಿಜವಾದ ಮೂಲಕ ಸಾಕ್ಷಾತ್ಕರಿಸಿಕೊಂಡ ಈ ದೈವೀ ಅನುಭವವನ್ನು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. “ಆ ಅವಸ್ಥೆಯಲ್ಲಿ ವಿಚಾರ ಪೂರ್ತಿ ನಿಂತು ಹೋಗುತ್ತದೆ. ಮನುಷ್ಯ ಮೂಕನಾಗಿ ಬಿಡುತ್ತಾನೆ.” (ವ.ವೇ. ಪು ೫೧. ಪೂ) ಎನ್ನುತ್ತಾರೆ ರಾಮಕೃಷ್ಣರು. “ಮಾತಿನ ಹಂಗೇಕೆ ಮನವೇಕಾಂತದಲ್ಲಿ ನಿಂದ ಬಳಿಕ” (ವ. ೧೦೯) ಎನ್ನುತ್ತಾಳೆ ನೀಲಮ್ಮನೆಂಬ ಶಿವಶರಣೆ. ಶಿವಶರಣರು ಈ ಸ್ಥಿತಿಯನ್ನು ಬಯಲು ಅಥವಾ ಬೆಳಗು ಎಂಬ ಪರಿಭಾಷೆಗಳ ಮೂಲಕ ಸೂಚಿಸುತ್ತಾರೆ. ಈ “ಐಕ್ಯ” ಸ್ಥಲದ ಅನುಭವಗಳನ್ನು ಅಲ್ಲಮಪ್ರಭುವಿನ ಹಾಗೂ ಅಕ್ಕಮಹಾದೇವಿಯ ಅನೇಕ ವಚನಗಳು ವರ್ಣಿಸುತ್ತವೆ. ರಾಮಕೃಷ್ಣರು ಹೇಳುತ್ತಾರೆ “ಉಪ್ಪಿನ ಬೊಂಬೆಯೊಂದು ಸಮುದ್ರದ ಆಳ ಕಂಡು ಹಿಡಿಯಲು ಹೋಯಿತು… ಇಳಿಯೋದೇ ತಡ ಕರಗಿ ಹೋಯಿತು. ಸಮುದ್ರದ ಆಳ ಎಷ್ಟು ಎಂಬುದನ್ನು ತಿಳಿಸುವುದಕ್ಕೆ ಉಳಿದುಕೊಂಡಿರೋರು ಯಾರು?”  (ವ.ವೇ. ಪುಟ ೫೨. ಪೂ). ಇದೇ ಶಬ್ದ ಚಿತ್ರವನ್ನು ಅಲ್ಲಮಪ್ರಭುವೂ ಬಳಸುತ್ತಾರೆ “ವಾರಿಕಲ್ಲಪುತ್ಥಳಿ ವಾರಿಧಿಯನಪ್ಪಿಕೊಂಡಂತಾಯಿತ್ತು” (ವ. ೯೧೩). (ಹಿಮದ ಅಥವಾ ನೀರ‍್ಗಲ್ಲಿನ ಬೊಂಬೆ ಸಮುದ್ರವನ್ನು ಅಪ್ಪಿಕೊಂಡ ಹಾಗಾಯಿತು). ಈ ಅನುಭವವನ್ನು ಯಾವ ಹೋಲಿಕೆಯ ಮೂಲಮಾನದಿಂದಲೂ  ವರ್ಣಿಸಲು ಸಾಧ್ಯವಿಲ್ಲ “ಉಪಮೆ ಉಪಮಿಸಲರಿಯದೆ ಉಪಮಾತೀತವೆನುತಿದ್ದಿತು” (ಅಲ್ಲಮ. ವ. ೬೫೨).
ಇದು ಬ್ರಹ್ಮಾನುಭವದ ತುರೀಯಾವಸ್ಥೆ, ವಾಸ್ತ್ರವವಾಗಿ ಅದು ‘ಅರೂಪ’ ಅಥವಾ ‘ನಿರಾಕಾರ’ವಾದದ್ದು. ಆದರೆ ಇದರಂತೆ ಆ ಬ್ರಹ್ಮ ‘ಸಾಕಾರ’ವೆಂಬುದೂ ಅಷ್ಟೇ ಸತ್ಯ. ವಾಸ್ತವವಾಗಿ ಸಾಕಾರ ನಿರಾಕಾರಗಳು ವಿರುದ್ಧ ಸ್ಥಿತಿಗಳು. ಈ ಎರಡೂ ಏಕಕಾಲಕ್ಕೆ ಸತ್ಯವಾಗಿರಲು ಸಾಧ್ಯವೆ ಎಂಬ ಶಂಕೆ ಅನೇಕ ಜಿಜ್ಞಾಸುಗಳಿಗೆ. ರಾಮಕೃಷ್ಣರು ಹೇಳುತ್ತಾರೆ: “ತಿಳಿದುಕೊ- ನಿರಾಕಾರವೂ ಸತ್ಯ, ಸಾಕಾರವೂ ಸತ್ಯ. ಯಾವುದರಲ್ಲಿ ವಿಶ್ವಾಸವೋ ಅದರಲ್ಲಿ ದೃಢ ಬುದ್ಧಿ ಇಡು” (ವ.ವೇ. ಪುಟ ೮. ಪೂ); “ಭಾವಿಸಿಕೊ. ಪರಬ್ರಹ್ಮ ದಡವೇ ಇಲ್ಲದ ಸಚ್ಚಿದಾನಂದಸಾಗರ ಅಂತ. ಭಕ್ತಿಯ ಶೈತ್ಯದ ದೆಸೆಯಿಂದ ಅಲ್ಲಲ್ಲಿ ನೀರು ಗಡ್ಡೆ ಕಟ್ಟುತ್ತದೆ- ಹಿಮಗಡ್ಡೆ ಯಾಗುತ್ತದೆ. ಎಂದರೆ ಭಗವಂತ ತನ್ನ ಭಕ್ತರ ಸಲುವಾಗಿ ವ್ಯಕ್ತನಾಗಿ ಆಗಾಗ ಸಾಕಾರರೂಪ ಧರಿಸುತ್ತಾನೆ. ಜ್ಞಾನ ಸೂರ್ಯ ಉದಯಿಸಿದನೆಂದರೆ ಆ ಹಿಮಗಡ್ಡೆ ಕರಗಿ ಹೋಗುತ್ತದೆ. ಆಗ ಭಗವಂತ ಸಾಕಾರ ಅಂತ ಮನಸ್ಸಿಗೆ ಅನ್ನಿಸುವುದೇ ಇಲ್ಲ.” (ವ.ವೇ. ಪುಟ ೧೩೭, ಪೂ; ಪುಟ ೨೨೪ ಪೂ; ಪುಟ ೨೬೭-೬೮ ಪೂ; ೬೫೨ ಉತ್ತ) ಮಹಾನುಭಾವಿಯಾದ ಶ್ರೀ ರಾಮಕೃಷ್ಣರು ಸಾಕಾರದಿಂದ ನಿರಾಕಾರಕ್ಕೆ ನಿರಾಕಾರದಿಂದ ಸಾಕಾರಕ್ಕೆ ಸಂಚರಿಸಬಲ್ಲವರಾಗಿದ್ದರು. ಅವರ ಪಾಲಿಗೆ ದಕ್ಷಿಣೇಶ್ವರದ ಕಾಳಿಯೇ ಬ್ರಹ್ಮ. ಯಾವುದನ್ನು ವೇದಾಂತಿಗಳು ಬ್ರಹ್ಮ ಅನ್ನುತ್ತಾರೋ ಅದನ್ನೆ ರಾಮಕೃಷ್ಣರು ತಾಯಿ ಎಂದು ಕರೆಯುತ್ತಾರೆ. (ವ. ವೇ. ಪುಟ ೬೧ ಪೂ) ಆಶ್ಚರ್ಯದ ಸಂಗತಿ ಎಂದರೆ ಶಿವಶರಣರದೂ ಭಗವಂತನ ಸ್ವರೂಪವನ್ನು ಕುರಿತು ಇದೇ ಅಭಿಪ್ರಾಯವಾಗಿದೆ. ಅವರು ಸಾಕಾರ ನಿರಾಕಾರ ಎರಡನ್ನೂ ಒಪ್ಪುತ್ತಾರೆ. ಆದರೆ ಅವರ ‘ಸಾಕಾರ’ದ ಕಲ್ಪನೆ ಪುರಾಣೋಕ್ತವಾದ ಮೂರ್ತಿಕಲ್ಪನೆಗೆ ಹೊಂದುವಂಥದಲ್ಲ (ಅಕ್ಕಮಹಾದೇವಿ- ಯೊಬ್ಬಳನ್ನು ಹೊರತು). ಶಿವಶರಣರು ಕಲ್ಪಿಸಿಕೊಂಡ ‘ಇಷ್ಟಲಿಂಗ’ ಅನ್ನುವುದು ವಾಸ್ತವವಾಗಿ ‘ಮೂರ್ತಿ’ ಅಲ್ಲ; ಅದು ನಿರಾಕಾರಕ್ಕೆ ಸಮೀಪವಾದ ಒಂದು ಸಂಕೇತ. ಈ ‘ಸಂಕೇತ ಸಾಕಾರ’ ಎಷ್ಟು ನಿಜವೋ. ಅದರ ಮೂಲಕ ಅವರು ತಲುಪುವ ‘ಬಯಲು’ ಎಂಬ ನಿರಾಕಾರದ ಅನುಭವವೂ ಅಷ್ಟೇ ನಿಜ. ಬಸವಣ್ಣನವರು ಒಂದೆಡೆ “ಬಯಲ ರೂಪ ಮಾಡಬಲ್ಲಾತನೇ ಶರಣನು. ಆ ರೂಪ ಬಯಲ ಮಾಡಬಲ್ಲಾತನೇ ಲಿಂಗಾನುಭಾವಿ” (ವ. ೯೨೨) ಎನ್ನುತ್ತಾರೆ. ಎಂದರೆ ಭಗವಂತನ ‘ನಿರಾಕಾರ’ಕ್ಕೆ ಒಂದು ಆಕಾರವನ್ನು (ರೂಪ) ಕಲ್ಪಿಸುವವನು ಶರಣ ಅಥವಾ ಅನನ್ಯ ಸಮರ್ಪಣ ಭಾವದ ಭಕ್ತ. ಆ ರೂಪವನ್ನು (ಸಾಕಾರವನ್ನು) ಮತ್ತೆ ಬಯಲ ಮಾಡಬಲ್ಲಾತ, ಎಂದರೆ ನಿರಾಕಾರ ಸ್ಥಿತಿಯಲ್ಲಿ ಕಾಣಬಲ್ಲವನು ಲಿಂಗಾನುಭಾವಿ ಅಥವಾ ಜ್ಞಾನಿ. ಅಕ್ಕಮಹಾದೇವಿ ಈ ಬಗ್ಗೆ “ತಿಳಿದುಪ್ಪಕ್ಕೆ ಗಟ್ಟಿದುಪ್ಪಕ್ಕೆ ಭೇದ ಉಂಟೆ?” (ವ. ೧೧೫೫) ಎಂದು ಪ್ರಶ್ನಿಸುತ್ತಾಳೆ. ತುಪ್ಪವು ಬಿಸಿಗೆ ಕರಗಿದಾಗ ಅದು ತಿಳಿಯಾಗಿ ಅಥವಾ ನಿರಾಕಾರವಾಗಿರುತ್ತದೆ; ಅದು ಗಟ್ಟಿಯಾದಾಗ ಒಂದು ಆಕಾರದಲ್ಲಿ ಗೋಚರಿಸುತ್ತದೆ. “ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೇ ಸ್ವಯಂಭುವಾಯಿತ್ತು” (ವ. ೭೪೬) ಎಂದು ಅಲ್ಲಮಪ್ರಭು ಹೇಳುವ ಮಾತು, ನೀರೇ ಶೈತ್ಯದಿಂದ ಗಟ್ಟಿಯಾಗಿ ಹಿಮಗಡ್ಡೆಯಾಗುವಂತೆ, ಆ ಶೂನ್ಯವೇ ಸ್ವಯಂಭು ಮೂರ್ತಿಯಾಗಿ ಕಾಣುತ್ತದೆ ಎಂಬ ಈ ಉಕ್ತಿ ರಾಮಕೃಷ್ಣರ ಉಕ್ತಿಗೆ ಅತ್ಯಂತ ಸಂವಾದಿಯಾಗುತ್ತದೆ. ಸಿದ್ಧರಾಮ ತನ್ನ ಒಂದು ವಚನದಲ್ಲಿ-
ಸಕ್ಕರೆಯು ಆಕಾರ, ರುಚಿಯು ನಿರಾಕಾರ
ಬೆಣ್ಣೆ ಆಕಾರ ಘೃತ ನಿರಾಕಾರ
ಆಕಾರ ಬಿಟ್ಟು ನಿರಾಕಾರವಿಲ್ಲ
ನಿರಾಕಾರ ಬಿಟ್ಟು ಆಕಾರವಿಲ್ಲ    (ವ. ೩೯೩)
ಎನ್ನುತ್ತಾನೆ. ಆಕಾರ ಹಾಗೂ ನಿರಾಕಾರ ಎರಡೂ ಸತ್ಯವಾದ ಮೇಲೆ ಭಕ್ತನಾದವನು ಯಾವುದೇ ಒಂದರಲ್ಲಿ ದೃಢವಾದ ವಿಶ್ವಾಸವನ್ನಿರಿಸಿಕೊಂಡರೆ ಸಾಕು. ರಾಮಕೃಷ್ಣರು ಹೇಳುತ್ತಾರೆ: “ವ್ಯಾಕುಲತೆಯಿಂದ. ಸಾಕಾರವಾದಿಗಳ ಮಾರ್ಗದಲ್ಲಾದರೂ ಹೋಗು. ನಿರಾಕಾರಿಗಳ ಮಾರ್ಗದಲ್ಲಾದರೂ ಹೋಗು. ಕಜ್ಜಾಯವನ್ನು ಉದ್ದುದ್ದವಾಗಿ ಕಡಿದು ತಿಂದರೂ ಸಿಹಿ, ಅಡ್ಡಡ್ಡಲಾಗಿ ತಿಂದರೂ ಸಿಹಿ” (ವ.ವೇ. ಪುಟ ೬೬೯ ಉತ್ತ). ಇದೇ ಮಾತನ್ನು ಪ್ರಭು ಹೇಳುವ “ಬೆಲ್ಲದ ಪುತ್ಥಳಿಯ ಕೈಯಲ್ಲಿ ಹಿಡಿದು ಎಲ್ಲಿ ಚುಂಬಿಸಿದರೂ ಇನಿದಹುದು” (ವ.೫೭೭) ಬೆಲ್ಲದ ಬೊಂಬೆಯನ್ನು ಎಲ್ಲಿ ಮುತ್ತಿಟ್ಟರೂ ಅದು ಸಿಹಿಯಾಗಿಯೇ ಇರುತ್ತದೆ -ಎಂಬ ಮಾತಿನ ಜತೆ ಹೋಲಿಸಿ ನೋಡಬಹುದು. ಭಗವಂತನ ಸಾಕಾರ ಹಾಗೂ ನಿರಾಕಾರ ಕಲ್ಪನೆಗಳನ್ನು ಕುರಿತು ಶಿವಶರಣರಿಗೂ ರಾಮಕೃಷ್ಣರಿಗೂ ಇರುವ ಸಾಮ್ಯ ತುಂಬ ಕುತೂಹಲಕಾರಿಯಾಗಿದೆ.
ಶ್ರೀ ರಾಮಕೃಷ್ಣರು ಭಕ್ತರೆಲ್ಲರೂ ಒಂದೇ ಜಾತಿಗೆ ಸೇರಿದವರು ಎಂದು ಹೇಳುವುದರ ಮೂಲಕ ಜಾತೀಯತೆಯನ್ನು ವಿರೋಧಿಸುತ್ತಾರೆ. “ಜಾತಿಭೇದವನ್ನು ಒಂದು ವಿಧದಿಂದ ತೆಗೆದು ಹಾಕಿಬಿಡಬಹುದು. ಆ ಮಾರ್ಗವೇ ಭಕ್ತಿ. ಭಕ್ತರಿಗೆ ಜಾತಿ ಎಂಬುದೇ ಇಲ್ಲ.” (ವ.ವೇ. ಪುಟ ೧೫೧ ಪೂ) ಅಷ್ಟೇ ಅಲ್ಲ. “ಭಕ್ತರೆಲ್ಲರೂ ಒಂದು ಪ್ರತ್ಯೇಕ ಜಾತಿಗೆ ಸೇರಿದವರು. ಅವರಲ್ಲಿ ಯಾವ ಭೇದ ಭಾವನೆಯೂ ಇರೋದಿಲ್ಲ” (ವ.ವೇ. ಪುಟ ೨೫೮ ಉತ್ತ) ಎನ್ನುತ್ತಾರೆ. ಹನ್ನೆರಡನೆಯ ಶತಮಾನದ ಶಿವಶರಣರು ಹೇಳಿದ್ದೂ ಇದನ್ನೇ. “ವಿಪ್ರ ಮೊದಲು ಅಂತ್ಯಜ ಕಡೆಯಾಗಿ ಶಿವಭಕ್ತರೆಲ್ಲರನೂ ಒಂದೇ ಎಂಬೆ” (ವ. ೭೧೦) ಎಂಬ ಬಸವಣ್ಣನವರ ಮಾತಿನಲ್ಲಿ ಇದನ್ನು ಗುರುತಿಸಬಹುದು. ಶಿವಶರಣರು ನೆಲೆಗೊಳಿಸಿದ ಧರ್ಮದೊಳಕ್ಕೆ ಅಂದಿನ ಸಮಾಜದ ವಿವಿಧ ಸ್ತರಗಳವರು, ಅಂತ್ಯಜರು ಸಹಿತ ಪ್ರವೇಶ ಪಡೆದು ಒಂದು ದೊಡ್ಡ ಸಾಮಾಜಿಕ- ಧಾರ್ಮಿಕ ಕ್ರಾಂತಿ ನಡೆದದ್ದು ಒಂದು ಅಭೂತಪೂರ್ವ ಪ್ರಸಂಗವೇ ಸರಿ.
ವೇದಶಾಸ್ತ್ರಾದಿ ಪಾಂಡಿತ್ಯದಿಂದ ಬ್ರಹ್ಮಜ್ಞಾನ ಹೇಗೆ ದೊರೆಯದೋ ಹಾಗೆಯೇ ಲೋಕಕಲ್ಯಾಣದ ಹೆಸರಿನಲ್ಲಿ ಮಾಡುವ ನಿಷ್ಕಾಮವಲ್ಲದ ದಾನಧರ್ಮಾದಿ ಪರೋಪಕಾರಗಳಿಂದ ಪುಣ್ಯಸಂಪಾದನೆಗಾಗಿ, ಅರ್ಥ ಕೀರ್ತಿ ಪ್ರತಿಷ್ಠೆಗಳಿಗಾಗಿ ಮಾಡುವ ಕರ್ಮಯೋಗದಿಂದ ಕೂಡಾ ಆ ಬ್ರಹ್ಮತ್ವ ಸಾಧ್ಯವಾಗುವುದಿಲ್ಲ -ಎಂದು ರಾಮಕೃಷ್ಣರು ಹೇಳುತ್ತಾರೆ. ಶಂಭು ಮಲ್ಲಿಕನೆಂಬ ಹಣವಂತ ಭಕ್ತನ ಜತೆ ಅವರು ಮಾತನಾಡುವಾಗ ಈ ವಿಷಯವನ್ನು ಸ್ಪಷ್ಟಪಡಿಸುತ್ತಾರೆ. ಶಂಭುಮಲ್ಲಿಕನಿಗೆ ಡಿಸ್ಪೆನ್ಸರಿ, ಸ್ಕೂಲು, ರಸ್ತೆ, ಕೊಳ ಇತ್ಯಾದಿಗಳನ್ನು ಕಟ್ಟಿಸುವ ಹಂಬಲ. ನಿಜವಾದ ಭಕ್ತನಾದವನು ಇಂಥ ಲೋಕೋಪಯೋಗಿ ಕರ್ಮಗಳಲ್ಲಿ, ಮೊದಮೊದಲು ನಿಷ್ಕಾಮ ಬುದ್ಧಿಯಿಂದಲೆ ತೊಡಗಿದರೂ, ಯಾವಾಗಲೋ ಅದು ‘ಸಕಾಮಕರ್ಮ’ವಾಗಿ ಬಿಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ರಾಮಕೃಷ್ಣ ಶಂಭುಮಲ್ಲಿಕನಿಗೆ ಹೇಳುತ್ತಾರೆ: “ಭಾವಿಸಿಕೋ, ಭಗವಂತ ನಿನ್ನ ಸಮ್ಮುಖಕ್ಕೆ ಬಂದಿದ್ದಾನೆ: ಬಂದವನು ನಿನಗೆ ಹೇಳುತ್ತಿದ್ದಾನೆ, ನನ್ನಿಂದ ಒಂದು ವರ ಪಡೆದುಕೊ; ಆಗ ನೀನು ‘ಹೇ ಭಗವಂತ ನನಗೆ ಕೆಲವು ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಡು’ ಎಂದು ಬೇಡುವೆಯಾ, ಅಥವಾ ‘ಹೇ ಭಗವಂತ ನಿನ್ನ ಪಾದಪದ್ಮಗಳಲ್ಲಿರುವ ಶುದ್ಧ ಭಕ್ತಿ ಉಂಟಾಗುವಂತೆ ಕರುಣಿಸು’ ಎಂದು ಬೇಡುವೆಯೊ… ಮೊದಲು ಆತನ ಸಾಕ್ಷಾತ್ಕಾರ ಪಡೆದುಕೊಂಡುಬಿಟ್ಟಿದ್ದೆ ಆದರೆ, ಬಳಿಕ ಆತನಿಗೆ ಇಚ್ಛೆಯಿದ್ದರೆ ಆತ ನಮ್ಮ ಮೂಲಕ ಅನೇಕ ಆಸ್ಪತ್ರೆ ಡಿಸ್ಪೆನ್ಸರಿಗಳನ್ನು ಕಟ್ಟಿಸಿಕೊಳ್ಳಬಲ್ಲ” (ವ.ವೇ. ಪು. ೭೨೬ ಪೂ; ಪು. ೪೮೧ ಉತ್ತ). ಅಂದರೆ ರಾಮಕೃಷ್ಣರು ಈ ಬಗೆಯ ಲೋಕೋಪಯೋಗಿ ಕರ್ಮಗಳಲ್ಲಿ ತೊಡಗಬೇಡಿ ಎಂದೂ, ಇವು ಬೇಕಾಗಿಲ್ಲ ಎಂದು ಹೇಳಿದರೆಂದೂ ಅರ್ಥವಲ್ಲ; ಮೊದಲು ಒಂದು ನಿಷ್ಕಾಮ ಮನೋಧರ್ಮವನ್ನು ಸಾಧನೆಯ ಮೂಲಕ ಗಳಿಸಿಕೊಂಡು, ಅನಂತರ ಇಂತಹ ಕಾರ್ಯಗಳಲ್ಲಿ ತೊಡಗಬೇಕೆಂಬುದು ಅವರ ಮಾತಿನ ಅರ್ಥ. ಹನ್ನೆರಡನೆ ಶತಮಾನದ ಸಿದ್ಧರಾಮ ಒಬ್ಬ ಮಹಾಭಕ್ತ. ಆತ ಇಂದು ಸೊಲ್ಲಾಪುರವೆಂದು ಕರೆಯಲಾಗುವ ಸ್ಥಳದಲ್ಲಿ ಇದ್ದುಕೊಂಡು, ಕೆರೆ ಬಾವಿ ದೇವಾಲಯಗಳನ್ನು ಕಟ್ಟಿಸುವುದು, ಸಾಮೂಹಿಕ ಮದುವೆಗಳನ್ನು ಮಾಡಿಸುವುದು ಇತ್ಯಾದಿ ‘ಕರ್ಮಯೋಗ’ದಲ್ಲಿ ತೊಡಗಿದವನು. ಒಮ್ಮೆ ಅಲ್ಲಮಪ್ರಭು ಆತನನ್ನು ಕಂಡಾಗ ಅಂತಹ ದೊಡ್ಡ ಭಕ್ತ ಹೀಗೆ ಜನೋಪಯೋಗಿಯಾದ ಕರ್ಮಗಳಲ್ಲಿ ತೊಡಗಿ ತನ್ನ ನಿಜವಾದ ಸಾಧನೆಯ ಹಾದಿಯಿಂದ ವಿಮುಕ್ತನಾಗುತ್ತಿದ್ದಾನಲ್ಲ ಅನ್ನಿಸಿ ಆತನಿಗೆ ಒಂದು ಮಾತನ್ನು ಹೇಳುತ್ತಾರೆ:
“ಅನ್ನವನಿಕ್ಕಿ ನನ್ನಿಯ ನುಡಿದು ಅರವಟ್ಟಿಗೆಯನಿಕ್ಕಿ
ಕೆರೆಯ ಕಟ್ಟಿಸಿದರೆ, ಮರಣದಿಂದ ಮೇಲೆ ಸ್ವರ್ಗ ಉಂಟಲ್ಲದೆ
ಶಿವನ ನಿಲುವು ಸಾಧ್ಯವಾಗದು.
ಗುಹೇಶ್ವರನನರಿದ ಶರಣಂಗೆ ಆವ ಫಲವೂ ಇಲ್ಲ.”       (ವ. ೬೩೯)
ಎಂದು. ಯಾವ ಶರಣ ದೈವತ್ವವನ್ನು ಸಾಧಿಸಿಕೊಳ್ಳುತ್ತಾನೋ ಅವನು ಯಾವ ಫಲದ ಆಸೆಗೂ ಕಟ್ಟುಬಿದ್ದವನಲ್ಲ. ಮುಖ್ಯವಾದದ್ದು ಶಿವನ ನಿಲವನ್ನು ಸಾಧ್ಯವಾಗಿಸಿಕೊಳ್ಳುವ ನಿರಂತರ ಸಾಧನೆ.
ಶ್ರೀ ರಾಮಕೃಷ್ಣರಿಗೂ ಶಿವಶರಣರು ಅಥವಾ ವಚನಕಾರರಿಗೂ ಇರುವ ಅಂತರ ಎಂಟುನೂರು ವರ್ಷಗಳಿಗೂ ಮೀರಿದ್ದು. ಶಿವಶರಣರು ಬಾಳಿಬದುಕಿದ್ದು ದಕ್ಷಿಣದ ಕರ್ನಾಟಕದಲ್ಲಿ; ರಾಮಕೃಷ್ಣರು ಇದ್ದುದು ಉತ್ತರದ ಬಂಗಾಲದಲ್ಲಿ. ಆದರೂ ಈ ಅನುಭಾವಿಗಳ, ಅನುಭವ ಸಾಮ್ಯ, ಆಶ್ಚರ್ಯಗೊಳಿಸುವಂಥದ್ದು. ರಾಮಕೃಷ್ಣರು ಮೇಲೆ ನೋಡಲು, ಕೇವಲ ಅನುಭಾವಿಯ ಸ್ತರದಲ್ಲೆ ಇರುವಂತೆ ಕಂಡರೂ, ಅವರ ಲೋಕಾನುಕಂಪೆ, ಅವರ ಸಾಮಾಜಿಕ ಕಳಕಳಿ ಇತ್ಯಾದಿಗಳೆಲ್ಲ ಇಂದು ಅವರ ಶಿಷ್ಯ ಕೋಟಿಯ ಮಹತ್ಕಾರ್ಯಗಳ ಮೂಲಕ ಹಾಗೂ
ಶ್ರೀ ರಾಮಕೃಷ್ಣಾಶ್ರಮವೆಂಬ ಸಂಸ್ಥೆಗಳ ಮೂಲಕ ಜಗತ್ತಿನಾದ್ಯಂತ ಸುಪ್ರಕಟವಾಗಿದೆ. ಪುರೋಹಿತಶಾಹೀ ಪ್ರವೃತ್ತಿಯ ವಿರುದ್ಧವಾಗಿ ಬಂಡೆದ್ದ ವಚನಕಾರರ ಮನೋಧರ್ಮ, ಸಾಮಾಜಿಕ ಅಸಮತೆ ಹಾಗೂ ವಿಷಮತೆಗಳನ್ನು ಕುರಿತು ಅವರು ಮಾಡಿದ ವಿಮರ್ಶೆ ಇತ್ಯಾದಿಗಳು ಮತ್ತೆ ಈ ಯುಗದಲ್ಲಿ ಮೊಳಗಿದ್ದರೆ, ಅದು ರಾಮಕೃಷ್ಣರ ಶಿಷ್ಯೋತ್ತಮ ಸ್ವಾಮಿ ವಿವೇಕಾನಂದ ಮೂಲಕವೇ.
ಶ್ರೀ ರಾಮಕೃಷ್ಣರು ಮತಗಳೆಲ್ಲಾ, ಕೇವಲ ಪಥಗಳು ಎಂದು ಸಾರಿದವರು. “ದೇವನೊಬ್ಬ ನಾಮ ಹಲವು” (ವ. ೬೧೩) “ಹುತ್ತಕ್ಕೆ ಏಸು ಬಾಯಾದರೇನು, ಸರ್ಪನಿಪ್ಪುದು ಒಂದೇ ಸ್ಥಾನ” (ವ. ೯೫೧) -ಎಂದು ಬಸವಣ್ಣನವರು ಹೇಳಿದರೂ, ಅವರ ಮೊದಲ ಗುರಿ ಒಂದು ಹೊಸ ಮತ-ಧರ್ಮವನ್ನು ಕಟ್ಟುವುದಾಗಿತ್ತು. ಹನ್ನೆರಡನೆಯ ಶತಮಾನದಷ್ಟು ಹಿಂದೆ ವೈದಿಕ ಧರ್ಮದ ವರ್ಣವ್ಯವಸ್ಥೆಯನ್ನು ಪ್ರತಿಭಟಿಸಿ, ಮನುಷ್ಯರೆಲ್ಲರನ್ನೂ ಸಮಾನತಾ ಸಾಮಾಜಿಕ ಧಾರ್ಮಿಕ ವ್ಯವಸ್ಥೆಯೊಂದರೊಳಕ್ಕೆ ತರಲು ಅವರು ಪ್ರಯತ್ನಿಸಿದ್ದು ನಿಜವಾಗಿಯೂ ಮಹತ್ವದ ಸಾಧನೆಯಾಗಿದೆ. ಆದರೆ ಶ್ರೀ ರಾಮಕೃಷ್ಣರು ಯಾವುದೇ ಮತ-ಧರ್ಮದ ಸ್ಥಾಪಕರಲ್ಲ; ಅವರು ಸರ್ವಧರ್ಮಗಳನ್ನೂ ಸಾಕ್ಷಾತ್ಕರಿಸಿಕೊಂಡು, ಎಲ್ಲ ಧರ್ಮದ ತಿರುಳೂ ಒಂದೇ ಎಂಬುದನ್ನು ಸ್ಥಾಪಿಸಿದವರು. ಈ ದೃಷ್ಟಿಯಿಂದ ಶ್ರೀ ರಾಮಕೃಷ್ಣರನ್ನು ಕೇವಲ ಹಿಂದೂ ಧರ್ಮದ ಪ್ರತಿನಿಧಿ ಎಂದು ಭಾವಿಸುವುದು ಸರಿಯಾದದ್ದಲ್ಲ. ಹಿಂದೂ ಧರ್ಮದ ನೆಲೆಯಲ್ಲಿ ನಿಂತು, ಜಗತ್ತಿನ ಎಲ್ಲ ಧರ್ಮಗಳನ್ನೂ, ಆಯಾ ಧರ್ಮದ ಸಾಧನ ವಿಧಾನಗಳ ಮೂಲಕವೇ ತಮ್ಮ ಅನುಭವದಲ್ಲಿ ಸಾಕ್ಷಾತ್ಕರಿಸಿಕೊಂಡು, ಎಲ್ಲ ಧರ್ಮಗಳೂ ಆ ವಿಶ್ವಧರ್ಮದ ತರಂಗಗಳು ಎಂಬ ಮಹಾಸತ್ಯವನ್ನು ಕಂಡುಕೊಂಡದ್ದು ಜಗತ್ತಿನ ಧಾರ್ಮಿಕ ಇತಿಹಾಸದಲ್ಲೇ ಅಪೂರ್ವವಾದದ್ದು. ಅವರನ್ನು ಈ ಕಾರಣದಿಂದ ‘ಸರ್ವಧರ್ಮ ಸಮನ್ವಯಾಚಾರ್ಯ’ರೆಂದು ಸ್ತುತಿಸುವುದು ಉತ್ಪ್ರೇಕ್ಷೆಯಲ್ಲ.
ಈ ಲೇಖನದಲ್ಲಿ ಉಲ್ಲೇಖಗಳನ್ನು ಬಳಸಿಕೊಂಡ ಗ್ರಂಥಗಳು
೧.ಶ್ರೀ ರಾಮಕೃಷ್ಣ ವಚನ ವೇದ : (ಪೂರ್ವಾರ್ಧ) ಪ್ರಥಮ ಮುದ್ರಣ ೧೯೫೬, ಪ್ರ: ಶ್ರೀ ರಾಮಕೃಷ್ಣಾಶ್ರಮ, ಮೈಸೂರು.
೨. ಶ್ರೀ ರಾಮಕೃಷ್ಣ ವಚನ ವೇದ : (ಉತ್ತರಾರ್ಧ) ಪ್ರಥಮ ಮುದ್ರಣ ೧೯೫೪, ಪ್ರ: ಶ್ರೀ ರಾಮಕೃಷ್ಣಾಶ್ರಮ, ಮೈಸೂರು.
೩.  ಅಲ್ಲಮನ ವಚನ ಚಂದ್ರಿಕೆ : ಸಂ. ಡಾ. ಎಲ್. ಬಸವರಾಜು, ೧೯೬೦, ಪ್ರ: ನಳಿನೀ ಶಂಕರ ಪ್ರಕಾಶನ, ಮೈಸೂರು.
೪.  ಬಸವಣ್ಣನವರ ಷಟ್‌ಸ್ಥಲದ ವಚನಗಳು : ಸಂ. ಪ್ರೊ. ಶಿ.ಶಿ. ಬಸವನಾಳ, ೧೯೫೪, ಪ್ರ: ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆ, ಧಾರವಾಡ.
೫.  ಶಿವಶರಣೆಯರ ವಚನಗಳು : ಸಂ. ಡಾ. ಆರ್.ಸಿ. ಹಿರೇಮಠ, ೧೯೬೮, ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.
೬.  ಸಕಲ ಪುರಾತನರ ವಚನಗಳು : ಸಂ. ಡಾ. ಆರ್.ಸಿ. ಹಿರೇಮಠ, ೧೯೭೨, ಪ್ರ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

संत साहित्याचे अभ्यासक : दा. का. थावरे



माझ्या शालेय आणि पुढे महाविद्यालयीन जीवनातदैनिक संचारमधीलनौबतआणिचिंतनया दोन सदरांचा माझ्यावर प्रभाव राहिला. दर गुरुवारी प्रसिद्ध होणारे ना. . कुलकर्णी यांच्यानौबतने माझ्यात वैचारिक स्पष्टता निर्माण केली. तरचिंतनहे त्याकाळात माझ्यासह अनेकांचेस्वाध्यायच बनले होते. नित्य नवे अशा या  दैनंदिन सदरामुळे धार्मिक, आध्यात्मिक आणि संत साहित्यविषयक जाणिवा जागृत केल्या. सलग साडे एकोणीस वर्षे हे सदर चालवणारे सत्पुरुष आहेत संत साहित्याचे अभ्यासक श्री. दा. का. थावरे. वयाच्या 83 व्या वर्षांपर्यंत संत साहित्याची सेवा करणाऱ्या या सत्पुरुषाशिवाय केवळ सोलापूर जिल्ह्यातीलच नव्हे तर संपूर्ण महाराष्ट्रातील संत साहित्याचा धांडोळा घेता येणार नाही, इतके मोलाचे व अपूर्व योगदान त्यांनी संत साहित्यात दिले आहे.
अद्भुत व गौरवशाली परंपरा
एखाद्या कुटुंबात एखादी परंपरा अखंडितपणे तीही अनेक पिढ्या जोपासली जाईल, हे दुर्मिळच. मात्र, थावरे कुटुंबाच्या सोळा पिढ्यांनी संत साहित्य सेवा व भगवद्भक्तीची अखंड परंपरा जोपासली आहे. श्री. दा. का. तथा भाऊ थावरे हे ज्ञानेश्वरीचे लेखकू श्री सच्चिदानंदबाबांचे सोळावे वंशज. श्री सच्चिदानंद बाबांना श्री संत ज्ञानेश्वर माऊलींनी चितेवरुन उठवून स्वत:चे लेखकू केलेत्यामुळे ग्रंथराजज्ञानेश्वरीआज आपणाला उपलब्ध झाला आहे.
समृद्ध आध्यात्मिक वारसा 
थावरे कुटुंब मूळचे श्री क्षेत्र नेवासे (मोहिनीराजाचे). या गावचे कुलकर्णी असेलेले सच्चिदानंदबाबा हे कुलकर्णी होते. बालपणापासूनच प्रकृतीने अशक्त असलेल्या सच्चिदानंदबाबांचे क्षयरोगामुळे अकाली निधन झाले. दरम्यानत्यांची पत्नी सौदामिनीने नवस सायास केले. उपास तपास केले. कुलदैवत जगदंबा, ग्रामदैवत मोहिनीराजाला साकडे घातले, परंतु आजारात उतार पडला नाही. शेवटी सच्चिदानंदबाबांचा मृत्यू झाला. सौदामिनीने सती जाण्याचा निर्णय घेतला. अंत्यसंस्कारावेळी सौदामिनीचे लक्ष जवळच असलेल्या पिंपळाच्या झाडाखाली विसावलेल्या चार साधू पुरुषांकडे गेले. तिने तिथे जाऊन ज्ञानेश्वर माऊलींना साष्टांग दंडवत घालून अश्रू ढाळू लागली. भक्त करुणाकर ज्ञानदेवानेअखंड सौभाग्यवती भवअसा आशीर्वाद दिला. त्यावर सती सौदामिनी म्हणाली, हे महासाधो, माझ्या पतीचे निधन झाले आहे. मी त्यांच्यासमवेत सहगमन करणार आहे. आपला आशीर्वाद पुढील जन्मी जरी फळाला आली तरी मी ती आपली कृपाच समजेन.’ ते ऐकून श्री ज्ञानेश्वर तिच्या पतीच्या मृतदेहाजवळ गेले आणि म्हणाले, ‘काय, सत् चित् आनंदयाचा कोणी मृत्यू कोणी कधी ऐकला आहे काय? सच्चिदानंद हे सर्वोपाधीरहित आहेत. त्यास मृत्यू कसा येईल?’ तसेच ज्ञानेश्व ?माऊलीने सच्चिदानंदांच्या अंगावरुन हात फिरवला आणि काय आश्चर्य! श्री सच्चिदानंद झोपेतून जागा व्हावा इतक्या सहजगतेने जिवंत होऊन उठून उभा राहिला. सौदामिनीच्या आनंदाला पारावर उरला नाही. तिने ज्ञानेश्वरांच्या चरणी लोळण घेतली. तेव्हा  ज्ञानेश्र म्हणाले, ‘हे सुभिगे, तुझी पूर्व पुण्याई थोर म्हणूनच तुझा पती जिवंत झाला. भविष्यात सच्चिदानंदांचे हातून मोठे कार्य होणार आहे. तू निश्चिंत अस.’ पुढे श्री निवृत्तीनाथांनी ज्ञानदेवांना राठी भाषेत गीता भाष्य लिहिण्याची आज्ञा केली. सच्चिदानंद बाबा हे मूळचे कुलकर्णी. त्यांचे अक्षर मोत्यासारखे. त्यांनी ज्ञानेश्वर कथन करतील ते भाष्य ग्रथित करावे असे ठरले. गुरू आज्ञेनुसार श्री ज्ञानेश्वरांनी या ठिकाणच्या महादेव मंदिरात निरुपणास सुरुवात केली. ज्ञानदेवांनी हात जोडून ॐ नमोजी आद्या। वेद प्रतिपाद्या। जयजय स्वसंवेद्या। आत्मरुपा॥ वेदांनाही ज्याच्या खऱ्या स्वरुपाचे वर्णन करण्यासाठी शब्द अपुरे पडले त्या ॐकार स्वरुपी  परमात्म्याला वंदन करुन श्री ज्ञानदेव ओव्यामागून ओव्या सांगू लागले आणि सच्चिदानंदबाबांनी अमृतातेही पैजा जिंके अशा मराठीतील या अमृतवाणीचे लेखन केले.
संत साहित्य लेखनाची परंपरा
 त्यानंतरही थावरे कुटुंबातील संत साहित्य सेवा अविरतपणे पिढ्यान्पिढ्या सुरू राहिली. दा. का. तथा भाऊ थावरे यांचे वडील श्री काशिनाथपंत थावरे गुरुजी हे तर ज्ञानेश्वरीचे पाईकच होते. त्यांनाही ज्ञानेश्वरीची संपूर्ण प्रत नकलून काढण्याचा आदेश झाला. त्यानुसार एक जुनी प्रत घेऊन ते नेवासे येथे गेले आणि नवी प्रत तयार करू लागले. तेव्हा जुनी प्रत त्यांच्या हातून गळून पडली. श्री ज्ञानेश्वरांनी ज्या खांबाला टेकून थावरे यांचे पूर्वज सच्चिदानंद बाबांना ज्ञानेश्वरी सांगितली त्या खांबातूनच ज्ञानेश्वरीच्या ओव्या ऐकू येऊ लागल्या आणि त्यावरुन त्यांनी नवीन प्रत तयार केली. हे सारे पाहता महाभारतकार महर्षी व्यास आणि त्यांचे लेखक श्री गणेशाची आठवण झाल्याशिवाय राहत नाही. विशेष म्हणजे श्री धुंडा महाराज देगलूरकर यांच्या श्री ज्ञानेश्वरीवरील निरुपणाचे लेखन दा. का. तथा भाऊ थावरे यांनी केले. थावरे कुटुंबात सच्चिदानंदबाबा यांच्यापासून  ज्ञानेश्वरी लेखनाने सुरू झालेली संत साहित्य सेवेची, भगवद्भक्तीची, पारमार्थिकतेची ही गंगा आजही अखंड वाहते आहे.
नेवासे येथे 9 जून 1929 रोजी दा. का. तथा भाऊ थावरे यांचा जन्म झाला. कुटुंबाला लाभलेल्या संतपरंपरा, भगद्भक्ती व उच्च कोटीच्या आध्यात्मिक परंपरेमुळे बालपणापासूनच तसे संस्कार झाले. वडील काशिनाथपंत थावरे हे शिक्षक असल्याने कोपरगाव, राहुरी (जि. अहमदनगर) येथे त्यांचे बालपण गेले. शिक्षणानंतर सहकार खात्यातील नोकरीमुळे भाऊ सोलापूर येथे स्थिरावले आणि त्यांच्या संत साहित्य सेवेने सोलापूरच्या संत साहित्याच्या आणि आध्यात्मिक व पारमार्थिक क्षेत्रात अमूल्य अशी भर पडली. भाऊंनी केवळ संत साहित्याचे लेखन केले नाही तर ते संतवचन जगले. साधी राहणी असलेले भाऊ निरपेक्ष भावनेने आदर्शवत कार्य करत राहिले. सहकार खात्यातील  नोकरी म्हणजे आमिषांची कमतरता नाही. मात्र, सहकार खात्यात अधिकारीपदावर असलेल्या भाऊंच्या मनात कधी मोह डोकावू शकला नाही. स्वच्छ चारित्र्य व प्रामाणिकपणा जपत आपल्या पारमार्थिक जनसेवेने इतरेजनांवरही आपला प्रभाव पाडत त्यांच्यात ईश्वरभक्तीची ओढ निर्माण केली. त्यांच्या पत्नी विजया थावरे सांगतात,  ‘ लग्नानंतर भाऊंनी मला सांगूनच ठेवलं होतं, घरी कोणीही कोणतीही वस्तू, पैसे आणून दिले तर घ्यायचे नाही.’ भाऊ दर एकादशीला पंढरपूरची वारी करायचे तर चतुर्थीला अक्कलकोटला श्री स्वामीर्थांच्या दर्शनाला जायचे. त्यासाठी ते पहाटे उठायचे. वारी करुन ते कार्यालयात कामावर हजर व्हायचे. अनेकदा कामात न जल्यास कार्यालयीन काकाज संपल्यावर संध्याकाळी पंढरपूर व अक्कलकोटला जायचे. परंतु त्यांनी कधी पंढरपूरची वारी व अक्कलकोटच्या स्वामीर्थांचे दर्शन चुकवले नाही.

प्रसिद्धी, पैसा, मानमतराब यापासून दूर राहत भाऊंनी पारमार्थिक जनसेवा केली. संत साहित्य घरोघरी पोहोचावा, संतविचार मनोमनी रुजावेत यासाठी भाऊंची सतत धडपड असायची. त्यांनी वृत्तपत्रांतून पाच हजारांहून अधिक चिंतनपर लेख लिहिले. 725 संतांच्या जीवनचरित्रावर लेखन केले. ज्ञानेश्व, सिद्धरामेश्व, वै. धुंडा महाराज देगलूरकर, गुंडा महाराज देगलूरकर, मामासाहेबा दांडेकर, मुकुंद महाराज जाटदेवळेकर, संतकवी महिपती महाराज यासह केवळ भागवत संप्रदायातीलच नव्हे तर अन्य संप्रदायातील संतांवरही त्यांनी लेखन केले. त्यांच्या लेखनाविषयी माजी आमदार पांडुरंग तथा तात्यासाहेबा डिंगरे एके ठिकाणी म्हणतात, ‘त्यांची दृष्टी इतकी विलक्षण आहे की त्यांना सर्वत्र संत व सर्व माणसांत सतत्व दिसते.’ तसेच त्यांनी  सकल संतगाथा दोन खंडात, महाराष्ट्राची कुलस्वामिनी आदी 12 ग्रंथांचे लेखन केले. आनंद संप्रदायातील संतत्रयीसह 59 संतचरित्रे आणि वृत्तपत्रांतून 750 हून अधिक संतांचे चरित्र लिहिले. श्री महिपती महाराज, श्री दासगणू महाराज, श्री समशेरपूरकर महाराजांचीच वाट भाऊंनी चोखाळली. तसेच भाऊंनी गोरखपूरच्या गीता प्रेससाठी  भागवताचे हिंदीतून मराठीत भाषांतर केले.त्यांचा सोलापूरसह राज्यभरातील अनेक पुरस्कारांनी गौरव झाला आहे. 
पारमार्थिक जनसेवा
ज्ञानेश्वरी, तुकाराम गाथा, नामदेव गाथा, दासबोध या ग्रंथांच्या सव्वालाख प्रतींचे अल्पदरात वितरण केले. श्री ज्ञानेश्वरी सप्तशताब्दीनिमित्त 1600 हून अधिक भाविकांच्या हातून ज्ञानेश्वरी लिहून घेऊन बारावेळा आळंदीला जाऊन समर्पित केली. 150 महिला भाविकांना नेऊन श्री क्षेत्र आळंदीमधील सुवर्ण पिंपळाला सुमारे साडेचार लाख प्रदक्षिणा घातल्या. ज्ञानेश्वरांच्या माऊलीने पतीने संन्यास घेतल्यानंतर याच सुवर्णपिंपळ वृक्षाला प्रदक्षिणा घातल्या होत्या आणि त्यानंतर पती गृहस्थाश्रमात परतले होते. 250 भक्तांना देहू येथे नेऊन 1100 तासतुकाराम, तुकारामजप करुन घेतला. 150 भक्तांकडून 450 तासरामकृष्ण हरिचा जप करुन घेतला. तसेच तुकाराम गाथाच्या 300 प्रती लिहून घेऊन देहू येथे तुकाराम महाराजांना समर्पित केल्या. तसेच संपूर्ण महाराष्ट्रासह कर्नाटक व आंध्रप्रदेशातही भाऊंनी सप्ताह, पारायण आदी अनेक उपक्रमांसाठी प्रवास केला. तेथील उपक्रमांना प्रोत्साहन दिले. गेल्या दोन वर्षांपासून प्रकृती अस्वास्थ्यामुळे भाऊंचे संत साहित्य लेखन थांबले असले तरी मनीचे भगवद् चिंतन कायम आहे.

माध्यमाची शक्ती अन् अहंकारी नेतृत्वाचा शेवट

  धारवाड… कर्नाटकातील ‘विद्येचे माहेरघर’ म्हणून ओळखले जाणारे शहर. पण याच शहराने एक काळ असा पाहिला, जेव्हा शिक्षण, संस्कृती आणि प्रगतीच्या ओळ...